ಬಿಜೆಪಿಯಿಂದ ಕೆಜೆಪಿಗೆ ಹಾರಿದ ವಿ ಸೋಮಣ್ಣ

V Somanna jumps from BJP to KJP
ಬೆಂಗಳೂರು, ಏ.2: ಅಂತೂ ಇಂತೂ ವಸತಿ ಸಚಿವ ವಿ ಸೋಮಣ್ಣ ಅವರು ಬಿಜೆಪಿಯಿಂದ ಕೆಜೆಪಿಗೆ ಲಾಂಗ್ ಜಂಪ್ ಮಾಡಿದ್ದಾರೆ. ಟಿಕೆಟ್ ಎಲ್ಲಿ ಸಿಗುತ್ತದೋ ಅದೇ ಪಾರ್ಟಿಯಲ್ಲಿ ಸೋಮಣ್ಣ ಕಾಣಿಸಿಕೊಳ್ಳುತ್ತಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬಂದ ಮಾತಿನ ಸ್ಪಷ್ಟ ಚಿತ್ರಣ ಮಂಗಳವಾರ ಇಳಿ ಸಂಜೆ ಹೊತ್ತಲ್ಲಿ ಸಿಕ್ಕಿದೆ.

ಖಾಸಗಿ ಸುದ್ದಿ ವಾಹಿನಿ ಈ ಬಗ್ಗೆ ಸಂಜೆ ಐದರ ವೇಳೆ ಪ್ರಸಾರ ಸುದ್ದಿಯಲ್ಲಿ 'ಕೆಜೆಪಿ ಸೇರಲಿರುವ ಸೋಮಣ್ಣ' ಎಂದು ವಿವರವಾಗಿ ಮಾಹಿತಿ ಹೊರ ಹಾಕಿದ್ದಾರೆ. ಸೋಮಣ್ಣ ಅವರಿಗೆ ಎಲ್ಲಿ ಟಿಕೆಟ್ ಸಿಕ್ಕಿದೆ ನೋಡುವ ಫ್ಲಾಶ್ ಬ್ಯಾಕ್ ಸ್ಟೋರಿಯ ಕೆಲವು ಪ್ಯಾರಾ ಓದಿ ಕೊಳ್ಳಿ

ಸೋಮಣ್ಣ ಕೆಜೆಪಿಗೆ ಬಂದರೆ ಖಂಡಿತಾ ಟಿಕೆಟ್‌ ಕೊಡ್ತೀನಿ' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದ ಸುದ್ದಿ ಹೊರಬಂದಿತು. ಏ. 1 ಅಥವಾ 2ರಂದು ಕೆಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಆ ವೇಳೆಗೆ ಸೋಮಣ್ಣ ಕೆಜೆಪಿ ಸೇರ್ಪಡೆ ನಿಕ್ಕಿಯಾದರೆ ಚಾಮರಾಜನಗರದ ಯಾವುದಾದರೊಂದು (ಹನೂರು?) ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಹರಿದಾಡಿತ್ತು.

ಆದರೆ, ಇದರ ಮುಂದುವರೆದ ಭಾಗದಲ್ಲಿ ನಡೆದಿದ್ದೇ ಬೇರೆ. ಸಚಿವ ಸೋಮಣ್ಣ ಅವರು ಹೆಣ್ಣು ಮಗಳೊಬ್ಬರ ಕಣ್ಣೀರಿಗೆ ಸೋತು ಹನೂರು ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರಂತೆ. ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಜನತೆಗೆ ತಕ್ಕಮಟ್ಟಿಗೆ ಚಿರಪರಿಚಿತರಾಗಿರುವ ಪರಿಮಳ ನಾಗಪ್ಪ ಅವರು ಕಣ್ಣೀರು ಹಾಕಿದ್ದೇ ತಡ ಸೋಮಣ್ಣ ಕರಗಿ 'ಈ ಕ್ಷೇತ್ರ ನೀನೆ ಇಟ್ಟುಕೊಳ್ಳಮ್ಮ' ಎಂದು ಹೇಳಿದ್ದರು.

ನಂತರ ಹನೂರು ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಎಸ್ಪಿ ಪಕ್ಷದ ಪರಿಮಳಾ ನಾಗಪ್ಪ ಅವರು ವಿಧ್ಯುಕ್ತವಾಗಿ ಜೆಡಿಎಸ್ ಸೇರಿದರು. ಯಡಿಯೂರಪ್ಪ ನೇತೃತ್ವದ ಕೆಜೆಪಿ ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡು 5ನೇ ಬಾರಿ ಪಕ್ಷ ಬದಲಾಯಿಸಿದ್ದು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಹೀಗಾಗಿ ಸೋಮಣ್ಣ ಅವರಿಗೆ ಹನೂರು ಕ್ಷೇತ್ರ ಮತ್ತೆ ಒಲಿದು ಬಂದಿದೆ.

ವಿಜಯನಗರ ಸಾಮ್ರಾಜ್ಯದ ಗೋವಿಂದರಾಜನಗರದಲ್ಲಿ ತನ್ನ ಮುಂದೆ ಬೆಳೆದ ಪ್ರಿಯಾಕೃಷ್ಣ ಎಂಬ ಕಾಂಗ್ರೆಸ್ಸಿನ ಶ್ರೀಮಂತ ಯುವ ನಾಯಕನ ವಿರುದ್ಧ ಮತ್ತೊಮ್ಮೆ ಸೋಲಿನ ರುಚಿ ಕಾಣುವ ಭೀತಿ ಕೂಡಾ ಸೋಮಣ್ಣ ಅವರಿಗೆ ಕಾಡುತ್ತಿದೆ ಎನ್ನಲಾಗಿದೆ. ಆದರೂ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಸೋಮಣ್ಣ ಅವರು ಸಿದ್ದ ಗಂಗಾ ಮಠಕ್ಕೆ ಹೋಗಿ ಬಂದ ಮೇಲೆ ಎಲ್ಲವೂ ಬದಲಾಗಿದೆ. ಮತ್ತೊಮ್ಮೆ ಯಡಿಯೂರಪ್ಪ ಅವರ ನೆರಳಾಗಿ ವೀರಶೈವ ನಾಯಕ ಸೋಮಣ್ಣ ಕಾಣಿಸಿಕೊಳ್ಳುವುದು ಖಚಿತವಾಗಿದೆ ಎಂದು ತಿಳಿದು ಬಂದಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+