ಸ್ಪೋಟದ ಹಿಂದೆ ಆರ್‌ಎಸ್ಎಸ್ ಕೈವಾಡ : ಎಚ್ ವಿಶ್ವನಾಥ್
ಬೆಂಗಳೂರು, ಏ 17: ಚುನಾವಣೆಯ ಹೊಸ್ತಿಲಲ್ಲಿ ನಗರದಲ್ಲಿ ನಡೆದ ಬಾಂಬ್ ಸ್ಫೋಟ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಸ್ಪೋಟದ ಹಿಂದೆ ಸಂಘ ಪರಿವಾರದ ಕೈವಾಡದ ಶಂಕೆ ಮೂಡುತ್ತಿದೆ ಎಂದು ಮೈಸೂರು ಸಂಸದ ಎಚ್ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಮಾಲೆಗಾಂವ್ ಸ್ಫೋಟದ ಮಾದರಿಯಲ್ಲೇ ಈ ಸ್ಫೋಟ ನಡೆದಿದೆ, ಅದೂ ಮಲ್ಲೇಶ್ವರಂ ಬಿಜೆಪಿ ಕಚೇರಿಯ ಸಮೀಪದಲ್ಲೇ ನಡೆದಿದ್ದು ಬಾಂಬ್ ಸ್ಪೋಟದ ಹಿಂದೆ RSS ಕೈವಾಡ ತಳ್ಳಿ ಹಾಕುವಂತಿಲ್ಲ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಅಂದರೆ ಮೇ ಐದನೇ ತಾರೀಕಿನೊಳಗೆ ಈ ಕೃತ್ಯದ ತನಿಖೆ ಪೂರ್ಣಗೊಳಿಸಿ ರಾಜ್ಯದ ಜನತೆಗೆ ವಸ್ತುಸ್ಥಿತಿಯ ಸತ್ಯಾಸತ್ಯತೆಯನ್ನು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ವಿಶ್ವನಾಥ್ ಸವಾಲೆಸೆದಿದ್ದಾರೆ.
ನಿಷ್ಪಕ್ಷಪಾತ ತನಿಖೆ ನಡೆದು ಉಗ್ರ ಚಟುವಟಿಕೆಗಳಿಗೆ ಪರೋಕ್ಷ ಸಹಕಾರ ನೀಡುತ್ತಿರುವ ಹಿಂದೂ ಮುಖವಾಡ ಧರಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಜ ಬಣ್ಣ ಬಯಲಾಗಲಿ ಎಂದು ವಿಶ್ವನಾಥ್ ಕಟು ಟೀಕಾಪ್ರಹಾರ ಮಾಡಿದ್ದಾರೆ.

ವಿಶ್ವನಾಥ್ ಟೀಕಾಪ್ರಹಾರ
ಬಿಜೆಪಿ ಸರಕಾರ ಜನರ ಮನಸಿನಿಂದ ಮಾಸಿ ಹೋಗಿದೆ. ಹೇಗಾದರೂ ಅಧಿಕಾರಲ್ಲಿ ಮುಂದುವರಿಯ ಬೇಕೆಂದು ಬಿಜೆಪಿ ತನ್ನ ಪರಿವಾರದ ಸಂಘಟನೆಗಳ ಇಂಥಹ ಕೃತ್ಯಗಳಿಗೆ ಮುಂದಾದರೆ ಅಶ್ಚರ್ಯ ಪಡಬೇಕಾಗಿಲ್ಲ.

ವಿಶ್ವನಾಥ್ ಟೀಕಾಪ್ರಹಾರ
ಅಮಾಯಕರ ಭಾವನೆ ಕೆರಳಿಸಿ ಅದರ ಜೊತೆ ಚೆಲ್ಲಾಟ ನಡೆಸಿ ಅನುಕಂಪದಿಂದ ಮತ ಪಡೆಯ ಬೇಕೆನ್ನುವ ಕೀಳು ರಾಜಕೀಯಕ್ಕೆ ಇಳಿಯಬೇಡಿ ಎಂದು ವಿಶ್ವನಾಥ್ ಬಿಜೆಪಿ ಸರಕಾರಕ್ಕೆ ಕಿವಿಮಾತನ್ನು ಹೇಳಿದ್ದಾರೆ.

RSS Vs ಕಾಂಗ್ರೆಸ್ : ಕೈ ನಾಯಕರ ಹೇಳಿಕೆಗಳ ಸ್ಯಾಂಪಲ್
02.11.10: ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಹಾಗೂ ಅದರ ಅಂಗ ಸಂಸ್ಥೆಗಳು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿವೆ ಎಂದು ಅಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಆರೋಪಿಸಿದ್ದರು.

RSS Vs ಕಾಂಗ್ರೆಸ್ : ಕೈ ನಾಯಕರ ಹೇಳಿಕೆಗಳ ಸ್ಯಾಂಪಲ್
20.01.13: ಬಿಜೆಪಿ ಮತ್ತು ಆರೆಸ್ಸೆಸ್ ಹಿಂದೂ ಉಗ್ರವಾದಿಗಳ ತರಬೇತಿ ಕೇಂದ್ರಗಳಾಗಿದ್ದು, ವ್ಯವಸ್ಥಿತವಾಗಿ 'ಕೇಸರಿ ಭಯೋತ್ಪಾದನೆ' ಹರಡಲಾಗುತ್ತಿದೆ ಎಂದು ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದರು.

RSS Vs ಕಾಂಗ್ರೆಸ್ : ಕೈ ನಾಯಕರ ಹೇಳಿಕೆಗಳ ಸ್ಯಾಂಪಲ್
08.01.13: ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ತಾಲಿಬಾನ್ ಸಂಘಟನೆ ನಡುವೆ ಅಂಥಾ ವ್ಯತ್ಯಾಸ ಏನಿಲ್ಲ. ಎರಡೂ ಕೂಡಾ ಮೂಲಭೂತವಾದಿಗಳ ಗುಂಪು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿ ಹಾರಿಸಿದ್ದರು..












Click it and Unblock the Notifications