ಬಿಎಸ್ವೈ, ಎಚ್ಡಿಕೆ, ಎಸ್ಸೆಂಕೆ, ಡಿಕೆಶಿ ವಿರುದ್ಧ ಆಂದೋಲನ

Vote against corrupt SM Krishna- BS Yeddyurappa, HD Kumarswamy- DK SHivakumar admonishes - SR Hiremath
ಬೆಂಗಳೂರು, ಏ.10: ಎಸ್ಆರ್ ಹಿರೇಮಠ್ ! ಮುಖ್ಯಮಂತ್ರಿಯನ್ನು ಖುರ್ಚಿಯಿಂದ ಕೆಳಗಿಳಿಸಿದ್ದೂ ಸೇರಿದಂತೆ ಕಳೆದೈದು ವರ್ಷಗಳಲ್ಲಿ ಘಟಾನುಘಟಿ ರಾಜಕಾರಣಿಗಳಿಗೆ ಬೆವರಿಳಿಸಿದ ಮಹಾನುಭಾವ. ಇದೀಗ ತಮ್ಮ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಮೂಲಕ ಚುನಾವಣೆ ಸಂದರ್ಭದಲ್ಲಿ ಮತದಾರರ ಮುಂದೆ ಪಿಟಿಶನ್ ಒಂದನ್ನು ಇಟ್ಟಿದ್ದಾರೆ.

ನಾಲ್ಕಾರು ಭ್ರಷ್ಟ ರಾಜಕಾರಣಿಗಳನ್ನು ಪಟ್ಟಿ ಮಾಡಿರುವ ಎಸ್ಆರ್ ಹಿರೇಮಠ್ ಅವರು ಆ ನಾಯಕರ ವಿರುದ್ಧ 'ಮತ ಜಾಗೃತಿ' ನಡೆಸಲು ಮುಂದಾಗಿದ್ದಾರೆ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್‌ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ, ಎಚ್ಡಿ ಕುಮಾರಸ್ವಾಮಿ,

ಮಾಜಿ ಸಚಿವ ಡಿಕೆ ಶಿವಕುಮಾರ್‌, ಸಚಿವ ವಿ ಸೋಮಣ್ಣ, ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಸ್ಪರ್ಧೆಗಿಳಿಯುವ ಕ್ಷೇತ್ರಗಳಲ್ಲಿ ಅವರು ಮತ ಜಾಗೃತಿ ಮೂಡಿಸುವ ಹೊಣೆಹೊತ್ತಿದ್ದಾರೆ.

'ಈ ಭ್ರಷ್ಟ ರಾಜಕಾರಣಿಗಳನ್ನು ಸಾರ್ವಜನಿಕ ಜೀವನದಿಂದ ಹೊರಗಿಡಲು ಹಾಲಿ ಚುನಾವಣೆ ಮೂಲಕ ಸದವಕಾಶ ಒದಗಿಬಂದಿದೆ. ಹಾಗಾಗಿ ಮತದಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು' ಎಂದು ಹಿರೇಮಠರು ಸುದ್ದಿಗೋಷ್ಠಿ ಮೂಲಕ ಮತದಾರರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಏಪ್ರಿಲ್‌ 13ರಂದು ಧಾರವಾಡದಲ್ಲಿ ಜನ ಸಂಗ್ರಾಮ ಪರಿಷತ್ತಿನ ಸಭೆ ನಡೆಯಲಿದ್ದು, ಈ ಸಭೆಯಲ್ಲಿ 'ಭ್ರಷ್ಟರೇ ಸಾರ್ವಜನಿಕ ಜೀವನಬಿಟ್ಟು ತೊಲಗಿ; ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳಿಗೆ ಅವಕಾಶ ಕೊಡಿ' ಎಂಬ ಅಭಿಯಾನಕ್ಕೆ ಅವರು ಚಾಲನೆ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+