• search

ಅಕ್ರಮ ಹಣವಲ್ಲ, ಸಕ್ರಮ ಎಂದ ಕರವೇ ಗೌಡ್ರು

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  TA Narayana Gowda's money seized in Bangalore
  ಬೆಂಗಳೂರು, ಏ.24 : ಕನ್ನಡಕ್ಕಾಗಿ ಸದಾ ಹೋರಾಟಕ್ಕೆ ಸಿದ್ಧವಾಗಿರುವ ಟಿಎ ನಾರಾಯಣಗೌಡ ಅವರ ಮನೆಯಲ್ಲಿ ಅಕ್ರಮ ಹಣ ಪತ್ತೆ ಎಂಬುದು ಹೆಡ್ ಲೈನ್ ಆಗಲೇ ಇಲ್ಲ. ಮಾಮೂಲಿ ಚುನಾವಣಾ ಅಕ್ರಮ ಪ್ರಕರಣವಾಗಿ ಮುಕ್ತಾಯ ಕಾಣುತ್ತಿದೆ.

  ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಇಬ್ಭಾಗವಾದ ಮೇಲೆ ಕರವೇ ಎಂದರೆ ನಾರಾಯಣ ಗೌಡರು ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಒಂದಾನೊಂದು ಕಾಲದಲ್ಲಿ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಬದಲಿಗೆ ಬೇರೆ ಭಾಷೆ ಹಾಡಿದರು ಎಂಬ ಕಾರಣಕ್ಕೆ ಸಿಟ್ಟಾಗಿ, ರೊಚ್ಚಿಗೊದ್ದಿದ್ದ ತರುಣ ಈಗ ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಸ್ಥಾನ ಮಾನದಲ್ಲಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

  ಜಯದೇವ ಪ್ರಸನ್ನ ಹಾಗೂ ನಾರಾಯಣಗೌಡರು ಪರಸ್ಪರ ಉಚ್ಚಾಟನೆ ಮಾಡಿಕೊಂಡು ತಮ್ಮ ಸಚ್ಚಾರಿತ್ರ್ಯದ ಪ್ರಮಾಣಪತ್ರ ನೀಡುವುದರ ಬದಲಿಗೆ ಮುಖ್ಯವಾಗಿ ನಾರಾಯಣ ಗೌಡರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗ(ಅದರ ಸತ್ಯಾಸತ್ಯತೆ ಮಾತು ಆಮೇಲೆ)ಪಡಿಸಲಿ ಎಂಬ ಕೂಗು ಎದ್ದಿದ್ದು ಅಲ್ಲೇ ಸತ್ತಿ ಹೋಗಿದೆ.

  ಕನ್ನಡ ಪರ ಹೋರಾಟಗಾರರಿಗೂ ಚುನಾವಣಾ ಆಕ್ರಮಕ್ಕೂ ಏನು ಸಂಬಂಧ. ಯಾವ ಪಕ್ಷಕ್ಕೆ ಸೇರಿದ್ದ ಹಣ ಎಂಬುದು ಬಹಿರಂಗವಾಗುವುದೇ? ಅನುಮಾನ. ಕರವೇ ಗೌಡ್ರು ತಮ್ಮ ಮನೆಯಲ್ಲಿ ಸಿಕ್ಕ ಹಣ ಸಾಲವಾಗಿ ತಂದಿದ್ದು ಎಂದಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವ ಸ್ಥಿತಿಗೆ ಬಂದಿದ್ದಾರೆಯೇ?

  ಪ್ರಕರಣದ ಬಗ್ಗೆ: ಕರವೇ ಅಧ್ಯಕ್ಷ ಟಿ.ಎ ನಾರಾಯಣ ಗೌಡರ ನಾಗರಭಾವಿ ಮನೆಯಲ್ಲಿ ಇದ್ದ ಸೂಕ್ತ ದಾಖಲೆಗಳಿಲ್ಲದ 42.50 ಲಕ್ಷ ರುಪಾಯಿ ನಗದು ಹಣವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಜ್ಞಾನಭಾರತಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ನಾರಾಯಣ ಗೌಡ ಅವರು ಬ್ಯಾಂಕ್ ಸಾಲ ಪಡೆದಿದ್ದಕ್ಕೆ ಸೂಕ್ತ ದಾಖಲೆಗಳು ಕಂಡು ಬಂದಿಲ್ಲ. ಈ ಬಗ್ಗೆ ಕರವೇ ಗೌಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚುನಾವಣಾ ಅಕ್ರಮ ಹಣವಾಗಿದ್ದರೆ ಯಾವ ಪಕ್ಷದ್ದು ಎಂದು ಹೇಳುವ ಧೈರ್ಯ ಯಾರೂ ಮಾಡಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Election officers and Bangalore police seized over Rs 42 Lakhs hard cash from Karave TA Narayana Gowda's house last day. Kannada activist TA Narayana Gowda defended by saying it was loan money borrowed from Bank.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more