ಸಿದ್ದರಾಮಯ್ಯ ಸಿಎಂ ಆಗೋ ಕನಸು ಚಿಗುರಿದೆ

ಮೈಸೂರು, ಮಾ.13: ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗೋ ಕನಸು ನಿನ್ನೆ ಮೊನ್ನೆಯದಲ್ಲ, ಹಲವು ವರ್ಷಗಳ ತೀರದ ಬಯಕೆ, ಕಾಂಗ್ರೆಸ್ ಸೇರುವ ಮುನ್ನ ದಿನದಿಂದಲೂ ಸಿದ್ದು ಅವರಿಗೆ 'ಸಿಎಂ' ಆಗೋ ಅವಕಾಶಗಳು ಬಂದಿತ್ತು, ಆದರೆ, ಸಿದ್ದುಗೆ ಈ ಬಾರಿ ಸಿಎಂ ಆಗೋ ಕನಸು ಈಡೇರುವ ಸಾಧ್ಯತೆಯಿದೆ

ಮುಂದಿನ ಸಿಎಂ ನಾನೇ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಆರಿಸಿ ಬರಲಿದೆ. ಕಾಂಗ್ರೆಸ್ ಪಕ್ಷ ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೋರಿದ ಸಾಧನೆ ಮುಂಬರುವ ಚುನಾವಣೆಯಲ್ಲಿ ರಿಪೀಟ್ ಆಗಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ವರುಣಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ (ಮಾ.13) ಅಡ್ಡಾಡಿದ ಸಿದ್ದರಾಮಯ್ಯ ಅವರು ಮತದಾರರಿಗೆ ಭರಪೂರ ಭರವಸೆಗಳನ್ನು ನೀಡುತ್ತಾ ಮೇಲ್ಕಂಡ ಹೇಳಿಕೆ ನೀಡಿದ್ದಾರೆ. ಗ್ರಾಮಗಳಲ್ಲಿ ಒಳ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಿದ್ದರಾಮಯ್ಯ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯನ್ನು ವಿಶ್ಲೇಷಿಸಿದರು.

ಸಮ್ಮಿಶ್ರ ಸರ್ಕಾರ ಬಂದರೆ ಯಾರು ಸಿಎಂ ಆಗುತ್ತಾರೆ? ಯಾರು ಕಿಂಗ್ ಮೇಕರ್ ಆಗುತ್ತಾರೆ ಎಂಬುದು ಈಗಲೇ ಹೇಳಲು ಬರುವುದಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತ. ಕಾಂಗ್ರೆಸ್ ಕಡೆಯಿಂದ ಸಿಎಂ ಆಗೋದು ನಾನೇ ಎಂದು ಸಿದ್ದರಾಮಯ್ಯ ಅವರು ವಿಷಯ ತೆಗೆದಿದ್ದರಿಂದ ನಾವು ಕೂಡಾ ಸಿಎಂ ಆಗಬಲ್ಲ ಸಂಭಾವ್ಯ ಅಭ್ಯರ್ಥಿಗಳನ್ನು ಚಿತ್ರ ಸರಣಿಯಲ್ಲಿ ತುಂಬಿಸಿ ನಿಮ್ಮ ಮುಂದಿಡುತ್ತಿದ್ದೇವೆ.. ಓದಿಕೊಳ್ಳಿ..

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಕಾಂಗ್ರೆಸ್ 1960 ಸ್ಥಾನಗಳನ್ನು ಗಳಿಸಿರುವುದು ಕಡಿಮೆ ಸಾಧನೆಯೇನಲ್ಲ. ಬಿಜೆಪಿ, ಜೆಡಿಎಸ್ ಹಾಗೂ ಈಗ ಹುಟ್ಟಿಕೊಂಡಿರುವ ಕೆಜೆಪಿ, ಶ್ರೀರಾಮುಲು ಅವರ ಬಿಎಸ್ ಆರ್ ಪಕ್ಷ ಕಾಂಗ್ರೆಸ್ ಗೆ ಯಾವುದೇ ರೀತಿಯಲ್ಲೂ ಸರಿ ಸಮಾನ ಪಕ್ಷಗಳಾಗದೇ ಧೂಳಿಪಟವಾಗಿದೆ.

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಹಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎನ್ನಲಾಗಿದೆ. ಅದರಂತೆ, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವೂ ನಮ್ಮ ಪರವಾಗೇ ಬಂದಿದೆ. ಮತದಾರರ ಚಿತ್ರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ನೆಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ತಂದು ನಾನು ಮುಖ್ಯಮಂತ್ರಿಯಾದರೆ ಅದರ ಸಂಪೂರ್ಣ ಗೌರವ ನಿಮಗೆ ಸೇರುತ್ತದೆ ಎಂದು ತಮ್ಮ ಮತದಾರರಿಗೆ ಹೇಳಿದರು.

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಹಿಂದೇಟು ಹಾಕುತ್ತಿದೆ. ಸ್ವಂತ ಕ್ಷೇತ್ರದಲ್ಲೇ ಹೆಸರು ಉಳಿಸಿಕೊಳ್ಳಲು ಪರಮೇಶ್ವರ್ ಒದ್ದಾಡುತ್ತಿರುವುದು ಅವರಿಗೆ ಮುಳುವಾಗಿದೆ. ಮೀಸಲಾತಿ ಕ್ಷೇತ್ರದ ಅಭ್ಯರ್ಥಿ, ಸಭ್ಯ ರಾಜಕಾರಣಿ ಎನಿಸಿದರೂ ಮುಂದಕ್ಕೆ ಪರಮೇಶ್ವರ್ ಬಗ್ಗೆ ಪದಗಳು ಸಿಗುವುದಿಲ್ಲ

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಹತ್ತು ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಡಿಕೆ ಶಿವಕುಮಾರ್ ಅವರು ತಮ್ಮ ಗುರು ಎಸ್ ಎಂ ಕೃಷ್ಣರಂತೆ ಇನ್ನೂ ತೆರೆ ಮರೆಯಲ್ಲೇ ಆಟವಾಡುತ್ತಿದ್ದರೆ ಮುಂಚೂಣಿಗೆ ಬಂದು ಸಿಎಂ ಕ್ಯಾಡಿಡೇಟ್ ನಾನ್ಯಾಕೆ ಆಗಬಾರದು ಎಂದು ಹೇಳುವ ಧೈರ್ಯ ಕೂಡಾ ತೋರಿಸಿಲ್ಲ.

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ರಾಜ್ಯಕ್ಕೆ ಬಂದು ಏನೋ ದೊಡ್ಡ ಸಂಚಲನ ಉಂಟು ಮಾಡುತ್ತಾರೆ ಎಂಬ ನಿರೀಕ್ಷೆ ಇನ್ನೂ ಹಾಗೆ ಇದೆ. ಪಕ್ಷೇತರರ ಜೊತೆ ಡೀಲ್ ಕುದಿರಿಸಿದ್ದು ಬಿಟ್ಟರೆ, ಎಐಸಿಸಿ ಮೀಟಿಂಗ್ ಸೇರಿ ಹಲವು ಸಭೆಗಳಿಗೆ ಗೈರು ಹಾಜರಿಯಾಗಿದ್ದರು. ಮತ್ತೆ ಸಿಎಂ ಆಗಲು ಕೃಷ್ಣ ಅವರಿಗೆ ವರ್ಚಸ್ಸಿಗಿಂತ ವಯಸ್ಸೇ ಅಡ್ಡಿ ಮಾಡುವ ಸಾಧ್ಯತೆ ಹೆಚ್ಚು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ರಾಜ್ಯದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಸ್ಥಾನಕ್ಕೇರಲು ಮೂಡಿಗೆರೆಯ ಮೋಟಮ್ಮ ಅವರೇನೋ ಸಿದ್ಧ ಆದರೆ, ಪಕ್ಷದಲ್ಲೇ ಈ ಬಗ್ಗೆ ಅಪಸ್ವರಗಳು ಹೆಚ್ಚಾಗಿದೆ. ಪರಿಷತ್ತಿನ ನಾಯಕಿಯಾಗಿ ಮೋಟಮ್ಮ ಸೀಟು ಏರಿದಾಗ ಬೆನ್ನು ತಟ್ಟಿದದವರಿಗಿಂತ ಕೆಮ್ಮಿದವರೇ ಹೆಚ್ಚು.

ಆಯಕಟ್ಟಿನ ಜಾಗಗಳಲ್ಲಿ ಎಸ್ ಸಿ, ಎಸ್ ಟಿ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ಮಾದರಿಯಾಗಿರುವ ಕಾಂಗ್ರೆಸ್ ಹೈ ಕಮಾಂಡ್ ಮೋಟಮ್ಮ ವಿಷಯದಲ್ಲಿ ಇನ್ನೂ ಏನು ನಿರ್ಧರಿಸಿಲ್ಲ.
ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಗೆದ್ದ ಎತ್ತಿನ ಬಾಲ ಹಿಡಿಯುವ ಶೂರರು

ಲೆಕ್ಕಕ್ಕೆ ಇರಲಿ ಎಂದು ಶಾಮನೂರು ಶಿವಶಂಕರಪ್ಪ ಅವರನ್ನು ಈ ಪಟ್ಟಿಯಲ್ಲಿ ಸೇರಿಸಬೇಕಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಸಿದ ಲಾಬಿಯಲ್ಲೇ ಸೋತಿರುವ ಬಹುಸಂಖ್ಯಾತ ಜನಾಂಗಕ್ಕೆ ಸೇರಿದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ಸಂಪೂರ್ಣ ಕಾಂಗ್ರೆಸ್ ವಶಕ್ಕೆ ತಂದರೆ ಅದೇ ದೊಡ್ಡ ಸಾಧನೆ. ಸಿಎಂ ಆಗುವುದು ಕನಸಿನ ಮಾತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+