ಬಿಜೆಪಿಯಲ್ಲೇ ಉಳಿದ ಆನಂದ, ಭಾರಿ ಅಕ್ರಮ ಹಣ ವಶ

nelamangala-tahsildar-confiscates-1-point-66-crore-sumo
ನೆಲಮಂಗಲ, ಏ.13: ನೆಲಮಂಗಲ ತಹಸೀಲ್ದಾರ್ ಅನಿಲ್ ಕುಮಾರ್ ಭರ್ಜರಿ ಬೇಟೆಯಾಡಿದ್ದಾರೆ. ಏನಪಾ ಅಂದರೆ 2 ಟಾಟಾ ಸೊಮೋ ವಾಹನಗಳಲ್ಲಿ ಸಾಗಿಸುತ್ತಿದ್ದ 1.66 ಕೋಟಿ ರೂಪಾಯಿಯನ್ನು ವಾಹನಗಳ ಸಮೇತ ಜಾಸ್‌ ಟೋಲ್ ಬಳಿ ಸ್ವಾಧೀನಪಡಿಸಿಕೊಂಡಿದ್ದಾರೆ. ಜತೆಗೆ ವಾಹನಗಳಲ್ಲಿದ್ದ 8 ಮಂದಿಯನ್ನೂ ತಾಲೂಕು ಪೊಲೀಸರು ಇಂದು ಬಂಧಿಸಿದ್ದಾರೆ.

ಒಂದು ವಾಹನದಲ್ಲಿ 1 ಕೋಟಿ ರೂ. ಮತ್ತೊಂದು ವಾಹನದಲ್ಲಿ 66 ಲಕ್ಷ ರೂ. ಸಾಗಿಸಲಾಗುತ್ತಿತ್ತು. ನೆಲಮಂಗಲ ಮತ್ತು ತುಮಕೂರಿನಲ್ಲಿರುವ ಎಚ್ ಡಿಎಫ್ ಸಿ ಬ್ಯಾಂಕ್ ಶಾಖೆಗಳಿಗೆ ಭರ್ತಿ ಮಾಡಲು ಈ ಭಾರಿ ಮೊತ್ತವನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಬಂಧಿತರು ತಿಳಿಸಿದ್ದಾರೆ.

ಆದರೆ ಪೊಲೀಸರು ವಿಚಾರಿಸಲಾಗಿ ಈ ಮೊತ್ತ ಎಚ್ ಡಿಎಫ್ ಸಿ ಬ್ಯಾಂಕಿಗೆ ಸೇರಿದ ಹಣ ಅಲ್ಲ ಎಂಬುದಾಗಿ ತಿಳಿದುಬಂದಿದೆ. ಇತರೆ ಸಮರ್ಪಕ ದಾಖಲೆಗಳೂ ಇಲ್ಲವಾಗಿದೆ. ಚುನಾವಣೆ ಅಕ್ರಮವೆಸಗಲು ಈ ಹಣ ಬಳಕೆಯಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆದಿದೆ.

ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ದಾಖಲೆಗಳಿಲ್ಲದೆ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ.

ತಾಜಾ ಬೆಳವಣಿಗೆಗಳು:
ಬಿಜೆಪಿಯಲ್ಲೇ ಉಳಿದ ಆನಂದ: ಹೊಸಪೇಟೆ ವಿಜಯನಗರ ಶಾಸಕ ಆನಂದ್ ಸಿಂಗ್ ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆನಂದ್ ಮುಂದಾಗಿದ್ದರು.

ಗಾಂಧಿನಗರದಲ್ಲಿ ಬಂಡಾಯ: ದಿನೇಶ್ ಗುಂಡೂರಾವ್ ವಿರುದ್ಧ ಬಂಡಾಯ. ಇದರೊಂದಿಗೆ ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಮಲ್ಲೇಶ್ ಅವರು ಮೊದಲ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಕಾರ್ಪೊರೇಟ್ ಮಲ್ಲೇಶ್ ಕಳೆದ ಚುನಾವಣೆಯಲ್ಲೇ ದಿನೇಶ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+