ಲವ್ ಜಿಹಾದ್: ಕೆಂಡಕಾರಿದ ಈಶ್ವರಪ್ಪ ಕೋರ್ಟಿಗೆ

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿಪ್ರ ವೇದಿಕೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ಮಾನ್ಯ ಈಶ್ವರಪ್ಪಾ ಅವರು 'ಶಿವಮೊಗ್ಗ ಜಿಲ್ಲೆಯೊಂದರಲ್ಲೇ 67 ಬ್ರಾಹ್ಮಣ ಯುವತಿಯರನ್ನು ಮುಸ್ಲಿಮರು ಎತ್ಹಾಕಿಕೊಂಡು ಹೋಗಿದ್ದಾರೆ. ಈ ಬಗ್ಗೆ ನನ್ನ ಬಳಿ ಅಧಿಕೃತ ದಾಖಲೆಗಳಿವೆ. ಅದನ್ನು ಮುಂದಿಟ್ಟುಕೊಂಡೇ ಮಾತನಾಡುತ್ತಿದ್ದೇನೆ' ಎಂದು ಹೇಳಿದ್ದಾರೆ.
'ಅಷ್ಟೇ ಅಲ್ಲ. ಲವ್ ಜಿಹಾದ್ ಹೆಸರಿನಲ್ಲಿ ಹೀಗೆ ಎತ್ಹಾಕಿಕೊಂಡು ಹೋದ ಹೆಣ್ಣುಮಕ್ಕಳನ್ನು ಮುಸಲ್ಮಾನರು ಆರೆಂಟು ತಿಂಗಳ ಕಾಲ ತಮ್ಮ ಮನೆಗಳಲ್ಲಿಟ್ಟುಕೊಂಡು, ಆನಂತರ ವಾಪಸ್ ಕರೆತಂದು ಆಯಾ ಹೆಣ್ಣುಮಕ್ಕಳ ಮನೆಯಲ್ಲಿ ಅವರನ್ನು ಬಿಟ್ಟುಹೋಗುತ್ತಿದ್ದಾರೆ' ಎಂದು ಈಶ್ವರಪ್ಪಾ ವಿಷಾದ ವ್ಯಕ್ತಪಡಿಸಿದರು.
ಇತ್ತೀಚೆಗಷ್ಟೇ ಲವ್ ಜಿಹಾದ್ ಎಂಬುದು ಅಂತಾರಾಷ್ಟ್ರೀಯ ಪಿತೂರಿ ಎಂದು ಬಣ್ಣಿಸಿದ್ದ ಈಶ್ವರಪ್ಪ ಅವರು ಬ್ರಾಹ್ಮಣ ಮನೆಗಳವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಲೂ ಆಗದೆ, ಅವಮಾನದಿಂದ ಕುಸಿದು ಹೋಗಿದ್ದಾರೆ ಎಂದು ಉಪಮುಖ್ಯಮಂತ್ರಿಯೂ ಆದ ಈಶ್ವರಪ್ಪಾ ತಿಳಿಸಿದ್ದಾರೆ.
ಪ್ರಚೋದಮಕಾರಿ ಭಾಷಣದ ವಿರುದ್ಧ ದೂರು:
ಚುನಾವಣೆ ಸಂದರ್ಭದಲ್ಲಿ ಈಶ್ವರಪ್ಪ ಅವರ ಈ ಮಾತುಗಳನ್ನು ಕೇಳಿಸಿಕೊಂಡ ಮುಸ್ಲಿಂ ಸಮುದಾಯದವರು ಈಶ್ವರಪ್ಪ ವಿರುದ್ಧ ಚುನಾವಣೆ ಆಯೋಗಕ್ಕೂ ದೂರು ನೀಡುವುದರ ಜತೆಗೆ ಶಿವಮೊಗ್ಗ 2ನೆಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಈ ಮಧ್ಯೆ ಈಶ್ವರಪ್ಪನವರ ಈ ಮಾತುಗಳ ಪರ ಮತ್ತು ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.












Click it and Unblock the Notifications