ಹುತಾತ್ಮ ಯೋಧ ಸತೀಶನ ತ್ಯಾಗ ಮರೆಯದಿರಿ

ಶ್ರೀನಗರದಲ್ಲಿ ಗುರುವಾರ ಸೇನೆಯಿಂದ ಅಂತಿಮ ಗೌರವ ಸಮರ್ಪಣೆಯಾಗಲಿದೆ. ಗುರುವಾರ ಸಂಜೆ ಸತೀಶ್ (27) ಅವರ ಮೃತದೇಹ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿರುವ ಫ್ಲಾಗ್ ಆಫ್ ಆನರ್ ಫೌಂಡೇಷನ್ ಅವರನ್ನು ಗೌರವದಿಂದ ಬರಮಾಡಿಕೊಳ್ಳಲಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಯೋಧರನ್ನು ನೆನಪಿಟ್ಟುಕೊಳ್ಳುವಂತೆ ಮತ್ತು ಅವರ ಕುಟುಂಬಕ್ಕೆ ಆಸರೆಯಾಗುವಂತೆ ಕಾರ್ಯ ನಿರ್ವಹಿಸುತ್ತಿದೆ.
ಫ್ಲಾಗ್ ಆಫ್ ಆನರ್ ಫೌಂಡೇಷನ್‌ನ ಸಲಹೆಗಾರರಲ್ಲಿ ಒಬ್ಬರಾಗಿರುವ ಸಂಸದ ರಾಜೀವ್ ಚಂದ್ರಶೇಖರ್ ಅವರು ಯೋಧ ಸತೀಶನ ಕುಟುಂಬದವರಿಗೆ 2 ಲಕ್ಷ ರು. ನೀಡುವುದಾಗಿ ಹೇಳಿದ್ದಾರೆ. ಉಳ್ಳವರು ಫ್ಲಾಗ್ ಆಫ್ ಆನರ್ ಫೌಂಡೇಷನ್ ಮುಖಾಂತರ ಇಂತಹ ಹುತಾತ್ಮ ಯೋಧರ ಕುಟುಂಬದವರಿಗೆ ಹಣದ ಸಹಾಯ ಮಾಡಬಹುದು. ಅವರಿಗೆ ಹಣ ಸಹಾಯ ಮಾಡಲು ಆಗದಿದ್ದರೂ ಕನಿಷ್ಠ ನೆನಪಿನಲ್ಲಾದರೂ ಇಟ್ಟುಕೊಳ್ಳೋಣ ಎಂಬುದು ಫೌಂಡೇಷನ್‌ನ ಸಂದೇಶ.
ದೇಶಭಕ್ತ ಸತೀಶ : ಕೆಆರ್ ಪೇಟೆಯ ನಾರಾಯಣ ಶೆಟ್ಟಿ ಮತ್ತು ಸಾವಿತ್ರಮ್ಮ ಅವರ ಎರಡನೇ ಮಗನಾಗಿರುವ ಸತೀಶ ಚಿಕ್ಕಂದಿನಿಂದಲೂ ದೇಶಪ್ರೇಮ ಬೆಳೆಸಿಕೊಂಡಿದ್ದರು. ತನ್ನ ಅಣ್ಣ ಹರೀಶ್‌ನಂತೆ ಸತೀಶನೂ ದೇಶಸೇವೆಗಾಗಿ ತನ್ನ ಜೀವನವನ್ನು ಮುಡಿಪಿಟ್ಟಿದ್ದರು. 2007ರಲ್ಲಿ ಸಿಆರ್‌ಪಿಎಫ್ ಸೇರಿ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ದೇಶಸೇವೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಯಾವ ವೃತ್ತಿಯಲ್ಲಿಯೂ ಸಿಗುವುದಿಲ್ಲ ಎಂದು ಸತೀಶ್ ಹೆಮ್ಮೆಯಿಂದ ಹೇಳುತ್ತಿದ್ದರು.
ಕೇವಲ 20 ದಿನಗಳ ಹಿಂದೆ ತಾಯಿಯನ್ನು ಕಾಣಲು ಬಂದಿದ್ದ ಸತೀಶ ಮದುವೆಯ ಯೋಜನೆಯನ್ನು ಕೂಡ ಹಾಕಿಕೊಂಡಿದ್ದರು. ಆದರೆ, ಅಷ್ಟರಲ್ಲಿ ವಿಧಿಯ ಆಟವೇ ಬೇರೆಯಾಗಿತ್ತು. ತಾಯಿ ಸಾವಿತ್ರಮ್ಮನವರಿಗೆ ಮಗನ ಸಾವು ಬರಸಿಡಿಲಿನಂತೆ ಬಂದೆರಗಿದೆ. ಎರಡು ವರ್ಷಗಳ ಹಿಂದೆ ಸತೀಶ ತಂದೆ ನಾರಾಯಣ ಶೆಟ್ಟಿಯವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆಲಂಬಾಡಿಗೆ ಮೃತದೇಹ ಬಂದಕೂಡಲೆ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications