ನೀತಿ ಸಂಹಿತೆ ಉಲ್ಲಂಘನೆ: ನಾಲಗೆ ಕಚ್ಚಿಕೊಂಡ ಸಿಟಿ ರವಿ

Poll code violation in Chikmagalur
ಚಿಕ್ಕಮಗಳೂರು, ಏ.3: ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ ಅವರ ಮಾತಿಗೆ ಅವರಿಗೆ ಉರುಳಾದ ಪ್ರಸಂಗ ನಡೆದಿದೆ. ಚುನಾವಣೆ ಬಂದಾಗ ಜೆಡಿಎಸ್, ಕಾಂಗ್ರೆಸ್ ಪಕ್ಷದವರು ಮಾಂಸದೂಟ ಹಾಕಿ ಆಣೆ ಪ್ರಮಾಣ ಮಾಡಿಸಿ ಮತ ಗಳಿಸುವುದಕ್ಕಷ್ಟೇ ಸೀಮಿತ ಎಂದು ಕಡೂರು ತಾಲೂಕು ಸಖರಾಯಪಟ್ಟಣದಲ್ಲಿ ಹೇಳಿ ಚಿಕ್ಕಮಗಳೂರಿಗೆ ಹಿಂತಿರುಗುವಷ್ಟರಲ್ಲಿ ಆಘಾತಕಾರಿ ಸುದ್ದಿ ಕಿವಿಗೆ ಅಪ್ಪಳಿಸಿತು.

ಲಂಬಾಣಿ ಸಮಾವೇಶದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಿ.ಟಿ ರವಿ ಅವರು 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಆದರೆ, ಚಿಕ್ಕಮಗಳೂರಿಗೆ ಕಾಲಿಡುತ್ತಿದ್ದಂತೆ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ಅಕ್ರಮವಾಗಿ ಮಾಂಸದೂಟಕ್ಕೆ ತಯಾರಿ ನಡೆಸಿದ ಪ್ರಕರಣ ದಾಖಲಾಗಿತ್ತು.ಚುನಾವಣಾ ನೀತಿ ಸಂಹಿತೆ ತುಂಬಾ ಕಠಿಣವಾಗಿದ್ದು, ಅಭ್ಯರ್ಥಿಗಳು ಭಯದಿಂದ ಪ್ರತಿ ಹೆಜ್ಜೆ ಇಡುವಂತೆ ಅಧಿಕಾರಿಗಳು ಮಾಡಿದ್ದಾರೆ. ಇಷ್ಟೊಂದು ಕಠಿಣ ಕ್ರಮ ಅಗತ್ಯವಿಲ್ಲ ಎಂದು ರವಿ ಪ್ರತಿಕ್ರಿಯಿಸಿದ್ದರು.

ಪೊಲೀಸ್ ರೆಕಾರ್ಡ್ ಪ್ರಕಾರ ಬಂದ ಮಾಹಿತಿ ಹಾಗೆ ನೀಡಿದ್ದೇವೆ ಓದ್ಕೊಳ್ಳಿ:

ದಿನಾಂಕ 31/03/2013 ರಂದು 1300 ಗಂಟೆಯಲ್ಲಿ ಕೌಂತೆಯ ಹೋಟೆಲ್ ಹಿಂಭಾಗ ಜಯನಗರದಲ್ಲಿ ನಗರ ಸಭಾ ಸದಸ್ಯರು ಭಾರತೀಯ ಜನತಾ ಪಾರ್ಟಿ, ಇವರ ಮನೆಯ ಕಾರ್ ಷೆಡ್‌ನಲ್ಲಿ ಸುಮಾರು 50 ರಿಂದ 100 ಜನಕ್ಕೆ ಮಾಂಸಹಾರದ ಸಾಮೂಹಿಕ ಭೋಜನ ಕೂಟವನ್ನು ಏರ್ಪಡಿಸಿರುವುದು ಕಂಡು ಬಂದಿರುತ್ತದೆ.

ಇದನ್ನು ಶ್ರೀ ದೇವರಾಜ ಶೆಟ್ಟಿರವರು ಚುನಾವಣಾ ಪ್ರಚಾರಕ್ಕಾಗಿ ಏರ್ಪಡಿಸಿದ್ದೆಂದು ಕಂಡು ಬಂದಿದ್ದು ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತೆ. ಈ ಭೋಜನ ಕೂಟಕ್ಕೆ ಬಳಸಲಾದ ಮಾಂಸಹಾರದ ಭೋಜನ ಸ್ಥಳದ ಬಗ್ಗೆ ಶ್ರೀ ಆನಂದ ಶೆಟ್ಟಿ ಬಿನ್ ರಂಗ ಶೆಟ್ಟಿ ಅಡುಗೆ ತಯಾರಕರು ಇವರ ಬಳಿ ವಿಚಾರಿಸಿದಾಗ ಉಂಡೆ ದಾಸರಹಳ್ಲಿಯಲ್ಲಿನ ಕ್ಯಾಥೋಲಿಕ್ ಚರ್ಚ್‌ ಕ್ಲಬ್ ಬಳಿ ಇರುವ ವಿಜಯ ಲಕ್ಷ್ಮಿ ಎಂಬುವವರಿಗೆ ಸೇರಿದ ಸ್ಥಳದಲ್ಲಿ ನಗರದ ಕೋಟೆ ನಿವಾಸಿ ಶ್ರೀನಿವಾಸ್ ಬಿನ್ ತಿಮ್ಮಯ್ಯ ಎಂಬುವವರು ಸಾಮೂಹಿಕ ಭೋಜನಕ್ಕೆ ಅಡುಗೆತಯಾರಿಸಿದ್ದು ತಿಳಿದು ಬಂದಿರುತ್ತೆ.

ಮೇಲೆ ತಿಳಿಸಿದ ಉಂಡೇದಾಸರಹಳ್ಳಿಯಲ್ಲಿನ ಸ್ಥಳಕ್ಕೆ ಭೇಟಿ ನೀಡಿ ಅಡುಗೆ ತಯಾರಿಸಲು ಬಳಸಲಾದ 1 ದೊಡ್ಡ ಪಾತ್ರೆ ಹಾಗೂ ಮುಚ್ಚಳ , 2 ಮದ್ಯಮ ಗಾತ್ರದ ಪಾತ್ರೆಗಳು ಹಾಗೂ 1 ಮುಚ್ಚಳ , 1 ದೊಡ್ಡ ಜಾಲರಿಯನ್ನು ವಶಕ್ಕೆ ತೆಗೆದುಕೊಂಡಿರುತ್ತೆ.. ನಗರ ಪೊಲೀಸ್ ಠಾಣೆ ಮೊ.ಸಂ- 66/2013 ಕಲಂ 171(ಇ) ಐಪಿಸಿ

ಜೆಡಿಎಸ್ ಊಟ: ಪುತ್ತೂರಿನ ಜೆಡಿಎಸ್ ಕಾರ್ಯಕರ್ತರು ಏರ್ಪಡಿಸಿದ್ದ ಮಾಂಸದೂಟ ಕಾರ್ಯಕ್ರಮಕ್ಕೆ ಚುನಾವಣಾಧಿಕಾರಿ ರಾಜಶೇಖರ್ ಹಾಗೂ ಇನ್ಸ್ ಪೆಕ್ಟರ್ ಸುದರ್ಶನ್, ರಫೀಕ್ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಖಾಲಿ ಹೊಟ್ಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ತೆರಳಿದ್ದಾರೆ. ನಮಗೆ ನೀತಿ ಸಂಹಿತೆ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ನಾಮ ಪತ್ರ ಸಲ್ಲಿಕೆಯಾಗಿಲ್ಲದಿರುವುದರಿಂದ ಒಟ್ಟಿಗೆ ಊಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂದುಕೊಂಡಿದ್ದೆವು ಎಂದು ಜೆಡಿಎಸ್ ಉಪಾಧ್ಯಕ್ಷ ಅಶ್ರಫ್ ಕಲ್ಲೆಗ ಹೇಳಿದ್ದಾರೆ. ವಶಪಡಿಸಿಕೊಂಡ ಆಹಾರವನ್ನು ಸ್ಥಳೀಯ ಅನಾಥಾಶ್ರಮಕ್ಕೆ ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+