ಅರ್ಚಕನಿಂದ ಮಹಿಳೆ ಕಿಡ್ನಾಪ್ ಅತ್ಯಾಚಾರ ಮಾರಾಟ

ಛಾತರಪುರ ಜಿಲ್ಲೆಯ ಕವಾರ್ ಗ್ರಾಮದ ನಿವಾಸಿಯಾಗಿರುವ 33 ವರ್ಷದ ಮಹಿಳೆಯನ್ನು ಅದೇ ಗ್ರಾಮದ ಅರ್ಚಕ ಬಾಲ ಪ್ರಸಾದ್ ಶುಕ್ಲಾ ಎಂಬಾತ ಮಗುವಿನ ಸಮೇತ ಕಿಡ್ನಾಪ್ ಮಾಡಿದ್ದ. ಈ ಘಟನೆ ನಡೆದಿರುವುದು ಮಾ.17ರಂದಾದರೂ ಆಕೆ ಸಿಕ್ಕಿರುವುದು ಏ.1ರಂದು ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಅರ್ಚಕ ಮತ್ತು ಸಹಚರ ದೇವೇಂದ್ರ ಶುಕ್ಲಾ ಆಕೆಯನ್ನು ಅಪಹರಿಸಿ, ಪತರ್ವ ಎಂಬ ಗ್ರಾಮದಲ್ಲಿ ಸಾಮೂಹಿಕವಾಗಿ ಬಲಾತ್ಕರಿಸಿ 40 ಸಾವಿರ ರು.ಗೆ ಮೂವರು ಸಹೋದರರಿಗೆ ಮಾರಾಟ ಮಾಡಿದ್ದಾರೆ. ಆ ಮೂವರು ಕಾಮುಕ ಸಹೋದರರಾದ ವಿಮಲೇಶ್ ಯಾದವ್, ಪಪ್ಪು ಯಾದವ್ ಮತ್ತು ವೀರೇಂದ್ರ ಯಾದವ್ ಆಕೆಯನ್ನು ಪಿಪ್ರಾ ಎಂಬ ಗ್ರಾಮದಲ್ಲಿ ಕೂಡಿಟ್ಟು ನಿರಂತರವಾಗಿ ಬಲಾತ್ಕರಿಸಿದ್ದಾರೆ.
ಮಹಿಳೆ ಪಿಪ್ರಾ ಗ್ರಾಮದಲ್ಲಿರುವುದು ಆಕೆಯ ಸಹೋದರನ ಗಮನಕ್ಕೆ ಬಂದಿದೆ. ಪೊಲೀಸರ ದಾಳಿಯ ಸುಳಿವು ಸಿಗುತ್ತಿದ್ದಂತೆ ಎಲ್ಲ ಐವರು ಪರಾರಿಯಾಗಿದ್ದಾರೆ. ಎಲ್ಲ ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ವ್ಯಾಪಕ ಬಲೆ ಬೀಸಲಾಗಿದೆ.












Click it and Unblock the Notifications