ತುಮಕೂರು: ಶಿರಾ ಜೆಡಿಎಸ್ ಅಭ್ಯರ್ಥಿ ಪ್ರಕಟ!

ಜೆಡಿಎಸ್ ಅಭ್ಯರ್ಥಿಯ ಹೆಸರು ಬೆಳಕಿಗೆ ಬಂದಿದೆ. ಕಳೆದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಪಕ್ಷದ ಹಿರಿಯ ನಾಯಕ ಬಿ ಸತ್ಯನಾರಾಯಣ ಅವರೇ ಇಲ್ಲಿನ ಸ್ವಘೋಷಿತ ಅಭ್ಯರ್ಥಿ.
ಸ್ವಘೋಷಿತ ಏಕೆಂದರೆ ಇನ್ನೂ ಅಧಿಕೃತ ಪಟ್ಟಿ ಪ್ರಕಟವಾಗಿಲ್ಲ. ಇದೇ ವೇಳೆ, ಸ್ಥಳೀಯ ಪ್ರಭಾವಿ ನಾಯಕ ಸತ್ಯನಾರಾಯಣ ಅವರು ತಾವೇ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂಬಂತೆ ಚಲಾವಣೆಗೆ ಬಂದಿದ್ದಾರೆ. ಜತೆಗೆ ಇದೇ ಕೊನೆಯ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ. ನಿಮ್ಮ ಮುಂದೆ ಬಂದು ಮತ ಯಾಚಿಸುವುದಿಲ್ಲ ಎಂದು ಮಾಜಿ ಸಚಿವರೂ ಆದ ಸತ್ಯಾನಾರಾಯಣ ಪರ ಅವರ ಅಭಿಮಾನಿಗಳು ತಾಲೂಕಿನ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸತ್ಯನಾರಾಯಣ ಅವರು ಕೊನೆಯ ಬಾರಿಗೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಅವರು ಗೆದ್ದರೆ ಶಿರಾ ತಾಲೂಕು ಸಮಗ್ರ ಅಭಿವೃದ್ಧಿ ಕಾಣಲಿದೆ. ಹಾಗಾಗಿ ಅವರನ್ನೇ ಗೆಲ್ಲಿಸಿ ಎಂದೂ ಅಭಿಮಾನಿಗಳು ಕೋರಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ ಈ ಬಾರಿಯೂ ಅವರು ಕಾಂಗ್ರೆಸ್ಸಿನ ಪ್ರಭಾವಿ ನಾಯಕ, ಕಳೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಟಿಬಿ ಜಯಚಂದ್ರ ಅವರ ವಿರುದ್ಧ ಸತ್ಯನಾರಾಯಣ ಅಂತಿಮ ಹೋರಾಟ ನಡೆಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications