Get Updates
Get notified of breaking news, exclusive insights, and must-see stories!

ಉಮೇದುವಾರಿಕೆಗೆ ಕೊನೆ: ಇವರು ಇನ್ನೂ ಅತಂತ್ರರು

ಬೆಂಗಳೂರು, ಎ.17: ವಿಧಾನಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನ. ಆದರೂ ಪಕ್ಷಗಳಲ್ಲಿ, ಅಭ್ಯರ್ಥಿಗಳಲ್ಲಿ ಇನ್ನೂ ಗೊಂದಲ ಮುಗಿದಿಲ್ಲ.

ಕೆಲ ಪಕ್ಷಗಳು ಇತರೆ ಪಕ್ಷಗಳ ಲೆಕ್ಕಾಚಾರವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರೆ ಅಭ್ಯರ್ಥಿಗಳೂ ಸಹ ಕೊನೆಯ ಘಳಿಗೆಯಲ್ಲಿ ಯಾರು ಹಿತವರು ತಮಗೆ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಈ ಸಂಬಂಧ, ಪಕ್ಷ ಸಿದ್ಧಾಂತಗಳ ಜತೆಗಿನ ಸಂಬಂಧಕ್ಕೂ ಎಳ್ಳುನೀರು ಬೀಡುತ್ತಿರುವುದು ಆಘಾತಕಾರಿಯಾಗಿದೆ.

High drama expected:
ನಾಮಿನೇಷನ್ ಸಲ್ಲಿಕೆಗೆ ಇನ್ನು ಐದೇ ಗಂಟೆ ಬಾಕಿಯಿದ್ದು ಏನೆಲ್ಲಾ ಆಟ-ಕಳ್ಳಾಟಗಳು ನಡೆಯಲಿವೆ ಎಂಬುದು ತೀವ್ರ ಕುತೂಹಲಕಾರಿಯಾಗಿದೆ. ಕದ್ದು ಮುಚ್ಚಿ ಬಂಡಾಯ ಅಭ್ಯರ್ಥಿಗಳ ಕಣ್ಣಿಗೆ ಬೀಳದಂತೆ ಬಿ ಫಾರಂಗಳನ್ನು ಅಧಿಕೃತ ಅಭ್ಯರ್ಥಿಗಳಿಗೆ ಹಸ್ತಾಂತರಿಸಲಾಗುತ್ತಿದೆ.

ಕೆಲವರು ಯಾವುದೂ ಬೇಡವೆಂದು ಟಿಕೆಟ್ ಕೈತಪ್ಪಿದರೂ ಮನೆಯಲ್ಲೇ ಕುಳಿತಿದ್ದಾರೆ. ಟಿಕೆಟ್ ಸಿಕ್ಕಿದ ನಂತರವೂ ಕಣದಿಂದ ವಾಪಸಾಗಿ ಮತ್ತೆ ಕದನಕ್ಕೆ ಸಜ್ಜಾದವರೂ ಇದ್ದಾರೆ.

ಬಂಡಾಯವೆದ್ದವರು ಇಡೀ ಲೋಕಕ್ಕೇ ಕೇಳಿಸುವಂತೆ/ಕಾಣಿಸುವಂತೆ ರಾಜಾರೋಶವಾಗಿ ತಮ್ಮ ಹಿಂದಿನ ಪಕ್ಷಗಳನ್ನು ಹಳಿಯುತ್ತಾ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಯತ್ತ ದೌಡಾಯಿಸುತ್ತಿದ್ದಾರೆ. ಈ ಸಂಬಂಧ ತಾಜಾ ಸುದ್ದಿಯನ್ನು ನೀಡಲು ಒನ್ಇಂಡಿಯಾ ಸಜ್ಜಾಗಿದೆ.

ಮುಖ್ಯವಾಗಿ ಗಮನಿಸಬೇಕಾದ ಕ್ಷೇತ್ರಗಳು ಇವು: ಮಂಡ್ಯ, ಚಿಕ್ಕಬಳ್ಳಾಪುರ, ಬಳ್ಳಾರಿ, ಭದ್ರಾವತಿ, ದಾವಣಗೆರೆ, ಕಾಪು, ಹೆಬ್ಬಾಳ, ಬಸವನಗುಡಿ, ಕೆಆರ್ ಪುರಂ, ಚನ್ನಪಟ್ಟಣ. ಅಭ್ಯರ್ಥಿಗಳು ಯಾರು ಯಾರು?

ಬಸವನಗುಡಿ ಚಂದ್ರೋದಯ

ಬಸವನಗುಡಿ ಚಂದ್ರೋದಯ

ಬಸವನಗುಡಿ ಕ್ಷೇತ್ರದಲ್ಲಿ ಕಳೆದ ಬಾರಿ ಸೋತ ದಿನದಿಂದಲೂ ಮುಂದೆ ನಾನೇ ಅಭ್ಯರ್ಥಿ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ 'ಮೇಯರ್ ಚಂದ್ರು'ಗೆ ಕಾಂಗ್ರೆಸ್ ಪಕ್ಷ ಪ್ರೊ. ಬಿಕೆಸಿ ಮೂಲಕ ಪೆಟ್ಟು ಕೊಟ್ಟಿದೆ.
ಇದಕ್ಕೆ ತಿರುಗೇಟು ನೀಡಲು ಕೆ ಚಂದ್ರಶೇಖರ್ ಮೊದಲುಬ ಕೆಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಗುಸುಗುಸು ಎದ್ದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಪಕ್ಷೇತರರಾಗಿ ತಮ್ಮ ಅದೃಷ್ಟ ಪರೀಕ್ಷಿಸಲು ಇದೀಗ ಚುನಾವಣಾಧಿಕಾರಿ ಕಚೇರಿ ಎದುರು ನಿಂತಿದ್ದಾರೆ.

ಕೆ ಆರ್ ಪೇಟೆ ಮಾಸ್ತರರು ಎತ್ತ?

ಕೆ ಆರ್ ಪೇಟೆ ಮಾಸ್ತರರು ಎತ್ತ?

ನಿರೀಕ್ಷೆಯಂತೆ ಕೆಸಿ ನಾರಾಯಣಗೌಡರಿಗೆ ಕೆಆರ್. ಪೇಟೆಯಲ್ಲಿ ಜೆಡಿಎಸ್ ಟಿಕೆಟ್ ನೀಡಿದೆ. ಮಾಜಿ ಸ್ಪೀಕರ್ ಬಂಡಾಯದ ಬಾವುಟ ಹಾರಿಸುವ ಮೂಲಕ ಸೆಡ್ಡು ಹೊಡೆದಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ನಾರಾಯಣಗೌಡ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್ ವೆಂಕಟೇಗೌಡ ಜೆಡಿಎಸ್ ಘಟಕವನ್ನು ವಿಸರ್ಜಿಸಿ ವರಿಷ್ಠರಿಗೆ ತಿರುಗೇಟು ನೀಡಿದ್ದಾರೆ. ಕೃಷ್ಣ ಮತ್ತು ನಿಷ್ಠರು ಜೆಡಿಎಸ್ ವರಿಷ್ಠರ ಕ್ರಮವನ್ನು ಸವಾಲಾಗಿ ಸ್ವೀಕರಿಸಿದ್ದು, ಕೆಜೆಪಿ, ಬಿಎಸ್‌ಪಿ, ಸರ್ವೋದಯ ಕರ್ನಾಟಕ ಪಕ್ಷಗಳ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮಕಲು ತೀರ್ಮಾನಿಸಿದ್ದಾರೆ

 ಬಿಕೆ ಸಂಗಮೇಶ್ ಪಕ್ಷೇತರರಾಗಿ ಕಣಕ್ಕೆ

ಬಿಕೆ ಸಂಗಮೇಶ್ ಪಕ್ಷೇತರರಾಗಿ ಕಣಕ್ಕೆ

ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಕೇಂದ್ರದ ಮಾಜಿ ಸಚಿವ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತ ಸಿಎಂ ಇಬ್ರಾಹಿಂಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಹಾಲಿ ಶಾಸಕ ಬಿಕೆ ಸಂಗಮೇಶ್ ಇಬ್ರಾಹಿಂ ವಿರುದ್ಧ ಹರಿಹಾಯ್ದಿದ್ದಾರೆ.
ಅಲ್ಲದೆ, ಹಾಲಿ ಶಾಸಕ ಸಂಗಮೇಶ್‌ರಿಗೇ ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಆತ್ಮಹತ್ಯೆ ಪ್ರಹಸನ ಸಹಿತ ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಗಮೇಶ್ ಪಕ್ಷೇತರರಾಗಿ ಇಂದು ನಾಮಪತ್ರ ಸಲ್ಲಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಬಾಂಧವ ಸಿದ್ದು ಸಹ ರೇವಣ್ಣ 'ಕೈ'ಹಿಡಿಯಲಿಲ್ಲ

ಬಾಂಧವ ಸಿದ್ದು ಸಹ ರೇವಣ್ಣ 'ಕೈ'ಹಿಡಿಯಲಿಲ್ಲ

ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಎಚ್.ಎಂ.ರೇವಣ್ಣ ರವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ನೀಡದೆ ಹಿರಿಯ ಮುಖಂಡ ಸಿಕೆ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್‌ ರಿಗೆ ಟಿಕೆಟ್ ನೀಡಲಾಗಿದೆ.
ತಮಗೆ ಟಿಕೆಟ್ ನೀಡದ ಕಾರಣ ಅಭಿಮಾನಿಗಳ ಸಮ್ಮುಖದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದು, ತಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ. ತನಗೆ ಟಿಕೆಟ್ ನೀಡಲಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಬಗಲಿಗರ ಆಣತಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

 ಕಾಂಗೈ ಬಂಡಾಯ: ರಂಗೇರಿದ ರಾಜಾಜಿನಗರ

ಕಾಂಗೈ ಬಂಡಾಯ: ರಂಗೇರಿದ ರಾಜಾಜಿನಗರ

ಬೆಂಗಳೂರು ರಾಜಾಜಿನಗರ ವಿಧಾನಸಭಾ ಕ್ಷೇತ್ರ ನಿಜಕ್ಕೂ ರಂಗೇರಿದೆ. ಒಂದು ಕಡೆ ಸುರೇಶ್ ಕುಮಾರ್ ಮತ್ತೊಂದು ಕಡೆ ಶೋಭಾ ಕರಂದ್ಲಾಜೆ. ಈ ಮಧ್ಯೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಿ ಪದ್ಮಾವತಿ ಮಂಗಳವಾರ ಕಣಕ್ಕಿಳಿದಿದ್ದಾರೆ. ರಾಜಾಜಿನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಪಕ್ಷವನ್ನು ಸಂಘಟಿಸಲು ಶ್ರಮಪಟ್ಟಿದ್ದೇನೆ. ಆದರೂ, ನನ್ನ ಶ್ರಮ ನಿರ್ಲಕ್ಷಿಸಲಾಗಿದೆ.
ಹಿರಿಯ ನಾಯಕಿ ರಾಣಿ ಸತೀಶ್ ಸೇರಿದಂತೆ ಇತರೆ ಯಾವುದೇ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಿದ್ದರೆ ತಾನು ಖಂಡಿತವಾಗಿ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಹೊರಗಿನವರನ್ನು ತಂದು ಇಲ್ಲಿ ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ ಬೇಸತ್ತು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ಅವರು ತಿಳಿಸಿದ್ದಾರೆ.

 ಮಂಡ್ಯ ಜಿಲ್ಲೆ ಕಾಂಗ್ರೆಸ್ ಪಾಲಿಗೆ ಏನಾಗಲಿದೆ?

ಮಂಡ್ಯ ಜಿಲ್ಲೆ ಕಾಂಗ್ರೆಸ್ ಪಾಲಿಗೆ ಏನಾಗಲಿದೆ?

ರ‌ವೀಂದ್ರ ಶ್ರೀಕಂಠಯ್ಯಗೆ ಟಿಕೆಟ್‌ ಕೈತಪ್ಪಿದ್ದರಿಂದ ರೊಚ್ಚಿಗೆದ್ದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಹೆದ್ದಾರಿ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂಎಸ್ ಆತ್ಮಾನಂದ ಅವರ ನಿವಾಸಕ್ಕೆ ತೆರಳಿ ಅಂಬರೀಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವ ಹೈಕಮಾಂಡ್‌ ವಿರುದ್ಧವೂ ಕಿಡಿಕಾರಿದ ಕಾರ್ಯಕರ್ತರು, ಅಂಬರೀಶ್‌ ಹಾಗೂ ಎಸ್‌ಎಲ್ ಲಿಂಗರಾಜುಗೆ ನೀಡಿರುವ ಟಿಕೆಟ್‌ ವಾಪಸು ಪಡೆದು ತಕ್ಷಣ ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಆತ್ಮಾನಂದ ಹಾಗೂ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯಕ್ಕೆ ಹೈಕಮಾಂಡ್‌ ಮಣಿಯುತ್ತದಾ? ಅಥವಾ ಅಂಬರೀಷ್ ಅವರಿಗೇ ಮಂಡಿಯೂರುತ್ತದಾ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+