ಚುನಾವಣಾ ಅಕ್ರಮ: ಕೆಜಿ ಗಟ್ಟಲೆ ಚಿನ್ನ ವಶ

ತುಮಕೂರು ತಹಶೀಲ್ದಾರ್ ಮಾರುತಿ ಪ್ರಸಾದ್ ಮತ್ತು ತಂಡ ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಜಾಸ್‌ಟೋಲ್ ಬಳಿ ಕೆ.ಎ.04-ಎಂ.ಡಿ.8006 ನಂಬರಿನ ಪೊರ್ಡ್ ಐಕಾನ್ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಸುಮಾರು ಎಂಟು ಕೆ.ಜಿ. ಚಿನ್ನ ಹಾಗೂ 12 ಲಕ್ಷ ರೂ. ಕಂಡು ಬಂದಿದೆ.
ಕಾರಿನಲ್ಲಿದ್ದ ವಸ್ತುಗಳಿಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಚಿನ್ನ ಮತ್ತು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದು, ಈ ಸಂಬಂಧ ನಟರಾಜ್ ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಶಪಡಿಸಿಕೊಂಡಿರುವ ಚಿನ್ನ ಮತ್ತು ಹಣ ಯಾರಿಗೆ ಸೇರಿದ್ದು, ಯಾವ ಉದ್ದೇಶಕ್ಕಾಗಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
*****
ಇನ್ನೊಂದು ಪ್ರಕರಣದಲ್ಲಿ ಬೆಳಗಾವಿ ಬಳಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಯಾವುದೇ ದಾಖಲೆಗಳಿಲ್ಲದ ಸುಮಾರು 1 ಕೋಟಿ ರೂಪಾಯಿ ಗಳನ್ನು ಜಿಲ್ಲೆಯ ನೇಸರ್ಗಿ ಚೆಕ್ ಪೋಸ್ಟ್‌ನಲ್ಲಿ ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚಿದ್ದು, ಹಣವನ್ನು ವಶಪಡಿಸಿಕೊಂಡಿದ್ದಾರೆ.ನಗರದ ಶಹಾಪುರ ಸಿಂಡಿಕೇಟ್ ಬ್ಯಾಂಕಿನ ಶಾಖೆಯಿಂದ ಒಂದು ಕೋಟಿ ರೂ.ಹಣಸನ್ನು ಡ್ರಾ ಮಾಡಿಕೊಳ್ಳಲಾಗಿದ್ದು, ಬೇರೆ ಬ್ಯಾಂಕಿಗೆ ವರ್ಗಾಯಿಸಲು ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಹಾಪುರದಿಂದ ಹೊರಟ ಕಾರನ್ನು ಇಲ್ಲಿನ ಬೈಲ ಹೊಂಗಲ ತಾಲೂಕಿನ ನೇಸರ್ಗಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಕಾರು ಹಾಗೂ ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಚುನಾವಣಾ ಅಕ್ರಮ: ಕೆಜಿ ಗಟ್ಟಲೆ ಚಿನ್ನ ವಶ kannada.oneindia.com/news/2013/04/1… #Tumkur
— Oneindia Kannada (@OneindiaKannada) April 17, 2013












Click it and Unblock the Notifications