ಆನೇಕಲ್ : ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆ

ಬುಧವಾರ ಮಧ್ಯಾಹ್ನ ಮುತ್ತುಕಟ್ಟಿ ಗ್ರಾಮದ ಮಾವಿನ ತೋಪಿಗೆ ತೆರಳಿದ ಮಹಿಳೆ ಯವತಿ ಬಿದ್ದಿರುವುದನ್ನು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಪರಿಚಯವಿರುವ ವ್ಯಕ್ತಿಗಳೊಡನೆ ಮಾವಿನ ತೋಪಿಗೆ ಬಂದಿರಬಹುದು ಅಥವ ಯಾರಾದರೂ ಅಪಹರಿಸಿ ಇಲ್ಲಿಗೆ ಕರೆತಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಯುವತಿಯ ಬಳಿ ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಿ ಬಂದಿರುವ ಬಿಲ್ ಪತ್ತೆಯಾಗಿದ್ದು, ಪೊಲೀಸರು ವಾಹನ ಚಾಲಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಯುವತಿಯನ್ನು ಅಪಹರಿಸಿ ತಂದು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲು ಯತ್ನಿಸಿರಬಹುದು ಎಂದು ಪೊಲೀಸರು ಪ್ರಾಥಮಿಕ ಮಾಹಿತಿಯಿಂದ ತಿಳಿಸಿದ್ದಾರೆ. ಯುವತಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಜೊತೆಗೆ ಬಂದವರು ಹಿಂದಿರುಗಿರಬಹುದು. ಯವತಿಯ ಬಳಿ ಬ್ಯಾಗ್, ಮೊಬೈಲ್, ಚಿನ್ನಾಭರಣ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಆದ್ದರಿಂದ ಯುವತಿಯ ಗುರುತು ಪತ್ತೆಯಾಗಿಲ್ಲ.
ನಿತ್ರಾಣವಾಗಿರುವ ಯುವತಿಗೆ ಪ್ರಜ್ಞೆ ಬಂದ ನಂತರ ಘಟನೆಯ ಬಗ್ಗೆ ಪೂರ್ಣ ಮಾಹಿತಿ ತಿಳಿದು ಬರುವ ಸಾಧ್ಯತೆ ಇದೆ. ನೈಸ್ ಸಂಸ್ಥೆಯ ಟೋಲ್ ಗೇಟ್ ಗೆ ಭೇಟಿ ನೀಡಿರುವ ಪೊಲೀಸರು ಯುವತಿ ಬಂದಿರಬಹುದಾದದ ವಾಹನ ಯಾವುದು ಎಂದು ಹುಟುಕಾಟ ನಡೆಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications