ರಾಜಕೀಯ ನಿವೃತ್ತಿ ಪಡೆಯುತ್ತಾರಂತೆ ಜಿ.ಪರಮೇಶ್ವರ್

ಒಂದು ವಾರಗಳ ದೆಹಲಿ ಪ್ರವಾಸದ ನಂತರ ಸೋಮವಾರ ತಮ್ಮ ಸ್ವ ಕ್ಷೇತ್ರ ಕೊರಟಗೆರೆಗೆ ಆಗಮಿಸಿದ ಜಿ.ಪರಮೇಶ್ವರ್, ಇಂದಿನ ರಾಜಕಾರಣದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕಾಂಗ್ರೆಸ್ ಪಕ್ಷದಲ್ಲೂ ಯುವಕರಿಗೆ ಆದ್ಯತೆ ದೊರೆಯಬೇಕು ಎಂದರು.
ಹಿರಿಯರು ಹೆಚ್ಚುದಿನ ರಾಜಕಾರಣದಲ್ಲಿದ್ದರೆ, ಯುವಕರಿಗೆ ಆದ್ಯತೆ ದೊರೆಯುವುದಿಲ್ಲ. ಆದ್ದರಿಂದ ನಾನು ಹೆಚ್ಚುದಿನ ರಾಜಕಾರಣದಲ್ಲಿ ಮುಂದುವರೆಯುವುದಿಲ್ಲ. ಶ್ರೀಘ್ರದಲ್ಲೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿಳಿಸಿದರು. ಸ್ವ ಕ್ಷೇತ್ರದಲ್ಲಿ ಪರಮೇಶ್ವರ್ ನೀಡಿದ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಏ.5ಕ್ಕೆ ಪಟ್ಟಿ : ದೆಹಲಿಯಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಏ.5ರಂದು ಮೊದಲ ಪಟ್ಟಿ ಬಿಡುಗಡೆಗೊಳ್ಳಲಿದೆ ಎಂದು ಪರಮೇಶ್ವರ್ ಹೇಳಿದರು. ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಟಿಕೆಟ್ ನೀಡಲು ಗೆಲ್ಲುವ ಮಾನದಂಡಗಳನ್ನು ಮಾತ್ರ ಇಟ್ಟುಕೊಳ್ಳಲಾಗಿದೆ. ಹಣ, ಜನ ಬೆಂಬಲವಿರುವ ಅಭ್ಯರ್ಥಿಗಳಿಗೆ ಒತ್ತಡಕ್ಕೆ ಒಳಗಾಗಿ ಟಿಕೆಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಸೋನಿಯಾ ಗಾಂಧಿ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಆಧ್ಯತೆ ನೀಡಿಲ್ಲ ಎಂದು ಕೋಪಗೊಂಡಿದ್ದರು ಸತ್ಯಕ್ಕೆ ದೂರವಾದ ಸಂಗತಿ ಎಂದರು.
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ನಾಲ್ವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಅನ್ಯ ಪಕ್ಷದಿಂದ ವಲಸಿಗರನ್ನು ಪಕ್ಷಕ್ಕೆ ಸೇಪರ್ಡೆ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
500 ರಿಂದ 800 ಮತ್ತು ಸಾವಿರ ಮತಗಳ ಅಂತರದಿಂದ ಸೋತ ಎಂಟು ಅಭ್ಯರ್ಥಿಗಳಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಕ್ರಿಮಿನಲ್ ಹಿನ್ನಲೆ ಉಳ್ಳವರು, ಜೈಲು ಶಿಕ್ಷೆ ಅನುಭವಿಸಿದವರಿಗೆ ಟಿಕೆಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications