ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ವಾಗ್ದಾನ... ತೀರ್ಮಾನ ನಿಮ್ಮದು : ಜೆಡಿಎಸ್ ಪ್ರಣಾಳಿಕೆ

By Prasad
|
Google Oneindia Kannada News

ಬೆಂಗಳೂರು, ಏ. 13 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷ ಬಹುಮತ ಪಡೆದರೆ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಎಲ್ಲ ವಾಗ್ದಾನಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜೆಡಿಎಸ್ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ 3.30ಕ್ಕೆ 'ನಮ್ಮ ವಾಗ್ದಾನ ತೀರ್ಮಾನ ನಿಮ್ಮದು' ಶೀರ್ಷಿಕೆಯಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಪತ್ರಕರ್ತರನ್ನುದ್ದೇಶಿಸಿ ದೇವೇಗೌಡ ಅವರು ಮಾತನಾಡಿದರು.

ಜನಪರ ನಾಯಕತ್ವವಿರುವ, ಪಾರದರ್ಶಕ ಆಡಳಿತ ನೀಡುವ, ಆರ್ಥಿಕ ಸದೃಢತೆಯನ್ನು ತರುವ ವಾಗ್ದಾನ ಜೆಡಿಎಸ್ ನೀಡುತ್ತದೆ ಎಂದು ಹೇಳಿದ ಅವರು ಭ್ರಷ್ಟಾಚಾರವನ್ನು ಬುಡದಿಂದಲೇ ಕಿತ್ತುಹಾಕುವುದಾಗಿ ಮತ್ತು ಲೋಕಾಯುಕ್ತ ವ್ಯವಸ್ಥೆಯನ್ನು ಬಲಪಡಿಸುವುದಾಗಿ ಹೇಳಿದರು.

ಬೆಂಗಳೂರಿಗೆ, ಇತರ ನಗರಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.

ಪ್ರಣಾಳಿಕೆಯ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ಎಲ್ಲಾ ರೈತರ, ನೇಕಾರರ, ಮೀನುಗಾರರ ಮತ್ತು ಗ್ರಾಮೀಣ ಕುಶಲಕರ್ಮಿಗಳ ಸಂಪೂರ್ಣ ಸಾಲ ಮುನ್ನಾ.
* ರೈತರಿಗೆ ರಸಗೊಬ್ಬರ ಸಬ್ಸಿಡಿ.
* ಬಿತ್ತನೆ ಬೀಜ ಮತ್ತು ಟ್ರ್ಯಾಕ್ಟರ್‌ಗಳಿಗೆ ಶೇಕಡಾ 75ರಷ್ಟು ಸಬ್ಸಿಡಿ.
* ರೈತರು ಮತ್ತು ಕೃಷಿ ಕಾರ್ಮಿಕರ ಕಲ್ಪವೃಕ್ಷನಿಧಿ ಅಡಿಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊಳ್ಳಲು ಪ್ರತಿ ಕುಟಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿ ಪ್ರತಿ ತಿಂಗಳು 500ರೂ ಧನ ಸಹಾಯ.
* ರೈತರು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿಲಾಗುವುದು. ಕನಿಷ್ಟ ಬೆಂಬಲ ಬೆಲೆ ಮಳಿಗೆಗಳನ್ನು ತೆರೆಯಲಾಗುವುದು.
* ರೈತರು ಬೆಳೆದ ದವಸ ಮತ್ತು ಧಾನ್ಯಗಳಿಗೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್‌ಗೆ ರೂ. 150 ಮತ್ತು 500 ಪ್ರೋತ್ಸಾಹ ಧನ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 65 ಸಾವಿರ ಕೋಟಿ ಹಣ ಮೀಸಲಿಟ್ಟು, ಸುಮಾರು ಹತ್ತು ಲಕ್ಷ ಎಕರೆ ಭೂಮಿಗೆ ನೀರಾವರಿ.
* ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರಾವರಿ ಯೋಜನೆ.
* ಕಾವೇರಿ ನದಿ ನೀರಿನ ಉತ್ತಮ ಬಳೆಕೆಗೆ ಸ್ಕಾಡಾ ಯೋಜನೆ ಪ್ರಾರಂಭ.
* ಪಶ್ಚಿಮ ಘಟ್ಟಗಳಲ್ಲಿ ಹರಿಯುವ ನದಿಗಳ ನೀರು ತುಮಕೂರು, ಹಾಸನ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ.
* ಕೃಷ್ಣಾ ಮೇಲ್ದಂಡೆ 2ನೇ ಹಂತದ ನೀರಾವರಿ ಯೋಜನೆ ಶೀಘ್ರ ಅನುಷ್ಠಾನ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ಕಾವೇರಿ ನದಿ ನೀರಿನ ವಿಷಯದಲ್ಲಿ ನಿರಂತರ ಹೋರಾಟ.
* ರೈತರಿಗೆ, ಕೃಷಿಕಾರ್ಮಿಕರಿಗೆ, ಮೀನುಗಾರರಿಗೆ, ನೇಕಾರರಿಗೆ ಮತ್ತು ಗ್ರಾಮೀಣ ಕುಶಲಕರ್ಮಿಗಳಿಗೆ ಪಿಂಚಣಿ ವ್ಯವಸ್ಥೆ.
* ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಒಂದು ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ.
* ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆ ಮತ್ತು ಮಗುವಿನ ಪೌಷ್ಟಿಕತೆಗೆ ಪ್ರತಿ ತಿಂಗಳು ರೂ.5 ಸಾವಿರದಂತೆ 12 ತಿಂಗಳು ನೀಡಲಾಗುವುದು.
* ವಿಧವಾ ವೇತನ ಮತ್ತು ವೃದ್ದಾಪ್ಯವೇತನವನ್ನು ರೂ.1500 ಸಾವಿರಗಳಿಗೆ ಹೆಚ್ಚಳ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* 70 ವರ್ಷ ಮೇಲ್ಪಟ್ಟ ವೃದ್ದರಿಗೆ ಪ್ರತಿ ತಿಂಗಳು 5 ಸಾವಿರ ಮತ್ತು 80 ವರ್ಷ ಮೇಲ್ಪಟ್ಟವರಿಗೆ 8 ಸಾವಿರ ಮಾಸಾಶನ.
* ಅಂಗವಿಕಲರ ಮಾಶಾಸನವನ್ನು 400 ರೂಪಾಯಿಗಳಿಂದ 2500 ಸಾವಿರ ರೂಗಳಿಗೆ ಹೆಚ್ಚಳ
* ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 6 ಸಾವಿರಕ್ಕೆ ಹೆಚ್ಚಳ ಮತ್ತು ಉದ್ಯೋಗ ಖಾಯಂ.
* ಡಯಾಲಿಸಿಸ್ ಮತ್ತು ಗುಣಪಡಿಸಲಾಗದ ರೋಗವಿರುವ ರೋಗಿಗಳಿಗೆ ಪ್ರತಿ ತಿಂಗಳು 6 ಸಾವಿರ ಸಹಾಯ ಧನ.
* ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೆಣ್ಣು ಮಕ್ಕಳಿಗೆ ವಸತಿ ವಿದ್ಯಾರ್ಥಿ ನಿಲಯ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ಪೋಟೊ ಪಹಣಿ ಕಾರ್ಯಕ್ರಮ ಅನುಷ್ಠಾನ.
* ರಾಜ್ಯದ ಎಲ್ಲಾ ಪಂಚಾಯತಿಗಳಲ್ಲಿ ವೃದ್ದಾಶ್ರಮ ಸ್ಥಾಪನೆ.
* ಉತ್ತರ ಕರ್ನಾಟಕ ಭಾಗದಲ್ಲಿ ಜಯದೇವ ಹೃದ್ರೋಗ ಮಾದರಿಯ ಆಸ್ಪತ್ರೆಗಳ ನಿರ್ಮಾಣ.
* ಜಿಲ್ಲಾ ಮಟ್ಟದ ಕೈಗಾರೀಕರಣಕ್ಕೆ ಪ್ರೋತ್ಸಾಹ.
* ಪೀಣ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ರಚನೆ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ಸೋಲಾರ್, ಜೈವಿಕ, ಥರ್ಮಲ್ ಮತ್ತು ಪವನ ಶಕ್ತಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು.
* ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ.
* ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭ.
* ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪಡೆದ ಅಂಕಗಳ ಪರಿಗಣನೆ.
* ಪರಿಸರಕ್ಕೆ ಹಾನಿಯಾಗುವಂತಹ ಗಣಿಗಾರಿಕೆಯ ನಿಷೇಧ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದುವರಿಕೆ.
* ಯುವಕರಿಗೆ ಉದ್ಯೋಗ ಹೆಚ್ಚಿಸಲು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳ 7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ.
* ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು 11 ನೂತನ ಯೋಜನೆಗಳು.
* ಸಮಗ್ರ ನಗರಾಭಿವೃದ್ದಿಗಾಗಿ 12ನೇ ಶೆಡ್ಯೂಲ್ ಅನುಷ್ಠಾನ.
* ನಗರಾಭಿವೃದ್ದಿಗೆ ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನ.

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

ಜೆಡಿಎಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

* ವೈಜ್ಞಾನಿಕ ರೀತಿಯ ನೂತನ ಕಸ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ.
* ನ್ಯಾಯಮೂರ್ತಿ ಸಾಚಾರ್ ವರದಿ ಅನುಷ್ಠಾನ.
* ಅಕ್ರಮ ಸಕ್ರಮ ಕಾರ್ಯಕ್ರಮ ಜಾರಿ.
* ಪ್ರತಿ ವರ್ಷ ಬೆಂಗಳೂರು ನಗರದಲ್ಲಿ 35 ಸಾವಿರ ನಿವೇಶನ ಹಂಚಿಕೆ.
* ಬೆಂಗಳೂರು ನಗರದಲ್ಲಿರುವ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ವಶ.
* ಭ್ರಷ್ಟಾಚಾರ ನಿಗ್ರಹಿಸಲು ಸರ್ಕಾರದ ಇಲಾಖೆಗಳಲ್ಲಿ ಜಾಗೃತಿ ಸಮಿತಿ ರಚನೆ.

English summary
Janada Dal (Secular) supremo H.D. Deve Gowda released JDS election manifesto in Bangalore on 13th April at JDS media center. He promised people friendly, transparent and economically strong govt if the party gets majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X