ಏಕ ಪಕ್ಷ ಅಧಿಕಾರ ಪಡೆಯಲ್ಲ : ಕೋಡಿ ಶ್ರೀಗಳು

ಬುಧವಾರ ಮಂಗಳೂರಿನ ಸುರತ್ಕಲ್ ಭೇಟಿ ನೀಡಿದ್ದ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿದರು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಹೇಳುವುದಿಲ್ಲ. ಆದರೆ, ಈ ಬಾರಿ ಅಚ್ಚರಿ ಚುನಾವಣಾ ಫಲಿತಾಂಶ ಬರಲಿದೆ. ಸಿದ್ದರಾಮಯ್ಯ, ಪರಮೇಶ್ವರ್, ಜಗದೀಶ್ ಶೆಟ್ಟರ್ ಅಥವಾ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಪಡೆಯಲಿದ್ದಾರೆ ಎಂದು ಹೇಳಿದರು.
ಸರ್ಕಾರ ರಚನೆಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಲಿವೆ. ಇಂತಹ ಗೊಂದಲದಿಂದ ರಚನೆಯಾದ ಸರ್ಕಾರ ಕೆಲವವೇ ದಿನಗಳಲ್ಲಿ ಬಿದ್ದು ಹೋಗಲಿದೆ. ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರಕಾರ ರಚಿಸುವುದು ಸುಲಭವಾಗುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.
ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಮತ್ತೆ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಯೂ ನಡೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಜಾತಿ ಜಾತಿಗಳ ನಡುವಿನ ವೈಷಮ್ಯ ಹೆಚ್ಚಾಗಿದ್ದು, ಇದು ಚುನಾವಣೆ ಮೇಲೆಯೂ ಪ್ರಭಾವ ಬೀರಲಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ವಾಮೀಜಿಯ ಭವಿಷ್ಯದ ಅಂಶಗಳು
* ಹಣ, ಆಮಿಷಗಳಿಗೆ ಬಲಿಯಾದ ಮತದಾರ ಸ್ಪಷ್ಟ ತೀರ್ಪು ನೀಡಲು ವಿಫಲನಾಗುತ್ತಾನೆ
* ವಿಜಯ ನಾಮ ಸಂವತ್ಸರದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿದೆ
* ದಕ್ಷಿಣ ಕರಾವಳಿ ತೀರಗಳು ಮತ್ತು ಮಲೆನಾಡು ಹೆಚ್ಚು ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಲಿವೆ
* ಈ ಸಂವತ್ಸರದಲ್ಲಿ ಹೆಚ್ಚು ಅನಾಹುತಗಳು, ಅಪಘಾತಗಳು, ಸಾವು ನೋವುಗಳು ಸಂಭವಿಸಲಿವೆ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications