ರಾಜ್ಯದಲ್ಲಿ ಮತ ಕೇಳಲಿದ್ದಾರೆ ಸೋನಿಯಾ, ರಾಹುಲ್

ಬೆಂಗಳೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರಾಷ್ಟ್ರೀಯ ನಾಯಕರ ದಿನಾಂಕಗಳನ್ನು ಘೋಷಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಏ.30ರ ನಂತರ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಸೋನಿಯಾ ಮತ್ತು ರಾಹುಲ್ ಗಾಂಧಿ ಮೂರುದಿನಗಳ ಕಾಲ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಏ.29ರಂದು ಮಾತ್ರ ರಾಜ್ಯದ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ತಾಲೂಕು ಮತ್ತು ಹಳ್ಳಿಗಳಿಗೆ ನಾಯಕರು ಭೇಟಿ ನೀಡುವುದಿಲ್ಲ. ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಚಾರದ ವೇಳಾಪಟ್ಟಿ ಕೆಳಗಿನಂತಿದೆ
ಸೋನಿಯಾ ಗಾಂಧಿ
* ಏಪ್ರಿಲ್ 26 ಮಂಗಳೂರು ಮತ್ತು ಚಿಕ್ಕಮಗಳೂರು
* ಏ.30ರಂದು ಗುಲ್ಬರ್ಗಾ, ಬೆಳಗಾವಿ
* ಮೇ 2 ಮೈಸೂರು ಬೆಂಗಳೂರು
ರಾಹುಲ್ ಗಾಂಧಿ
* ಏ.23 ಬಳ್ಳಾರಿ, ರಾಯಚೂರು, ಬಿಜಾಪುರ
* ಏ.28 ಕೋಲಾರ, ತುಮಕೂರು, ಹಾವೇರಿ
* ಮೇ 1 ಮಂಡ್ಯ, ಹಾಸನ, ಶಿವಮೊಗ್ಗ
ಮನಮೋಹನ್ ಸಿಂಗ್
* ಮೇ 29ರಂದು ಹುಬ್ಬಳ್ಳಿ ಮತ್ತು ಬೆಂಗಳೂರು
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications