ವಿಠಲನ ಮೇಲೆ ಕಾರಣಿಕರಿಗೇಕೆ ಮುನಿಸು

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂಜನ್ ಗೌಡ ಆವರ ಪರ ಪ್ರಚಾರಕ್ಕಾಗಿ ಕಾರ್ಣಿಕ್ ಬೆಳ್ತಂಗಡಿಗೆ ಬಂದಿದ್ದರು. ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಮತ್ತು ವಿಧಾನ ಪರಿಷತ್‌ನಲ್ಲಿ ಶಿಕ್ಷಕ ಕ್ಷೇತ್ರ ಪ್ರತಿನಿಧಿಸುತ್ತಿರುವ ನೀವು ವಿಠ್ಠಲ ಮಲೆಕುಡಿಯನ ಬಂಧನದ ವಿಷಯದಲ್ಲಿ ಏಕೆ ಮಾತನಾಡಿಲ್ಲ ಎಂಬ ಪ್ರಶ್ನೆ ಕ್ಯಾ. ಗಣೇಶ್ ಕಾರ್ಣಿಕ್‌ರಿಗೆ ಕೇಳಲಾಗಿತ್ತು. ಇದಕ್ಕೆ ಅವರ ಖಾರವಾಗಿ ಪ್ರತಿಕ್ರಿಯೆ ನೀಡಿದ ಕಾರ್ಣಿಕ್ ತನಿಖೆಯ ಸಂದರ್ಭದಲ್ಲಿ ಆತ ನಕ್ಸಲರೊಂದಿಗೆ ಇದ್ದ ಎಂಬ ಬಗ್ಗೆ ಸಾಕಷ್ಟು ಪುರಾವೆ ಸಿಕ್ಕಿದೆ. ಆದ್ದರಿಂದ ಬಿಜೆಪಿ ಸರ್ಕಾರ ಆತನ ಬಂಧನದ ವಿಷಯದಲ್ಲಿ ತಪ್ಪು ಎಸಗಿಲ್ಲ.
ದೇಶ ದ್ರೋಹದ ಕೆಲಸ ಮಾಡಬಾರದು, ಹಾಗೆ ಮಾಡಿದರೆ ನಕ್ಸಲ್ ಸಂಘಟನೆ ಬೆಳೆಯುತ್ತದೆ. ಇಂತಹ ವಿಚಾರಗಳ ಬಗ್ಗೆ ಮುಂದೆ ಕೂಡ ಎಚ್ಚರವಹಿಸುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ಅವರು ತಿಳಿಸಿದರು. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಗಣೇಶ್ ಕಾರ್ಣಿಕ್, ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಪ್ರಕಟಿಸಿದರು.
ಮೊಯ್ಲಿ ಔಟ್ ಡೇಟೆಡ್: ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಅವರು ಕರಾವಳಿ ಭಾಗದಲ್ಲಷ್ಟೇ ಅಲ್ಲ ಎಲ್ಲೆಡೆ ತಿರಸ್ಕರಿಸಲ್ಪಟ ರಾಜಕಾರಣಿ. ಮಂಗಳೂರು ಕ್ಷೇತ್ರದಿಂದ ಎರಡು ಬಾರಿ ಸೋಲು ಕಂಡಿದ್ದು ಜನತೆ ಮರೆತ್ತಿಲ್ಲ. ಕರಾವಳಿ ಮೂಲದ ವ್ಯಕ್ತಿ ಎಂದು ಹೇಳಿಕೊಳ್ಳುವ ಮೊಯ್ಲಿ ಇಲ್ಲಿ ಜನರನ್ನು ಹಗರಣಕ್ಕಾಗಿ ಮಾತ್ರ ಬಳಸಿದ್ದಾರೆ. ಅಭಿವೃದ್ಧಿಗಾಗಿ ಅಲ್ಲ. ಮಾಜಿ ಮುಖ್ಯಮಂತ್ರಿ ಎಂದು ಹೇಳಿಕೊಳ್ಳಲು ಅರ್ಹರಲ್ಲ. ಅದು ಅವರಿಗೂ ಗೊತ್ತಿದೆ ಅದಕ್ಕೆ ನಾನು ಸಿಎಂ ಅಭ್ಯರ್ಥಿ ಅಲ್ಲ ಎಂದು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಾರ್ಣಿಕ್ ಹೇಳಿದ್ದಾರೆ.












Click it and Unblock the Notifications