ಆಸ್ಪತ್ರೆಗಳಲ್ಲಿ ಆಧಾರ್ ನೋಂದಣಿ ಕೇಂದ್ರ ಪ್ರಾರಂಭ

ಆಸ್ಪತ್ರೆಗಳಲ್ಲಿ ಕೌಂಟರ್ ತೆರೆಯುವ ಬಗ್ಗೆ ಮಾಹಿತಿ ನೀಡಿದ ಆಧಾರ್ ಯೋಜನೆಯ ವಿಶೇಷ ಸಮನ್ವಯಾಧಿಕಾರಿ ಡಾ.ಆರ್.ವಿಶಾಲ್, ಆಸ್ಪತ್ರೆಗೆ ಬರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸಹಾಯಕವಾಗಲಿ ಎಂದು ಆಸ್ಪತ್ರೆಗಳಲ್ಲಿ ಕೌಂಟರ್ ತೆರೆಯಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಕಿದ್ವಾಯಿ ಆಸ್ಪತ್ರೆಯಲ್ಲಿ ಕೌಂಟರ್ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಆಸ್ಪತ್ರೆಯ ಕೌಂಟರ್ ನಲ್ಲಿ ಇಬ್ಬರು ಸಿಬ್ಬಂದಿ ಮತ್ತು ಎರಡು ಯಂತ್ರಗಳನ್ನು ಸ್ಥಾಪಿಸಲಾಗುವುದು.
ಆಸ್ಪತ್ರೆಗೆ ಬರುವ ರೋಗಿಗಳು ಈ ಕೇಂದ್ರಗಳ ಮೂಲಕ ಆಧಾರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಅಂಚೆಯ ಮೂಲಕ ಆಧಾರ್ ಕಾರ್ಡ್ ತಲುಪಿಸಲಾಗುವುದು ಎಂದು ಹೇಳಿದರು. ಒಂದು ಆಸ್ಪತ್ರೆಯಲ್ಲಿ ನೂರಾರು ಸಿಬ್ಬಂದಿಗಳಿದ್ದಾರೆ. ಸಾವಿರಾರು ಜನರು ಆಗಮಿಸುತ್ತಾರೆ. ಆದ್ದರಿಂದ ಆಧಾರ್ ಕೇಂದ್ರ ತೆರಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ನಗರದ ಕೆಲವು ಆಸ್ಪತ್ರೆಗಳಲ್ಲಿ ಆಧಾರ್ ಕೇಂದ್ರ ಪ್ರಾರಂಭವಾಗಲಿದೆ. ಇದೊಂದು ಮಾರ್ಗದರ್ಶಕ ಕೇಂದ್ರವಾಗಲಿದ್ದು, ಜನರ ಪ್ರತಿಕ್ರಿಯೆ ನಂತರ ಹೆಚ್ಚಿನ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ನಡೆಸಲಾವುದು ಎಂದು ವಿಶಾಲ್ ಹೇಳಿದರು.
ಬಡವರಿಗೆ ಸಹಾಯಕ : ಕೆಳ ಮತ್ತು ಮಧ್ಯಮ ವರ್ಗದ ಜನರು ಬಿಬಿಎಂಪಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ತೆರಳಿ ಆಧಾರ್ ನೋಂದಣಿಯಲ್ಲಿ ಪಾಲ್ಗೊಳ್ಳುವುದಿಲ್ಲ ಆದ್ದರಿಂದ ಅವರಿಗೆ ಸಹಾಯಕವಾಗಲಿ ಎಂದು ಆಸ್ಪತ್ರೆಗಳಲ್ಲಿ ಕೇಂದ್ರ ತೆರಯಲಾಗುತ್ತಿದೆ.
ಶ್ರೀಘ್ರ ಪ್ರಾರಂಭ : ಜಯದೇವ ಮತ್ತು ಕಿದ್ವಾಯಿ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ನೋಂದಣಿ ಕೇಂದ್ರ ಆರಂಭವಾಗಲಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 400 ರಿಂದ 600 ಕೇಂದ್ರ ತೆರಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications