ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಅಯ್ಯಪ್ಪ ಬಂಧನ

ಅಯ್ಯಪ್ಪ, ವಿಶೇಷ ತಹಸೀಲ್ದಾರ್ ಗೋಸ್ವಾಮಿ, ಉಪ ನೋಂದಣಾಧಿಕಾರಿ ರವಿಕುಮಾರ್, ಕಂದಾಯ ಇಲಾಖೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನೂ ಇದೇ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ 32 ಎಕರೆ ಸರಕಾರಿ ಭೂ ದಾಖಲೆ ತಿದ್ದಿದ ಆರೋಪದ ಮೇಲೆ ಅಯ್ಯಪ್ಪ ಅವರನ್ನು ಬುಧವಾರ ಮಧ್ಯಾಹ್ನ ಬೆಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಭೂ ದಾಖಲೆ ತಿದ್ದಿದ ನಾಲ್ವರೂ ಆರೋಪಿಗಳು ಯಲಹಂಕದ ನರಸಿಂಹಯ್ಯ ಅವರಿಗೆ 32 ಎಕರೆ ಭೂಮಿಯನ್ನು ಪರಭಾರೆ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತ ಕೋರ್ಟಿನಲ್ಲಿ ದೂರು ದಾಖಲಾಗಿತ್ತು. ನರಸಿಂಹಯ್ಯ ಯಲಹಂಕ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಅವರ ಸಂಬಂಧಿ.
ಜಿಲ್ಲಾಧಿಕಾರಿ ಅಯ್ಯಪ್ಪ ಅವರು ಡಿನೋಟಿಫಿಕೇಶನ್ ಸೇರಿದಂತೆ ಅನೇಕ ಭೂ ಅಕ್ರಮಗಳನ್ನು ಎದುರಿಸುತ್ತಿದ್ದಾರೆ.
ವಿಶ್ವನಾಥ್ ನಿರಾಕರಣೆ: 'ಪ್ರಕರಣ ನಡೆದಿರುವುದು ನಿಜ. ದಾಖಲೆ ತಿದ್ದಿರುವ ಆರೋಪ ನಿಜ. ಆದರೆ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ' ಎಂದು ಶಾಸಕ ವಿಶ್ವನಾಥ್ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ಶಾಸಕ ವಿಶ್ವನಾಥ್ ಅವರು 15ನೆಯ ಆರೋಪಿ.












Click it and Unblock the Notifications