ತಪ್ಪು ವರದಿಗಾರಿಕೆ: ಸಂಪಾದಕರದ್ದೇ ಸುಪ್ರೀಂ ಹೊಣೆಗಾರಿಕೆ

ಸುಪ್ರೀಂ ಭಯ: ಹೀಗೆ ಸುಪ್ರೀಂ ದಂಡವನ್ನು ಝಳಪಿಸಿರುವ ಸರ್ವೋಚ್ಛ ನ್ಯಾಯಾಲಯವು 'ತಪ್ಪು ಅಥವಾ ಅವಹೇಳನಕಾರಿ ಸುದ್ದಿ ಪ್ರಕಟಿಸಿದಾಗ ಅದರ ವಿರುದ್ಧ ನಾಗರಿಕ ಅಥವಾ ಅಪರಾಧಿಕ ಕೇಸು ದಾಖಲಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಆ ಪತ್ರಿಕೆಯ ಸಂಪಾದಕರು ಹೊರಬೇಕಾಗುತ್ತದೆ' ಎಂದು ಆದೇಶಿಸಿದೆ.
'ತನ್ನ ಅನುಮತಿಯಿಲ್ಲದೆ/ ತನ್ನ ಗಮನಕ್ಕೆ ಬಾರದೆ ಸುದ್ದಿ ಬರೆದಿದ್ದಾರೆ ಎಂದು ಸಂಪಾದಕ ಸಬೂಬು ಹೇಳಿ ನುಣುಚಿಕೊಳ್ಳುವಂತಿಲ್ಲ. ಏಕೆಂದರೆ ಸುದ್ದಿ ಆಯ್ಕೆ ಪ್ರಕ್ರಿಯೆಯ ಮೇಲೆ ಸಂಪಾದಕರಿಗೇ ಸುಪ್ರೀಂ ಹಿಡಿತವಿರುತ್ತದೆ. ಹಾಗಾಗಿ ಅವಮಾನಕರ ಸುದ್ದಿಗೆ ಸಂಪಾದಕರೇ ಬಾಧ್ಯಸ್ಥರಾಗುತ್ತಾರೆ' ಎಂಬುದು ಆದೇಶದ ಸಾರ.
'Press and Registration of Books Act ಅನುಸಾರ ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಆಯ್ಕೆ ಮಾಡುವ ಪರಮಾಧಿಕಾರ ಸಂಪಾದಕರದ್ದಾಗಿರುತ್ತದೆ. ಪತ್ರಿಕೆಯ ಪ್ರತಿಯೊಂದು ಪ್ರತಿಯಲ್ಲೂ ಸಂಪಾದಕ ಮತ್ತು ಮಾಲೀಕರ ಹೆಸರುಗಳು ಇರುತ್ತವೆ. ಹಾಗಾಗಿ ಸಂಪಾದಕರೇ ಇಡೀ ಪತ್ರಿಕೆಯ ಜವಾಬ್ದಾರಿ ಹೊರಬೇಕಾಗುತ್ತದೆ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
'ಪತ್ರಿಕೆ ನಡೆಸುವುದು ಅಂದರೆ ದೇಶವನ್ನು ಮುನ್ನಡೆಸಿದಂತೆ' ಎಂದು ಈ ಹಿಂದೆ ವಿದೇಶಿ ಪತ್ರಕರ್ತರೊಬ್ಬರು ಸಂಪಾದಕರ ಹೊಣೆಗಾರಿಕೆ ಬಗ್ಗೆ ಹೇಳಿರುವುದನ್ನು ನ್ಯಾಯಪೀಠ ಇದೇ ಸಂದರ್ಭೋಚಿತವಾಗಿ ಉಲ್ಲೇಖಿಸಿತು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ...
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications