ಬಿಜೆಪಿ ನಾಯಕರೇ ಟಾರ್ಗೆಟ್: ಡಿಸಿಎಂ ಅಶೋಕ್

ಚುನಾವಣೆ ನಿಮಿತ್ತ ಪಕ್ಷದ ರಾಷ್ಟ್ರೀಯ ವರಿಷ್ಠರೂ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆಡಳಿತಾರೂಢ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನೇ ಗುರಿಯಾಗಿಸಿಕೊಂಡು ಈ ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ಅಶೋಕ್ ಹೇಳಿದ್ದೇನು?:
* ಜನ ಈ ದಾಳಿಯಿಂದ ವಿಚಲಿತರಾಗಬಾರದು. ಗೃಹ ಸಚಿವನಾಗಿ ಧೈರ್ಯ ತುಂಬುವೆ. ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಲಾಗಿದೆ.
* ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ 11 ಮಂದಿ ಪೊಲೀಸರು ಸೇರಿದ್ದಾರೆ.
* ಪಾತಕಿಗಳು ಎಷ್ಟೇ ಬಲಾಢ್ಯರಾಗಿದ್ದರೂ ಅವರನ್ನು ಹಿಡಿಯಲಾಗುವುದು.
* ಯಾವ ಸಂಘಟನೆಯೂ ಹೊಣೆ ಹೊತ್ತಿಲ್ಲ.
* ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
IED ಬಳಕೆ: ಸುಧಾರಿತ ಸ್ಫೋಟ ತಂತ್ರಜ್ಞಾನ ಸಾಧನ (IED) ಬಳಕೆಯಾಗಿದೆ. ಸುಮಾರು ಅರ್ಧ ಕೆಜಿಯಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಔರಾದಕರ್ ಇದೀಗತಾನೆ ತಿಳಿಸಿದ್ದಾರೆ.












Click it and Unblock the Notifications