ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1648ಕೋಟಿ ದಾನ: ಬೆಂಗಳೂರು ಉದ್ಯಮಿ ಮೆನನ್ ಸರದಿ

By Srinath
|
Google Oneindia Kannada News

ದುಬೈ, ಮಾ. 8: ಮೊನ್ನೆಯಷ್ಟೇ ವಿಪ್ರೊ ಸಾಫ್ಟ್‌ವೇರ್ ಕಂಪನಿಯ ಅಧ್ಯಕ್ಷ, ಅಚ್ಚ ಕನ್ನಡಿಗ, ಹೃದಯ ಶ್ರೀಮಂತ ಅಜೀಂ ಪ್ರೇಮ್‌ ಜಿ ಅವರು 12,300 ಕೋಟಿ ರೂ. ದಾನ ಮಾಡಿ ಭಾರತದಲ್ಲಿ ಅತಿದೊಡ್ಡ ದಾನಿ ಅನ್ನಿಸಿಕೊಂಡಿದ್ದಾರೆ.

ಈಗ ಅಜೀಂ ಪ್ರೇಮ್‌ ಜಿ ಮಾದರಿಯಲ್ಲೇ ಬೆಂಗಳೂರು ಮೂಲದ ಮತ್ತೊಬ್ಬ ಉದ್ಯಮಿ ತಮ್ಮ ಸಂಪತ್ತಿನ ಅರ್ಧ ಭಾಗವನ್ನು ಭಾರತ ಮತ್ತು ಒಮಾನಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ.

Bangalore After Wipro Premji- now Sobha Group Menon pledges donation

ಅವರೇ ದುಬೈ ಉದ್ಯಮಿ, ಶೋಭಾ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಪಿಎನ್ ಸಿ ಮೆನನ್. ಮೆನನ್ ಅವರು ತಮ್ಮ 3297 ಕೋಟಿ ರೂ (600 ದಶಲಕ್ಷ ಡಾಲರ್) ಆದಾಯದಲ್ಲಿ ಅರ್ಧದಷ್ಟನ್ನು ದಾನ ಮಾಡಲು ಮುಂದಾಗಿದ್ದಾರೆ. ಅಂದರೆ ಅವರು ರು 1,648 ಕೋಟಿಯಷ್ಟು ಹಣವನ್ನು ದಾನ ನೀಡಲಿದ್ದಾರೆ.

ಒಮಾನ್‌ ನಲ್ಲಿ 1976ರಲ್ಲಿ ಇಂಟೀರಿಯರ್ ಡೆಕೋರೇಷನ್ ಸಂಸ್ಥೆ ಮೂಲಕ ಉದ್ಯಮ ರಂಗಕ್ಕೆ ಕಾಲಿಟ್ಟ ಮೆನನ್ ನಂತರ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದರು. 1995ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ 'ಶೋಭಾ ಡೆವಲಪರ್ಸ್ ಸಂಸ್ಥೆ' ಶೋಭಾ ಗ್ರೂಪ್‌ನ ಒಂದು ಭಾಗವಾಗಿದೆ. ಈ ಕಂಪನಿಯಲ್ಲಿ 28,000 ಮಂದಿ ಉದ್ಯೋಗನಿರತರಾಗಿದ್ದಾರೆ. ಆತಿಥ್ಯೋದ್ಯಮಕ್ಕೆ ಹೆಚ್ಚಿನ ಬೇಡಿಕೆಯಿದ್ದು, ತಮ್ಮ ಸಂಸ್ಥೆ ಇನ್ನೂ ನೂರಾರು ಹೋಟೆಲುಗಳನ್ನು ಕಟ್ಟುವುದಾಗಿಯೂ ಮೆನನ್ ಹೇಳಿದ್ದಾರೆ.

'ನಿರ್ದಿಷ್ಟ ಸಮಯದ ಬಳಿಕ ನಿಮ್ಮ ಜೀವನದಲ್ಲಿ ಹಣ ಯಾವುದೇ ಬದಲಾವಣೆ ತರುವುದಿಲ್ಲ. ಹಾಗಾಗಿ ಸಂಪಾದಿಸಿದ ಅಷ್ಟೂ ಹಣವನ್ನು ಕುಟುಂಬಕ್ಕೆ ಕಾಯ್ದಿರಿಸಬೇಕೆಂದು ನನಗನಿಸುತ್ತಿಲ್ಲ. ಅದರ ದೊಡ್ಡ ಭಾಗ ಸಮಾಜಕ್ಕೆ ಹೋಗಬೇಕಿದೆ. ಈ ರೀತಿ ಮಾಡುವುದು ಸಮಾಜದೆಡೆಗೆ ನಮ್ಮ ಉತ್ತರದಾಯಿತ್ವವೂ ಆಗಿದೆ' ಎಂಬುದು ಅವರು ಸ್ಪಷ್ಟ ಅನಿಸಿಕೆ.

ಈಗಾಗಲೇ 2006 ರಲ್ಲಿ Sobha Heritage and Sobha Academy ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವ ಮೆನನ್ ಅವರು ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
After Wipro Premji- now Sobha Group Menon pledges donation. P.N.C. Menon, the founder of Sobha Group of companies, with an estimated fortune of $600 million, plans to give half of his personal wealth to charity, reports Arabian Business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X