ತುಮಕೂರು ಸಹಕಾರ ಬ್ಯಾಂಕ್ ನೌಕರಿಗೆ ಅರ್ಜಿ ಹಾಕಿಕೊಳ್ಳಿ
ತುಮಕೂರು, ಮಾ.13: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಾನಾ ಶ್ರೇಣಿಯ ಅಧಿಕಾರಿ ವರ್ಗದ ಒಟ್ಟು 32 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇನ್ನೂ ಒಂದು ತಿಂಗಳ ಕಾಲಾವಕಾಶ ಇದ್ದು, ತಕ್ಷಣವೇ ಅರ್ಜಿ ಸಲ್ಲಿಸಬಹುದು. NABARD ಮಾರ್ಗಸೂಚಿಯಂತೆ ಉತ್ತಮ ವೇತನ ಶ್ರೇಣಿಯ ಉದ್ಯೋಗಾವಕಾಶ ಇದಾಗಿದೆ.
36 ಸಾವಿರ ರೂ ಮಾಸಿಕ ಸಂಬಳದ ಒಂದು ಮ್ಯಾನೇಜರ್ ಹುದ್ದೆಯಿಂದ ಹಿಡಿದು 24 ಸಾವಿರ ರೂ ವೇತನದ ಜೂನಿಯರ್ ಅಸಿಸ್ಟೆಂಟ್ ಹುದ್ದೆ ಸೇರಿದಂತೆ ನಾನಾ ಶ್ರೇಣಿಯ ಅಧಿಕಾರಿ ವೃಂದವು ಸದರಿ ಬ್ಯಾಂಕಿಗೆ ಬೇಕಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಾಮಾನ್ಯ ಪದವಿ ಪಡೆದಿರಬೇಕು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ನಗರ ಕಚೇರಿ, ಪೊಲೀಸ್ ಠಾಣೆ ಪಕ್ಕ, ಚರ್ಚ್ ಸರ್ಕಲ್, ತುಮಕೂರು-572101 ಈ ವಿಳಾಸಕ್ಕೆ ಏಪ್ರಿಲ್ 13, 2013ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸಲು ಇಚ್ಚೆಯುಳ್ಳವರು ಬ್ಯಾಂಕ್ ಪ್ರಕಟಿಸಿರುವ ಮಾದರಿಯಲ್ಲಿ ಸಮಂಜಸ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.
* ವಯಸ್ಸಿನ ಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ, ಪರಿಶಿಷ್ಟ ಜಾತಿ/ಪಂಗಡದವರು 40 ವರ್ಷ ದಾಟಿರಬಾರದು.
* ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂ. ಇತರರಿಗೆ 200 ರೂ.
* ದೂರವಾಣಿ ಸಂಖ್ಯೆ: 0816- 2260 146
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications