ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿದ್ದಾರೆ 122 ಬಿಲೇನಿಯರ್ ಗಳು

|
Google Oneindia Kannada News

122 billionaires
ಮುಂಬೈ, ಮಾ.17 : ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹೇಳಿಕೆಗಳ ನಡುವೆಯೇ 122 ಜನ ಶತಕೋಟ್ಯಾಧೀಶ್ವರರು ದೇಶದಲ್ಲಿ ಇದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. 500 ಕೋಟಿ ರೂ.ಅಥವ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ 122 ಜನರು ಭಾರತದಲ್ಲಿದ್ದಾರೆ ಎಂದು ಇದರಿಂದ ತಿಳಿದು ಬಂದಿದೆ.

ಜಾಗತಿಕ ಆಸ್ತಿ ಸಲಹಾ ಸಂಸ್ಥೆ ನೈಟ್ ಫ್ರಾಂಕ್ 2013ರ ಜಾಗತಿಕ ಶ್ರೀಮಂತರ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ 543 ಬಿಲೇನಿಯರ್ ಗಳನ್ನು ಹೊಂದಿರುವ ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೆ, 122 ಬಿಲೇನಿಯರ್ ಗಳನ್ನು ಹೊಂದಿ ಭಾರತ ಐದನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಬಿಲೇನಿಯರ್ ಗಳನ್ನು ಹೊಂದಿರುವ ಹತ್ತು ರಾಷ್ಟ್ರಗಳ ಪಟ್ಟಿಯನ್ನು ನೈಟ್ ಫ್ರಾಂಕ್ ಪ್ರತಿವರ್ಷ ಸಿದ್ಧಪಡಿಸುತ್ತದೆ. ಈ ಪಟ್ಟಿಯಲ್ಲಿ ಭಾರತದ 122 ಬಿಲೇನಿಯರ್ ಗಳಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಖ್ಯೆ 225ಕ್ಕೆ ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಚೀನಾದಲ್ಲಿ 154 ಬಿಲೇನಿಯರ್ ಗಳಿದ್ದು ಎರಡನೇ ಸ್ಥಾನ ಪಡೆದಿದೆ. ಜರ್ಮನಿ 149 ಬಿಲೇನಿಯರ್ ಗಳಿಂದ ಮೂರನೇ ಸ್ಥಾನ ಪಡೆದಿದೆ. ಬ್ರಿಟನ್ 149 ಬಿಲೇನಿಯರ್ ಗಳನ್ನು ಹೊಂದಿದ್ದು ನಾಲ್ಕನೇ ಸ್ಥಾನಗಳಿಸಿದೆ. ಇಂಡೋನೇಷ್ಯಾದಲ್ಲಿ ಕೇವಲ 31 ಶತಕೋಟ್ಯಾಧೀಶರು ಇದ್ದು ಹತ್ತನೇ ಸ್ಥಾನಗಳಿಸಿದೆ.

ವಿಶ್ವದ ಪ್ರಭಾವಿ ಶ್ರೀಮಂತರು ಅಮೆರಿಕಾ ಮತ್ತು ಯುರೋಪ್ ನಲ್ಲಿ ನೆಲೆಸಿದ್ದರೂ ಭಾರತದಲ್ಲಿ ಸಿರಿವಂತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ. 150 ರಿಂದ 160 ಕೋಟಿ ಆಸ್ತಿ ಹೊಂದಿರುವ ವ್ಯಕ್ತಿಗಳ ಸಂಖ್ಯೆ ಮುಂದಿನ ಹತ್ತು ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂಬೈನಲ್ಲಿ ಶೇ137 ರಷ್ಟು ಜನರು ಶ್ರೀಮಂತರಾದರೆ, ದೆಹಲಿಯಲ್ಲಿ 120 ರಷ್ಟು ಜನರು ಸಿರಿವಂತರಾಗಲಿದ್ದಾರೆ ಎಂದು ಅಂದಾಜಿಲಾಗಿದೆ. ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ 30 ಜಾಗತಿಕ ನಗರಗಳ ಪೈಕಿ ಮುಂಬೈ 2015 ಶ್ರೀಮಂತರನ್ನು ಹೊಂದಿ 7 ನೇ ಸ್ಥಾನಗಳಿಸಿದೆ.

ದೆಹಲಿಯಲ್ಲಿ 1905 ಧನಿಕರಿದ್ದು 11ನೇ ಸ್ಥಾನದಲ್ಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಖ್ಯೆ 120 ರಷ್ಟು ಹೆಚ್ಚಾಗಲಿದೆ ಎಂದು ನೈಟ್ ಫ್ರಾಂಕ್ ವರದಿ ಹೇಳಿದೆ. ಈಗ ಹೇಳಿ ಸ್ವಾಮಿ ಭಾರತ ಬಡ ದೇಶವೇ?

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Knight Frank Wealth Report 2013. The global property consultancy firm ranks India at fifth spot with 122 billionaires (net assets of Rs 500 crore and above) as of 2012 end in the top 10 countries for billionaires. billionaires numbers is expected to more than double over the next 10 years in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X