'ಮುಖ್ಯಮಂತ್ರಿ ಆಗಲು ನನಗೆ ಸಾಮರ್ಥ್ಯ ಇಲ್ಲ'

ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್ ಜಂಟಿಯಾಗಿ ಏರ್ಪಡಿಸಿದ್ದ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರಣಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು
ನನಗೆ ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿರುವುದರಿಂದ ರಾಜ್ಯ ರಾಜಕಾರಣದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ಮುಖ್ಯಮಂತ್ರಿ ಆಕಾಂಕ್ಷಿಯೂ ನಾನಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಬಹಳಷ್ಟು ನಾಯಕರು ತಾವು ಸಿಎಂ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ. ಸಿಎಂ ಯಾರೆಂಬುದನ್ನು ನಂತರ ನಿರ್ಧರಿಸಲಾಗುವುದು ಎಂದರು.
ಕಾಂಗ್ರೆಸ್ ಅಲೆ ಎದ್ದಿದೆ: ಜನತೆ ಬಯಸುವಂತೆ ಆಡಳಿತ ನೀಡಲು ಕಾಂಗ್ರೆಸ್ ಮಾತ್ರ ಸಮರ್ಥವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಎಂದೂ ಕಾಣದ ಭ್ರಷ್ಟತನ, ಅರಾಜಕತೆ ತಲೆ ಎತ್ತಿದೆ. ಜನತೆ ಈಗ ಬದಲಾವಣೆ ಬಯಸಿದ್ದಾರೆ. ಬದಲಾವಣೆ ಕಾಂಗ್ರೆಸ್ ಪಕ್ಷ ತರಲಿದೆ ಎಂದು ಆಸ್ಕರ್ ಹೇಳಿದರು.
ಕರ್ನಾಟಕವನ್ನು ಶಿಕ್ಷಣ, ಆರೋಗ್ಯ, ವೈಜ್ಞಾನಿಕ, ಕೈಗಾರಿಕಾ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಯೋಜಿಸಿದೆ. ನಿಷ್ಠಾವಂತ ಕಾಂಗ್ರೆಸ್ ನಾಯಕರು ಎಂದೂ ಜನತೆಗೆ ಮೋಸ ಮಾಡುವುದಿಲ್ಲ. ರಾಹುಲ್ ಗಾಂಧಿ ಅವರ ಬಗ್ಗೆ ರಾಜ್ಯದ ಯುವ ಸಮುದಾಯ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಅನುಷ್ಠಾನಕ್ಕೆ ರಾಹುಲ್ ಗಾಂಧಿಯೇ ಕಾರಣ. ಪ್ರತಿ ಜಿಲ್ಲೆಯ ಉದ್ಯೋಗಿಗಳಿಗೆ ಇದು ವರದಾನವಾಗಲಿದೆ ಎಂದರು.
ಎಸ್ ಎಂ ಕೃಷ್ಣ ಅವರ ಮೇಲೆ ಅಪನಂಬಿಕೆ ಬೇಡ. ರಾಜಕೀಯ ರಂಗದಲ್ಲಿ ದೊಡ್ಡ ಹೆಸರು ಅವರು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿರುತ್ತದೆ ಎಂದರು. ಅನಿಲ್ ಲಾಡ್ ಹಾಗೂ ಸಂತೋಷ್ ಲಾಡ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ. ಆರೋಪ ಬಂದ ತಕ್ಷಣ ಟಿಕೆಟ್ ನಿರಾಕರಿಸಲು ಬರುವುದಿಲ್ಲ ಎಂದರು.












Click it and Unblock the Notifications