ಟಿಕೆಟ್ ಸಿಗದೆ ಪರದಾಡುತ್ತಿರುವ ಯೋಗೇಶ್ವರ

ಚನ್ನಪಟ್ಟಣ, ಏ.9: ಒಂದು ಕಡೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿರುವ ಸಾದತ್ ಆಲಿಖಾನ್ ಸೋಮವಾರದಿಂದ ಪ್ರಚಾರ ಆರಂಭಿಸಿದ್ದರೇ, ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ಪಕ್ಷದ ಟಿಕೇಟ್ ಪಡೆಯಲು ದೆಹಲಿಯಲ್ಲಿಯೇ ಬಿಡುಬಿಟ್ಟಿದ್ದಾರೆ.

ಯಾವುದೇ ಕಾರಣಕ್ಕೂ ಪಕ್ಷ ಟಿಕೇಟ್ ಅನ್ನು ಮತ್ತೊಬ್ಬರಿಗೆ ಬದಲಾವಣೆ ಮಾಡುವುದಿಲ್ಲವೆಂದು ಸಾದತ್ ಸ್ಪಷ್ಟಪಡಿಸಿದ್ದರೇ ಯೋಗೀಶ್ವರ್ ಸತಾಯಗತಾಯ ಟಿಕೇಟ್ ಪಡೆದೇ ತೀರುತ್ತೇನೆಂದು ಮಂಗಳವಾರ ಇಲ್ಲಿನ ವಿಶ್ವಪ್ರೇಮಿ ಸಮಾರಂಭ ಭವನದಲ್ಲಿ ನಡೆಯಬೇಕಿದ್ದ ತಮ್ಮ ಬೆಂಬಲಿಗರ ಸಭೆಯನ್ನು ರದ್ದು ಮಾಡಿ ದೆಹಲಿಯಲ್ಲಿಯೇ ಉಳಿದಿದ್ದಾರೆ.

ಪಕ್ಷದ ಹೈಕಮಾಂಡ್ ಮನವೊಲಿಸಿ, ಟಿಕೆಟ್ ತರುವ ಉಮೇದಿನಲ್ಲಿರುವ ಸೈನಿಕ ಒಂದು ವೇಳೆ ಟಿಕೆಟ್ ಸಿಗದಿದ್ದಲ್ಲಿ ಸ್ವತಂತ್ರರಾಗಿ ಕಣಕ್ಕಿಳಿಯಲು ಮತ್ತೊಂದು ಕಡೆ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.

ಈಗಾಗಲೇ ಯೋಗೀಶ್ವರ್ ಅಲ್ಲಲ್ಲಿ ಗುಂಪು ಸೇರಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಸಿ, ದಿಲ್ಲಿಯಲ್ಲಿರುವ ತಮ್ಮ ನಾಯಕನಿಗೆ ವರದಿ ನೀಡುತ್ತಿದ್ದಾರೆ. ಯೋಗೀಶ್ವರ್ ಮಂಗಳವಾರ ಸಂಜೆ ವರಗೆ ದೆಹಲಿಯಲ್ಲಿ ಉಳಿದು, ಅಂತಿಮ ತೀರ್ಮಾನ ಮಾಡಿಕೊಂಡು ನಂತರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಸನ್ನದ್ಧ: ಕಾಂಗ್ರೆಸ್ ಟಿಕೆಟ್ ತಂದು ಚುನಾವಣೆಯಲ್ಲಿ ತ್ರಾಸ ಕಡಿಮೆ ಮಾಡಿಕೊಳ್ಳಲು ಬಯಸಿರುವ ಯೋಗೀಶ್ವರ್ ಪಕ್ಷೇತರಾಗಿ ಕಣಕ್ಕಿಳಿದು ತಮ್ಮ ಕೈಚಳಕ' ತೋರಲು ಈಗಾಗಲೇ ಸನ್ನದ್ಧರಾಗಿದ್ದಾರೆ.

ಅದರಂತೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ ನಂತರವೇ ತಮ್ಮಿಂದ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ಯೋಗೀಶ್ವರ್ ಹೇಳುತ್ತಿದ್ದು, ಟಿಕೆಟ್ ಅನ್ನು ಒಂದು ವೇಳೆ ತಮಗೆ ಕೊಡದಿದ್ದಲ್ಲಿ ಪಕ್ಷೇತರಾಗಿ ಸ್ಪರ್ಧಿಸುವುದು ಬಹುತೇಕ ನಿಶ್ಚಯವಾಗಿದೆ.

ಯೋಗೇಶ್ವರ್ ಅವರ ಮೇಲೆ ಹಲವಾರು ಪ್ರಕರಣಗಳು ಸುತ್ತಿಕೊಂಡಿದ್ದೆ. ಹಗರಣದಿಂದ ಹೊರಗೆ ಬರುವ ಆತಂಕ ಅವರನ್ನು ಹೀಗೆ ಮಾಡಿಸಿದೆ. ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮೆಗಾಸಿಟಿ ಹಗರಣದ ಬಗ್ಗೆ ಎಲ್ಲಿ ತನಿಖೆ ಆರಂಭಿಸಿ ತಮ್ಮ ಬುಡ ಅಲ್ಲಾಡಿಸುತ್ತದೆ ಎಂಬ ಭಯ ಆವರಿಸಿದೆ. ತಮ್ಮ ವಂಚನೆ ಬಯಲಾಗಿ ಜೈಲುಪಾಲಾಗುವ ಭಯ ಅವರಿಗೆ ಕಾಡಿದ್ದರಿಂದ ಕೂಡಲೇ ಕಾಂಗ್ರೆಸ್ ನಾಯಕರ ಕಾಲಿಗೆ ಯೋಗೇಶ್ವರ್ ಬಿದ್ದಿದ್ದಾರೆ.

ಬಿಜೆಪಿಯಲ್ಲಿ ರಾಜ್ಯಮಟ್ಟದ ನಾಯಕರಾಗಿ ಮೆರೆದ ಯೋಗೇಶ್ವರ್, ಇದೀಗ ಯಕಶ್ಚಿತ್ ನಗರಸಭೆ ಬಿ ಫಾರಂಗಾಗಿ ಕಾಂಗ್ರೆಸ್ ಜಿಲ್ಲಾ ಮುಖಂಡರ ಅಂಗಲಾಚಿ ನಿಂತಿದ್ದಾರೆ. ರಾತ್ರೋರಾತ್ರಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ, ಅವರಿಗೆ ಈಗಲೇ ಬೇಡುವ ಸ್ಥಿತಿ ಬಂದಿರುವುದು ನಿಜಕ್ಕೂನಾಚಿಕೆಗೇಡಿನ ವಿಚಾರವಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+