ನಾಗರಾಜ ಶೆಟ್ಟಿ: ಜೆಡಿಎಸ್ ತೊರೆದು ಕೆಜೆಪಿ ಹೊಸ್ತಿಲಿಗೆ

Dakshina Kannada Nagaraj Shetty quits JDS may join KJP
ಮಂಗಳೂರು, ಮಾ.23: ಚುನಾವಣೆಯ ಹೊಸ್ತಿಲಲ್ಲಿ ಜೆಡಿಎಸ್ ಪಕ್ಷಕ್ಕೆ ಕರಾವಳಿ ಭಾಗದಲ್ಲಿ ಸಣ್ಣಮಟ್ಟದ ಆಘಾತವಾಗಿದೆ. ಬಿಜೆಪಿ ಬಿಟ್ಟು ಧಾಂಧೂಂ ಎಂದು ಜೆಡಿಎಸ್ ಗೆ ಸೇರ್ಪಡೆಯಾಗಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಅವರು ಆರೇ ತಿಂಗಳಲ್ಲಿ ಕುಮಾರಣ್ಣಗೆ ಗುಡ್ ಬೈ ಹೇಳಿದ್ದಾರೆ. ಜತೆಗೆ, ಎಂಜಿ ಹೆಗ್ಡೆ ಅವರೂ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇದರಿಂದ ಈ ಭಾಗದಲ್ಲಿ ಕಳೆದೊಂದು ವರ್ಷದಿಂದ ಉತ್ಸಾಹದಿಂದ ಸಂಚರಿಸುತ್ತಿದ್ದ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಭಾರಿ ನಿರಾಶೆಯಾಗಿದೆ. ಶಕ್ಕು ಅಕ್ಕಾನೂ ಕೈಕೊಟ್ಟರು. ಚುನಾವಣೆ ಇರುವಾಗ ಈ ಭಾಗದ ಪ್ರಭಾವಿ ನಾಯಕ ನಾಗರಾಜ ಶೆಟ್ಟರೂ ಕೈಬಿಟ್ಟರು. ಈ ಮಧ್ಯೆ ಸದಾನಂದ ಗೌಡರು ದೇವೇಗೌಡರಿಗೆ ಎಷ್ಟೇ ನಿಷ್ಠರಾಗಿದ್ದರೂ ಅವರ ಪಕ್ಷದತ್ತ ಸುಳಿದಿಲ್ಲ.

ಪಕ್ಷದಲ್ಲಿ ಈ ಭಾಗದಲ್ಲಿ ಕಣ್ಣಿಗೆ ಕುಕ್ಕುತ್ತಿರುವ ಆಂತರಿಕ ಕಚ್ಚಾಟವೇ ಈ ಬೆಳವಣಿಗೆಗಳಿಗೆ ಹೇತುವಾಗಿದೆ ಎನ್ನಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಡಿಎಂ ಅಸ್ಲಾಂ ಮತ್ತು ಜಿಲ್ಲಾ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಅವರನ್ನು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಪಕ್ಷದಿಂದ ಕಿತ್ತುಹಾಕಿದ್ದು ತಮಗೆ ಬೇಸರವನ್ನುಂಟುಮಾಡಿದೆ ಎಂದು ನಾಗರಾಜ ಶೆಟ್ಟಿ ಮತ್ತು ಎಂಜಿ ಹೆಗ್ಡೆ, ಜೆಡಿಎಸ್ ತೊರೆದಿದ್ದಾರೆ.

ಅವರಿಬ್ಬರನ್ನೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳಬೇಕು ಎಂದು ಶೆಟ್ಟರು ಮತ್ತು ಹೆಗ್ಡೆ, ಕುಮಾರಸ್ವಾಮಿಯವರನ್ನು ಆಗ್ರಹಿಸಿದ್ದರು. ಆದರೆ ಅವರು ಅದನ್ನು ಕಿವಿಗೆ ಹಾಕಿಕೊಮಡಿಲ್ಲ. ಇದರಿಂದ ಬೇಸತ್ತು ಅನಿವಾರ್ಯವಾಗಿ ಪಕ್ಷಕ್ಕೆ ಗುಡ್ಗ ಬೈ ಹೇಳಿರುವುದಾಗಿ ಶೆಟ್ಟರು ತಿಳಿಸಿದ್ದಾರೆ.

ಅಷ್ಟೇ ಅಲ್ಲ. ಮುಂದಿನ ವಾರ ತಮ್ಮ ಇಶಾರೆ ಮೇರೆಗೆ ಇನ್ನೂ ಅನೇಕ ಮಂದಿ ಜೆಡಿಎಸ್ ತೊರೆಯಲಿದ್ದಾರೆ ಎಂದು ಬೆಳಗಾವಿಯಲ್ಲಿ ಹೆಗ್ಡೆ ತಿಳಿಸಿದ್ದಾರೆ. ಇದರಿಂದ ಕರಾವಳಿಯಲ್ಲಿ ನೆಲೆಸಲು ಬಂದಿದ್ದ ಜೆಡಿಎಸ್ ಗೆ ಭಾರಿ ಆಘಾತವಾಗಿದೆ.

ಆದರೆ ಇದು ಕೆಜೆಪಿಗೆ ವರವಾಗಲಿದ್ದು, ಯಡಿಯೂರಪ್ಪನವರ ಪುರಾತನ ಗೆಳೆಯ ನಾಗರಾಜ ಶೆಟ್ಟರು ಕೆಜೆಪಿ ಸೇರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+