ನನಗೆ ಮತ ಹಾಕಲು ಇಷ್ಟವಿಲ್ಲ, ನಾನೇನು ಮಾಡಲಿ?

ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿಗೆ ತಮ್ಮ ಮತ ಹಾಕುವುದಕ್ಕೆ ಇಚ್ಛೆ ಇಲ್ಲದ ಮತದಾರರು ಚುನಾವಣಾ ಸಿಬ್ಬಂದಿ ಬಳಿಯಿರುವ ಪಾರಂ 17 'ಎ' ತುಂಬುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ.
ಮತದಾರರ ದಾರಿ ತಪ್ಪಿಸುವ, ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರ-ವಿರುದ್ಧ ಪೂರ್ವಾಗ್ರಹ ಪೀಡಿತ ವರದಿ ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶಕ ಅಕ್ಷಯ್ ರಾವತ್ ಹೇಳಿದ್ದಾರೆ.
ಮತದಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಯ ಮೇಲೆ ಭರವಸೆ ಇಲ್ಲದಿದ್ದಲ್ಲಿ. ಮತ ಹಾಕದೆ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದು ಹೇಳಿದರು.
ಕೇಂದ್ರ ಚುನಾವಣ ಆಯೋಗದ 49 '0'ಕಾಯಿದೆಯ ಪ್ರಕಾರ ಈ ರೀತಿಯ ಮತದಾನಕ್ಕೆ ಅವಕಾಶವಿದೆ ಎಂದ ಅವರು, ಈ ಮತದಾರರು ಚುನಾವಣಾ ಆಯೋಗದ ಪ್ರಕಾರ ತಮ್ಮ ಹಕ್ಕನ್ನು ಚಲಾಯಿಸಿದಂತೆ. ಆದರೆ, ಯಾವುದೇ ಅಭ್ಯರ್ಥಿಗೆ ಬೆಂಬಲ ಸೂಚಿಸಿದಂತಲ್ಲ.
ಈ ಮತದಾರ ಸಂಖ್ಯೆಯನ್ನು ಆಯೋಗ ಕಲೆ ಹಾಕುತ್ತದೆಯಾದರೂ ಬಹಿರಂಗಗೊಳಿಸುವುದಿಲ್ಲ. ಆದರೆ, ಶೇಕಡವಾರು ಮತದಾನದ ಸಂಖ್ಯೆಯಲ್ಲಿ ಇವರ ನೋಂದಣೆಯಾಗುತ್ತಾರೆ. ಅಭ್ಯರ್ಥಿಗಳಿಗೆ ಬಿದ್ದ ಮತಗಳು ಟೈ ಆದಾಗ ಈ ಮತ ಎಣಿಕೆಗೆ ಬರಲಿದೆ ಎಂದು ಅನಿಲ್ ಕುಮಾರ್ ತಿಳಿಸಿದರು.
ಉದಾ: ಒಬ್ಬ ಅಭ್ಯರ್ಥಿ 125 ಮತಗಳಿಸಿ ಗೆಲ್ಲುತ್ತಾನೆ ಎಂದುಕೊಳ್ಳೋಣ. ಆತ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ 49-0 ವೋಟುಗಳು 125 ದಾಟಿದರೆ ಮತದಾನವೇ ಕ್ಯಾನ್ಸಲ್ ಮಾಡಬೇಕಾಗುತ್ತದೆ ಹಾಗೂ ಮರು ಮತದಾನಕ್ಕೆ ಆದೇಶಿಸಬೇಕಾಗುತ್ತದೆ ಎಂಬ ನಿಯಮವಿದೆ. ಅಲ್ಲದೆ ಆ ಅಭ್ಯರ್ಥಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ.
ಕೇಂದ್ರ ಸರಕಾರ ವಿವಿಧ ರೀತಿಯ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಮೂಲಕ ನೇರ ಖಾತೆಗೆ ಹಣ ಪಾವತಿ ಮಾಡುತ್ತಿರುವ ಬಗ್ಗೆ ತುಮಕೂರು ಹಾಗೂ ಮೈಸೂರು ಸೇರಿದಂತೆ ಇತರೆಡೆಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು ಎಂದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ವರ್ಗಾವಣೆಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಅಧಿಕಾರವಿದ್ದು, ರಾಜ್ಯ ಸರಕಾರದ ಪ್ರಸ್ತಾವನೆಯ ಆಧಾರದಿಂದ ವರ್ಗಾವಣೆಗೆ ಅವಕಾಶವಿದೆ. ಆದರೆ, ಆಯುಕ್ತರ ವರ್ಗಾವಣೆ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications