ತಾಕತ್ತಿದ್ರೆ ಅನಂತ್ ನನ್ನೆದ್ರು ನಿಲ್ಲಲಿ: ಯಡಿಯೂರಪ್ಪ

BS Yeddyurappa again challenges Ananthkumar
ಬೆಂಗಳೂರು, ಮಾ.14: ಬಿಜೆಪಿ ವಿರುದ್ಧ ಮೊದಲ ಹಂತದ ಗೆಲುವು ಸಾಧಿಸಿಯಾಗಿದೆ. ಮುಂದಿನ ಹಂತದ ಹೋರಾಟಕ್ಕೆ ನಾವು ಸಿದ್ಧತೆ ನಡೆಸಿದ್ದೇವೆ. ಬಿಜೆಪಿ ಪಕ್ಷದ ನಾಯಕರಿಗೆ ತಾಕತ್ತಿದ್ದರೆ ಸಂಸದ ಅನಂತಕುಮಾರ್ ಅವರಿಗೆ ಚುನಾವಣಾ ಸಾರಥ್ಯ ನೀಡಿ ನನ್ನ ಎದುರು ನಿಲ್ಲಿಸಲಿ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಸವಾಲು ಎಸೆದಿದ್ದಾರೆ.

ಭಾರತೀಯ ಜನತಾ ಪಕ್ಷ ಮಿಕ್ಕ ಎಲ್ಲಾ ಪಕ್ಷಗಳಿಗಿಂತ ಮುಂಚಿತವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ಹೆಚ್ಚಿನ ಮೈಲೇಜ್ ಹೊಂದುವ ನಿರೀಕ್ಷೆ ಹೊಂದಿದ್ದಾರೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿ ಎಂದಿಗೂ ಒಬ್ಬ ನಾಯಕನ ಅಡಿಯಲ್ಲಿ ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ. ಸಾಮೂಹಿಕ ನಾಯಕತ್ವ ಎಂದಿಗೂ ಉತ್ತಮ ಫಲಿತಾಂಶ ತರುವುದಿಲ್ಲ ಎಂದರು.

ಹಗಲು ರಾತ್ರಿ ಕಷ್ಟ ಬಿದ್ದು ಪಕ್ಷ ಕಟ್ಟಿದ ನನ್ನ ಬೆನ್ನಿಗೆ ಚೂರಿ ಹಾಕಿದವರಿಗೆ ಬಿಜೆಪಿ ಹಿರಿಯ ನಾಯಕರು ಮನ್ನಣೆ ನೀಡಿದ್ದು ಇಂದಿಗೂ ಬೇಸರ ತರಿಸುತ್ತದೆ. ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟರು. ಆದರೆ, ಜನರಿಗೆ ನಾನು ಏನು ಎಂಬುದು ತಿಳಿದಿದೆ.

ಬಿಜೆಪಿ ನಾಯಕರು ಯಡಿಯೂರಪ್ಪನ ನೆರಳಿನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಯಡಿಯೂರಪ್ಪ ಅವರಿಗೆ ಬೇಡವಾದರು. ಅಧಿಕಾರದಿಂದ ಕೆಳಗಿಳಿಸುವ ಸಂಚನ್ನು ವ್ಯವಸ್ಥಿತವಾಗಿ ನಮ್ಮವರೇ ಮಾಡಿದ್ದು ದುರಂಅ.

ಪಕ್ಷದಲ್ಲಿ ಎಲ್ಲವೂ ನಾನೇ ಎಂದು ಹೇಳಿಕೊಳ್ಳುವ ಅನಂತ್ ಕುಮಾರ್ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿ. ಪಕ್ಷದ ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವ ಶ್ರಮ ಏನು ಎಂಬುದು ಅರಿವಾಗಲಿದೆ. ಚುನಾವಣೆ ಸಾರಥ್ಯ ವಹಿಸಿಕೊಂಡು ನಮ್ಮನ್ನು ಎದುರಿಸಲು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕೆಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಅವರನ್ನು ಸೋಲಿಸಲು ಸಜ್ಜಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+