28ರ ಮೇಲೆ ಕಣ್ಣು: ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ

ಬೆಂಗಳೂರು, ಏ.15: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ನೇತೃತ್ವದ ಜಾತ್ಯಾತೀತ ಜನತಾದಳ ಪಕ್ಷವು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಸೀಮಿತವಾದ ಪ್ರಣಾಳಿಕೆಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ.

ಬೆಂಗಳೂರಿನ ಪ್ರಜ್ಞಾವಂತ ಮತದಾರರು ಅದರಲ್ಲೂ ಐಟಿ-ಬಿಟಿ ಮಂದಿಯತ್ತಲೂ ಜೆಡಿಎಸ್ ಗಾಳ ಬೀಸಿದೆ. ಬೆಂಗಳೂರಿನ ಹಾಲಿ ಚಿತ್ರದ ಬಗ್ಗೆ ಖೇದ, ಆತಂಕ ವ್ಯಕ್ತಪಡಿಸಿರುವ ಜೆಡಿಎಸ್, ಇಲ್ಲಿನ ರಸ್ತೆಗಳು ಸೂರ್ಯ, ಚಂದ್ರನ ಮೇಲಿನ ಪ್ರದೇಶದಂತೆ ಭಯಾನಕವಾಗಿದೆ ಎಂದಿದೆ. ಈ ಹಿನ್ನೆಲೆಯಲ್ಲಿ, ಭರವಸೆಗಳ ಮಹಾಪೂರವನ್ನೇ ಹರಿಸಿರುವ ಪಕ್ಷವು ನಗರದ ಜನತೆಯ ಕೈಗೆ ಚಂದ್ರನನ್ನೇ ತಂದುಕೊಡುವುದಾಗಿ ಹೇಳಿದೆ.

deve-gowda-jds-sets-eye-on-28-seats-in-bangalore

200 ಚದರ ಕಿಮೀ ವ್ಯಾಪ್ತಿಯ ಹಳೆಯ ಬೆಂಗಳೂರನ್ನು 800 ಕಿಮೀ ವ್ಯಾಪ್ತಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿದ್ದು ತನ್ನ ಸಾಧನೆ ಎಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಾ ತಿಳಿಸಿದ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಮೆಟ್ರೋ ರೈಲು ಯೀಜನೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿರುವುದು, ಬಿಎಂಟಿಸಿ ಯಿಂದ ವೋಲ್ವೋ ಬಸ್ಸುಗಳನ್ನು ಸಂಚಾರಕ್ಕೆ ಬಿಟ್ಟಿರುವುದು ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ.

ಲೋಕಾಯುಕ್ತ ಸಂಸ್ಥೆಯನ್ನು ಸದೃಢಗೊಳಿಸುವುದಾಗಿ ಭರವಸೆ ನೀಡಿರುವ ಕುಮಾರಸ್ವಾಮಿ, ಮೆಟ್ರೋಪಾಲಿಟನ್ ಯೋಜನಾ ಸಮಿತಿ ರಚನೆ, ಸ್ವಚ್ಚ ನಗರಕ್ಕಾಗಿ ಬೆಂಗಳೂರು ತ್ಯಾಜ್ಯ ನಿರ್ವಹಣಾ ಪ್ರಾಧಿಕಾರ ರಚಸುವುದಾಗಿ ಘೋಷಿಸಿದ್ದಾರೆ.

ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು Bangalore Arterial Road Development Authority ಸ್ಥಾಪಿಸುವುದಾಗಿಯೂ ಅವರು ಪ್ರಕಟಿದ್ದಾರೆ. ಜತೆಗೆ, ಮೆಟ್ರೋ ರೈಲು ಮತ್ತು ಬಿಎಂಟಿಸಿ ಸೇವೆಯನ್ನು ಐಕ್ಯಗೊಳಿಸಲಾಗುವುದು. ಬಳಸಿದ ನೀರನ್ನು ಮರುಸಂಸ್ಕರಿಸಿ ಬಳಸುವ ಬಗ್ಗೆಯೂ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ, ಪ್ರತಿ ವರ್ಷ ಕನಿಷ್ಠ 35,000 ನಿವೇಶನಗಳನ್ನು ಹಂಚಿಕೆ ಮಾಡುವುದಾಗಿಯೂ ಜೆಡಿಎಸ್ ತಿಳಿಸಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಆದ್ಯ ಗಮನಹರಿಸಿರುವ ಪಕ್ಷವು ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೇದೆಗಳನ್ನು ಮತ್ತು ಸಬ್ ಇನ್ಸ್ ಪೆಕ್ಟರ್ ಗಳನ್ನು ನೇಮಿಸಿಕೊಳ್ಳುವುದಾಗಿಯೂ ಹೇಳಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+