ದುಶಾಸಕನ ವರ್ಣನೆ ಕೇಳಿ ಪ್ರಜ್ಞೆತಪ್ಪಿದ ಕಬಡ್ಡಿ ಆಟಗಾರ್ತಿ

Badshahpur legislator remarks on clothes Kabaddi coach faints
ಗುರಗಾಂವ್, ಮಾ 23: ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ಮತ್ತು ರಾಷ್ಟ್ರೀಯ ಕಬಡ್ಡಿ ಕೋಚ್ ಸುನಿಲ್ ದಬಾಸ್ ಅವರು ಸ್ಥಳೀಯ ಕಾಂಗ್ರೆಸ್ ಶಾಸಕ ತನ್ನ ಉಡುಪಿನ ಬಗ್ಗೆ ವರ್ಣನೆ ಮಾಡುತ್ತಿದ್ದಂತೆ ಪ್ರಜ್ಞೆ ತಪ್ಪಿ ವೇದಿಕೆಯಲ್ಲೇ ಕುಸಿದುಬಿದ್ದು, ಆಸ್ಪತ್ರೆ ಸೇರಿದ್ದಾರೆ.

ಕೋಚ್ ಸುನಿಲ್ ದಬಾಸ್ ಗುರಗಾಂವ್ ನಲ್ಲಿರುವ ದ್ರೋಣಾಚಾರ್ಯ ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ವೇದಿಕೆಯೆ ಮೇಲಿದ್ದ ದಬಾಸ್ ಅವರನ್ನುದ್ದೇಶಿಸಿ ದುಶ್ಶಾಸಕ ಮಹಾಶಯ ರಾವ್ ಧರಂ ಪಾಲ್ ಅವರು 'ನೀನು ಇನ್ನೂ ಉತ್ತಮ ಉಡುಪನ್ನು ಧರಿಸಬಾರದೇ?' ಎಂದು ಕೇಳಿದ್ದಾರೆ.

ಆ ವೇಳೆ ದಬಾಸ್ ಎಲ್ಲರಂತೆ ಪ್ಯಾಂಟ್ ಮತ್ತು ಟಾಪ್ ಅನ್ನು ಧರಿಸಿದ್ದರು. ರಾವ್ ಧರಂ ಪಾಲ್ ಬಾದಷಾಪುರದ ಹಾಲಿ ಕಾಂಗ್ರೆಸ್ ಶಾಸಕ ಎಂದು ಪೊಲೀಸರು ತಿಳಿಸಿದ್ದಾರೆ. ದಬಾಸ್ ಅವರಿಗೆ ಪ್ರಜ್ಞೆ ಮರಳಿದ ಮೇಲೆ ಆಕೆ ನೀಡುವ ಹೇಳಿಯನ್ನು ಆಧರಿಸಿ ಮುಂದಿನ ಕಾರ್ಯಾಚರಣೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಏನಾಯಿತೆಂದರೆ ... ದ್ರೋಣಾಚಾರ್ಯ ಕಾಲೇಜಿನಲ್ಲಿ ವಾರ್ಷಿಕೋತ್ಸವ ಅಂಗವಾಗಿ ಶಾಸಕ ರಾವ್ ಧರಂ ಪಾಲ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಶಾಸಕರನ್ನು ವೇದಿಕೆಯ ಮೇಲಿದ್ದವರಿಗೆ ಪರಿಚಯಿಸಲಾಗುತ್ತಿತ್ತು. ಕೋಚ್ ಸುನಿಲ್ ದಬಾಸ್ ಅವರ ಸರದಿ ಬಂದಾಗ ಶಾಸಕ ಧರಂ ಪಾಲ್ 'ನೀನು ಒಳ್ಳೆಯ ಆಟಗಾರ್ತಿ. ಉತ್ತಮ ಕೋಚ್ ಸಹ. ನೀನು ಒಳ್ಳೆಯ ಡ್ರೆಸ್ ಧರಿಸಬೇಕು' ಎಂದಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಶಾಸಕ ಮಹಾಶಯ ಕಾರ್ಯಕ್ರಮ ಮುಂದುವರಿದಿದ್ದಾಗ ಮತ್ತೆ ಆಕೆಯ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅವಮಾನವನ್ನು ಸಹಿಸದ ಕೋಚ್ ಸುನಿಲ್ ದಬಾಸ್ ಅವರು ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜಿನ ವಿದ್ಯಾರ್ಥಿಗಳು ಶಾಸಕನ ಕಾಕದೃಷ್ಟಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+