ಚುನಾವಣೆ ಅಕ್ರಮ ತಡೆಗೆ ಪೀಟರ್ ರಿಪೀಟ್ ಷೋ

ಬೆಂಗಳೂರು, ಏ.9: ಚುನಾವಣೆ ಆಯೋಗ ಮುಂಬರುವ ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿ ನಡೆಸಿಕೊಡಲು ಕಟಿಬದ್ಧವಾಗಿದೆ. ಕಾನೂನು ಸುವ್ಯವಸ್ಥೆ ಒಂದು ಕಡೆಯಾದರೆ, ಚುನಾವಣೆ ಸಮ್ಮುಖದಲ್ಲಿ ಅಭ್ಯರ್ಥಿಗಳು ನಡೆಸಬಹುದಾದ ಅಕ್ರಮಗಳಿಗೆ ಕಡಿವಾಣ ಹಾಕಲು ಖಡಕ್ ಅಧಿಕಾರಿಗಳನ್ನು ನೇಮಿಸಲು ಪಟ್ಟಿ ಸಿದ್ಧಮಾಡಿಟ್ಟುಕೊಂಡಿದೆ. ಈ ಬಗ್ಗೆ ನಿನ್ನೆ ನಡೆದ ಆಯೋಗದ ಮಹತ್ವದ ಸಭೆಯಲ್ಲಿ ಸುಳಿವು ಸಿಕ್ಕಿದೆ.

ಪೀಟರ್ ರಿಪೀಟ್ ಷೋ:
ಈ ಬಾರಿಯಂತೂ ಚುನಾವಣೆಯಲ್ಲಿ ಅಕ್ರಮಗಳು ಮೇರೆ ಮೀರುವ ಅಂದಾಜಿದೆ. ಒಂದು ಕಡೆ ಅಕ್ರಮ ಗಣಿಗಾರಿಕೆ ದುಡ್ಡು, ಮತ್ತೊಂದು ಕಡೆ ಅಪಾರ ಭ್ರಷ್ಟಾಚಾರ ನಡೆಸಿ ಗುಡ್ಡೆ ಹಾಕಿರುವ ಅಕ್ರಮ ಸಂಪತ್ತು, ಈ ಮಧ್ಯೆ, ಪಾರ್ಟಿ ಫಂಡನ್ನೂ ಬಳಸುವುದಕ್ಕೆ ಅವಕಾಶವಿಲ್ಲದಂತಾಗಿ ಕೊಳೆಯುತ್ತಿರುವ ಹಣ ಹೀಗೆ ನಾನಾ ರೂಪದಲ್ಲಿ ಈ ಹಣ ಚಲಾವಣೆಗೆ ಬರುವುದಂತೂ ಖಂಡಿತಾ. ಈ ಬಾರಿ ಯಾರು ಹೆಚ್ಚು ಹಣದ ಹೊಳೆ ಹರಿಸುತ್ತಾರೋ ಅವರಿಗೇ ಗೆಲುವು ದಕ್ಕುವುದು ಎಂಬ ಸರಳ ಮರ್ಮವನ್ನು ರಾಜಕೀಯ ನೇತಾರರು ಅರ್ಥಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವೂ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮೊನ್ನೆ ಉತ್ತರಪ್ರದೇಶದಂತಹ ಉತ್ತರಪ್ರದೇಶದಲ್ಲೇ ಚುನಾವಣೆಯನ್ನು ಬಹುತೇಕ ಶಾಂತಿಯುವಾಗಿ ನಡೆಸಿಕೊಟ್ಟ ಆಯೋಗಕ್ಕೆ ಫುಲ್ ಮಾರ್ಕ್ಸ್ ಸಂದಾಯವಾಗಿತ್ತು. ಈ ಸಮಯದಲ್ಲಿ ಮತದಾರ ಹೆಚ್ಚಿನ ಸಂಖ್ಯೆಯಲ್ಲಿ ಪೀಟರ್ ಗಳು ಚುನಾವಣೆ ವೀಕ್ಷಕರಾಗಿ ನೇಮಕಗೊಳ್ಳಲಪ್ಪಾ ಎಂದು ಆಶಿಸುತ್ತಿದ್ದಾನೆ.

ಕೆಲವು ಸೂಕ್ಷ್ಮ ಕ್ಷೇತ್ರಗಳನ್ನು ಪಟ್ಟಿ ಮಾಡುವುದಾದರೆ ಅವು ಹೀಗಿವೆ. ಅದಕ್ಕೂ ಮುನ್ನ ಪೀಟರ್ ಬಗ್ಗೆ ಒಂದಿಷ್ಟು.

ಸಿಂಹಸ್ವಪ್ನ ಮಿಸ್ಟರ್ ಪೀಟರ್

ಸಿಂಹಸ್ವಪ್ನ ಮಿಸ್ಟರ್ ಪೀಟರ್

ಚುನಾವಣೆ ಅಕ್ರಮ ತಡೆ ವಿಷಯದಲ್ಲಿ ತಕ್ಷಣಕ್ಕೆ ಕಣ್ಣಮುಂದೆ ಬರುವ ಖಡಕ್ ಅಧಿಕಾರಿಗಳು ಅಂದರೆ 'ಪೀಟರ್' ಎಂದೇ ಪರಿಚಿತರಾದ ಆಂಧ್ರ ಕೇಡರಿನ ಐಎಎಸ್ ಅಧಿಕಾರಿ ಜೆ ರೇಮಂಡ್ ಪೀಟರ್ ಅವರು (ಚಿತ್ರದಲ್ಲಿ ಬಲ ತುದಿಯಲ್ಲಿರುವವರು). ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ ವೇಳೆ ಇವರನ್ನು ಚುನಾವಣೆ ವೀಕ್ಷಕರನ್ನಾಗಿ ನೇಮಿಸಲಾಗಿತ್ತು.
ಮುಲಾಜಿಲ್ಲದೆ ಎಲ್ಲ ರಾಜಕೀಯ ನೇತಾರರಿಗೂ ಇವರು ಸಿಂಹಸ್ವಪ್ನರಾಗಿದ್ದರು. ಮಾಜಿ ಪ್ರಧಾನಿಯೂ ಎಂಬುದನ್ನು ಲೆಕ್ಕಿಸದೆ ಎಚ್ ಡಿ ದೇವೇಗೌಡರನ್ನು ಪೀಟರ್ ತೀವ್ರವಾಗಿ ಗೋಳಾಡಿಸಿದ್ದರು. ಗೌಡರು ಕನಸಿನಲ್ಲೂ 'ಮಿಸ್ಟರ್ ಪೀಟರ್, 'ಮಿಸ್ಟರ್ ಪೀಟರ್' ಎಂದೇ ಕನವರಿಸತೊಡಗುವಂತೆ ಮಾಡಿದ್ದರು.

ಕುಮಾರಸ್ವಾಮಿ ಸ್ಪರ್ಧಾ ಕಣ

ಕುಮಾರಸ್ವಾಮಿ ಸ್ಪರ್ಧಾ ಕಣ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿರುವ ರಾಮನಗರ ಕ್ಷೇತ್ರ

ಸಿದ್ದರಾಮಯ್ಯ ಸ್ಪರ್ಧಾ ಕಣ

ಸಿದ್ದರಾಮಯ್ಯ ಸ್ಪರ್ಧಾ ಕಣ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರ.

ಡಾ. ಜಿ ಪರಮಶ್ವರ್ ಸ್ಪರ್ಧಾ ಕಣ:

ಡಾ. ಜಿ ಪರಮಶ್ವರ್ ಸ್ಪರ್ಧಾ ಕಣ:

ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮಶ್ವರ್ ಅವರು ಸ್ಪರ್ಧಿಸುತ್ತಿರುವ ಕೊರಟಗೆರೆ ಕ್ಷೇತ್ರ.

ಯಡಿಯೂರಪ್ಪ ಸ್ಪರ್ಧಾ ಕಣ:

ಯಡಿಯೂರಪ್ಪ ಸ್ಪರ್ಧಾ ಕಣ:

ಕೆಜೆಪಿ ನಾಯಕ ಯಡಿಯೂರಪ್ಪ ಅವರು ಸ್ಪರ್ಧಿಸುತ್ತಿರುವ ಶಿಕಾರಿಪುರ ಕ್ಷೇತ್ರ

ಈಶ್ವರಪ್ಪ ಸ್ಪರ್ಧಾ ಕಣ:

ಈಶ್ವರಪ್ಪ ಸ್ಪರ್ಧಾ ಕಣ:

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಸ್ಪರ್ಧಿಸುತ್ತಿರುವ ಶಿವಮೊಗ್ಗ ಕ್ಷೇತ್ರ

ಚಲುವರಾಯಸ್ವಾಮಿ ಸ್ಪರ್ಧಾ ಕಣ:

ಚಲುವರಾಯಸ್ವಾಮಿ ಸ್ಪರ್ಧಾ ಕಣ:

ಜೆಡಿಎಸ್ ಸಂಸದ ಚಲುವರಾಯಸ್ವಾಮಿ ಅವರು ಸ್ಪರ್ಧಿಸುತ್ತಿರುವ ನಾಗಮಂಗಲ ಕ್ಷೇತ್ರ

ಶೋಭಾ ಕರಂದ್ಲಾಜೆ ಸ್ಪರ್ಧಾ ಕಣ:

ಶೋಭಾ ಕರಂದ್ಲಾಜೆ ಸ್ಪರ್ಧಾ ಕಣ:

ಕೆಜೆಪಿ ಅಧಿನಾಯಕಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸುತ್ತಿರುವ ರಾಜಾಜಿನಗರ ಕ್ಷೇತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+