• search

ಚಿತ್ರಗಳು: ಬೆಂಗಳೂರು ಸ್ಫೋಟ, ಬೋಸ್ಟನ್ ಬಾಂಬ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಏ.17: ಬೋಸ್ಟನ್ ನಲ್ಲಿ ಸಂಭ್ರಮ ಹಾಳು ಮಾಡಿದ ಬಾಂಬ್ ಸ್ಫೋಟ, ಇಂಡಿಯನ್ ಪ್ರಿಮಿಯರ್ ಲೀಗ್ ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಂದ್ಯ ಟಾರ್ಗೆಟ್ ಆಗಿತ್ತೆ? ಕರ್ನಾಟಕದ ಗೃಹ ಸಚಿವ ಆರ್ ಅಶೋಕ್ ಅವರು ದಾಳಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಬಿಜೆಪಿ ನಾಯಕರೇ ದಾಳಿ ಟಾರ್ಗೆಟ್ ಎಂದಿದ್ದಾರೆ.

  ಏ.17, 2010ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸರಣಿ ಸ್ಫೋಟ ಸಂಭವಿಸಿದ ಕರಾಳ ನೆನಪು ಮಾಸುವ ಮುನ್ನವೇ ಅದೇ ದಿನಾಂಕದಂದು ಏ.17, 2013 ರಂದು ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಸಂಭವಿಸಿರುವುದು ಕಾಕತಾಳೀಯವೋ ಪೂರ್ವ ನಿಯೋಜಿತವೋ ಗೊತ್ತಿಲ್ಲ.

  ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಬೋಸ್ಟನ್ ಬಾಂಬ್ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಸಾರ್ವಜನಿಕ ಕ್ರೀಡಾಕೂಟಕ್ಕೆ ಬಾಂಬ್ ಎಸೆದಿದ್ದು ವಿಶ್ವದ ದೊಡ್ಡಣ್ಣನಿಗೆ ಎಚ್ಚರಿಕೆ ನೀಡಿದೆ. ಅದೇ ರೀತಿ ಇಲ್ಲೂ ಕೂಡಾ ಚುನಾವಣೆ ಕಾವು ಏರುತ್ತಿದ್ದಂತೆ ಬಾಂಬ್ ತಣ್ಣಗೆ ಹೊಗೆಯಾಡಿದೆ. ಅದೃಷ್ಟವಶಾತ್ ಗಾಯಗೊಂಡಿರುವ 16ಕ್ಕೂ ಹೆಚ್ಚು ಜನ ಪ್ರಾಣಾಪಯದಿಂದ ಪಾರಾಗಿದ್ದಾರೆ. ಬಾಂಬ್ ಸ್ಫೋಟದ ಚಿತ್ರಗಳು ನಿಮ್ಮ ಮುಂದೆ

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಮೊದಲಿಗೆ ಕಾರಿನಲ್ಲಿರುವ ಗ್ಯಾಸ್ ಸಿಲೆಂಡರ್ ಸ್ಫೋಟ ಎನ್ನಲಾಗಿತ್ತು. ನಂತರ ಇದು ತಮಿಳುನಾಡು ನೋಂದಣಿ ಇರುವ ಬೈಕ್ ಬಳಸಿ ಸ್ಫೋಟ ಮಾಡಿರುವುದು ದೃಢಪಟ್ಟಿದೆ. ಈಗ ಇಐಡಿ ಬಳಸಿ ರಿಮೋಟ್ ನಿಂದ ಸ್ಫೋಟಿಸಿರುವ ಮಾಹಿತಿ ಹೊರಬಿದ್ದಿದೆ.

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಬೆಂಗಳೂರಿನ ಹಳೆಯ ಬಡಾವಣೆ ಮಲ್ಲೇಶ್ವರಂ ಯನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಕಚೇರಿ ಟಾರ್ಗೆಟ್ ಎಂದು ಮೇಲ್ನೋಟಕ್ಕೆ ದೃಢಪಟ್ಟಿದ್ದರೂ ಪೊಲೀಸರು ಟಾರ್ಗೆಟ್ ಆಗಿದ್ದು 11 ಜನ ಕೆಎಸ್ ಆರ್ ಪಿ ಅಧಿಕಾರಿಗಳು ಆಸ್ಪತ್ರೆ ಸೇರಿದ್ದಾರೆ.

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಶಕೀಲ್ ಅಹ್ಮದ್ ಅವರು ಕೆಟ್ಟದಾಗಿ ಟ್ವೀಟ್ ಮಾಡಿ ಬಿಜೆಪಿಗೆ ಇದು ವರದಾನವಾಗಲಿದೆ ಎಂದಿದ್ದಾರೆ. ಶಕೀಲ್ ರಂತೆ ಇನ್ನು ಕೆಲವರು ಸ್ಫೋಟದ ಬಗ್ಗೆ ಅಪಹಾಸ್ಯ ಮಾಡಿ ರಾಜಕೀಯ ಲಾಭದ ಬಗ್ಗೆ ಮಾತನಾಡಿರುವುದು ತೀವ್ರ ಖಂಡನೆ ಒಳಗಾಗಿದೆ. ಹೆಚ್ಚಿನ ವಿವರ ಇಲ್ಲಿ ಓದಿ

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ

  ಸ್ವತಃ ವೈದ್ಯರಾಗಿರುವ ಸ್ಥಳೀಯ ಬಿಜೆಪಿ ಶಾಸಕ ಅಶ್ವಥನಾರಾಯಣ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಗಮನಿಸಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿರುವ ಗಾಯಾಳುಗಳ ವಿಚಾರಣೆಗೆ ತೆರಳಿದಿದ್ದಾರೆ. ಚಿತ್ರದ ಮೇಲ್ಭಾಗದಲ್ಲಿ ಸ್ಫೋಟಕ್ಕೆ ಬಳಸಿದ ಬೈಕ್ ನೋಡಬಹುದು.

  ಬೋಸ್ಟನ್ ದುರಂತ ದೃಶ್ಯ

  ಬೋಸ್ಟನ್ ದುರಂತ ದೃಶ್ಯ

  ಬಿಗ್ ಪ್ರೀಚ್ ರನ್ನಿಂಗ್ ಕಂಯ ಕರೆನ್ ಕಾಯ್ ಅವರು ಬೋಸ್ಟನ್ ದುರಂತ ಸಂತ್ರಸ್ತರನು ಸಂತೈಸುತ್ತಿದ್ದಾರೆ.

  ಪಾಕಿಸ್ತಾನ ದುರಂತ ದೃಶ್ಯ

  ಪಾಕಿಸ್ತಾನ ದುರಂತ ದೃಶ್ಯ

  ಪೇಶಾವರ್: ಪಾಕಿಸ್ತಾನದಲ್ಲೂ ಈಗ ಚುನಾವಣಾ ವೈಷಮ್ಯ ಹೆಚ್ಚುತ್ತಿದ್ದು, ಆತ್ಮಾಹುತಿ ದಳ ಕಾರು ದಾಳಿ ನಡೆಸಿ ತಾಲಿಬಾನ್ ವಿರೋಧಿ ಪಕ್ಷಗಳ ವಿರುದ್ಧ ಬಾಂಬ್ ದಾಳಿ ನಡೆಸಲಾಗಿದೆ.

  ಬೋಸ್ಟನ್ ದುರಂತ ದೃಶ್ಯ

  ಬೋಸ್ಟನ್ ದುರಂತ ದೃಶ್ಯ

  ಬೋಸ್ಟನ್ ಮ್ಯಾರಥ್ಯಾನ್ ಬಾಂಬ್ ಸ್ಫೋಟದಲ್ಲಿ ಜೀವ ಕಳೆದುಕೊಂಡ 8 ವರ್ಷದ ಬಾಲಕ ಮಾರ್ಟಿನ್ ಸ್ಮರಣೆಯಲ್ಲಿ ಮೊಂಬತ್ತಿ ಹಿಡಿದು ಮೆರವಣಿಗೆ

  ಬೆಂಗಳೂರು ಬಾಂಬ್ ಸ್ಫೋಟ

  ಬೆಂಗಳೂರು ಬಾಂಬ್ ಸ್ಫೋಟ

  ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ಕಾರಿಗೆ ಬೆಂಕಿ ಹತ್ತಿಕೊಂಡಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಚಿತ್ರಿಸಿ ಕಳಿಸಿದ್ದಾರೆ.

  ಬೆಂಗಳೂರು ಬಾಂಬ್ ಸ್ಫೋಟ

  ಬೆಂಗಳೂರು ಬಾಂಬ್ ಸ್ಫೋಟ

  ರಾಜಕೀಯ ಮುಖಂಡರಿಗೆ ರಕ್ಷಣೆ ನೀಡಲು ಬಂದು ಗಾಯಗೊಂಡ ಕೆಎಸ್ ಆರ್ ಪಿ ಪೊಲೀಸರು ಇದ್ದ ವಾಹನ ಜಖಂಗೊಂಡಿದೆ. ಹಿರಿಯ ಅಧಿಕಾರಿಗಳು ಹೆಚ್ಚಿನ ನೆರವಿಗಾಗಿ ಫೋನ್ ಕರೆಯಲ್ಲಿ ವ್ಯಸ್ತರಾಗಿದ್ದಾರೆ.

  ಬೆಂಗಳೂರು ಬಾಂಬ್ ಸ್ಫೋಟ

  ಬೆಂಗಳೂರು ಬಾಂಬ್ ಸ್ಫೋಟ

  ಇದು ಸ್ಫೋಟಕ್ಕೆ ಬಳಸಿದ ಬೈಕ್ ಅಲ್ಲ. ಕೆಎಸ್ ಆರ್ ಪಿ ವಾಹನದ ಬಳಿ ನಿಲ್ಲಿಸಲಾಗಿದ್ದ ಮತ್ತೊಂದು ವಾಹನ ಕೂಡಾ ಜಖಂ ಆಗಿದೆ.

  ಬೋಸ್ಟನ್ ದುರಂತ

  ಬೋಸ್ಟನ್ ದುರಂತ

  ಬೋಸ್ಟನ್ ದುರಂತದ ನಂತರ ತನಿಖಾ ಸಂಸ್ಥೆ ಎಫ್ ಬಿಐ ಕೈಗೆ ಸಿಕ್ಕ ದ್ವಂಸಗೊಂಡ ಫ್ರೆಶರ್ ಕುಕ್ಕರ್

  ಬೆಂಗಳೂರು ಸ್ಪೋಟ ಗಾಯಾಳು

  ಬೆಂಗಳೂರು ಸ್ಪೋಟ ಗಾಯಾಳು

  ಬಾಂಬ್ ಸ್ಫೋಟ ಘಟನಾ ಸ್ಥಳಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ಅರವಿಂದ ಲಿಂಬಾವಳಿ ಭೇಟಿ ನೀಡಿದ್ದಾರೆ

  ಬೆಂಗಳೂರು ಸ್ಪೋಟ ಗಾಯಾಳು

  ಬೆಂಗಳೂರು ಸ್ಪೋಟ ಗಾಯಾಳು

  ಎಲ್ಲಾ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ

  ಬೆಂಗಳೂರು ಸ್ಪೋಟ

  ಬೆಂಗಳೂರು ಸ್ಪೋಟ

  ರಾಜ್ಯದ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಕಮ್ಯಾಂಡ್ ಪಡೆ ನಿಯೋಜಿಸಲಾಗಿದೆ

  ಬೆಂಗಳೂರು ಸ್ಫೋಟ ಚಿತ್ರ

  ಬೆಂಗಳೂರು ಸ್ಫೋಟ ಚಿತ್ರ

  ಮಲ್ಲೇಶ್ವರಂ ಬಳಿ ಸ್ಫೋಟಗೊಂಡು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬೈಕಿನ ಅವಶೇಷ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  News stories in Pics Apr 17, 2013: From Boston to Bangalore Bomb Blast shocks public DGP and Home Minister R Ashok confirms all all 16 injured are out of danger in Malleswaram blast Here the few photos of blast

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more