ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಪಾಸ್ ಪೋರ್ಟ್, ಖ್ಯಾತ ಪತ್ರಕರ್ತ ವಿಚಾರಣೆಗೆ

By * ಕ್ರೈಂ ರಿಪೋರ್ಟರ್
|
Google Oneindia Kannada News

Kannada news Journalist held
ಬೆಂಗಳೂರು, ಮಾ.8: ನಕಲಿ ಪಾಸ್ ಪೋರ್ಟ್ ದಂಧೆಯ 'ಕಿಂಗ್ ಪಿನ್' ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕನ್ನಡ ಸುದ್ದಿ ವಾಹಿನಿಯ ನಿರ್ಮಾಪಕ ಹಾಗೂ ಹಿರಿಯ ವರದಿಗಾರರೊಬ್ಬರನ್ನು ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಅಕ್ರಮ ದಂಧೆಯ ರುವಾರಿ 'ಮೌಲ್ವಿ' ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು ವಿಚಾರಣೆ ಜಾರಿಯಲ್ಲಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ಹೇಳಿವೆ.

ವಿದೇಶಾಂಗ ಸಚಿವಾಲಯವು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ 'ರಾಕೆಟ್' ಆಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸಚಿವಾಲಯ ಪೊಲೀಸರಿಗೆ ಆದೇಶಿಸಿದೆ. ಪ್ರಕರಣ ಭಾರಿ ಸಂಚಲನವನ್ನು ಸೃಷ್ಟಿಸಿದ್ದು, ನಕಲಿ ಪಾಸ್ ಪೋರ್ಟ್ ನ ಬೃಹತ್ ದಂಧೆ ಬಗ್ಗೆ ಪೊಲೀಸರು ಇಷ್ಟರಲ್ಲೇ ಮಾಹಿತಿ ಹೊರ ಹಾಕುವ ನಿರೀಕ್ಷೆಯಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ಪೊಲೀಸ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬೃಹತ್ ಜಾಲವನ್ನು ಹೊರ ಹಾಕಿದ್ದಾರೆ.

ನಕಲಿ ಪಾರ್ಸ್ ಕೋರ್ಟ್ ಜಾಲವೊಂದರ ಕುರಿತು ಸುದ್ದಿ ವಾಹಿನಿ ತಿಂಗಳುಗಳ ಹಿಂದೆ ಸ್ಟಿಂಗ್ ಆಪರೇಷನ್ ಮಾಡಿತ್ತು. ವಾಹಿನಿಯ ಶಂಕರ್ ಹಾಗೂ ಮತ್ತೊಬ್ಬ ವರದಿಗಾರರು ಈ ಸ್ಟಿಂಗ್ ಅಪರೇಷನ್ ನ ಪ್ರಮುಖ ಪಾತ್ರಧಾರಿಗಳಾಗಿದ್ದರು. ನಕಲಿ ಪಾಸ್ ಪೋರ್ಟ್ ಜಾಲದ ಕಿಂಗ್ ಪಿನ್ ಹುಡುಕುವುದು ಇವರ ಉದ್ದೇಶವಾಗಿತ್ತು. ಕಿಂಗ್ ಪಿನ್ ತನಕ ಸುದ್ದಿ ವಾಹಿನಿ ರಹಸ್ಯ ಕೆಮರಾಗಳು ತಲುಪಿತ್ತು.

ಆದರೆ, ಸುದ್ದಿ ಟೆಲಿಕಾಸ್ಟ್ ಆಗುವ ಮುನ್ನವೇ ಸಂಬಂಧಪಟ್ಟ ಆರೋಪಿಗಳ ಕಿವಿಗೆ ವಿಷಯ ಮುಟ್ಟಿತು. ಪಾಸ್ ಪೋರ್ಟ್ ಕಚೇರಿ ಅಧಿಕಾರಿ ಶ್ರೀನಿವಾಸನ್ ಅವರ ಜಾಲದಲ್ಲಿ ಸಿಲುಕದಂತೆ ತಡೆಯಲು ಸುದ್ದಿ ವಾಹಿನಿ ಆರೋಪಿತ ಮುಖ್ಯ ವರದಿಗಾರರು ಸ್ಟಿಂಗ್ ಆಪರೇಷನ್ ಸುದ್ದಿ ಪ್ರಸಾರ ಮಾಡದಿರಲು ಯತ್ನಿಸಿದ್ದಾರೆ.

ಆದರೆ, ಸುದ್ದಿ ಪ್ರಸಾರಕ್ಕೆ ಸಂಸ್ಥೆ ಮುಂದಾಗಿದೆ. ಆಗ ಆರೋಪಿಗಳು ಶಂಕರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಗಾಬರಿಗೊಂಡ ವರದಿಗಾರ ಶಂಕರ್ , ಎಚ್.ಎ.ಎಲ್ ಠಾಣೆಗೆ ದೂರು ನೀಡಿದಾರೆ. ಬೆದರಿಕೆ ಕರೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ನಕಲಿ ಪಾಸ್ ಪೋರ್ಟ್ ಜಾಲದ ಸಂಪೂರ್ಣ ಚಿತ್ರಣ ಸಿಕ್ಕಿದೆ.

ಶಂಕರ್ ಗೆ ಕರೆ ಮಾಡಿಜೀವ ಬೆದರಿಕೆ ಹಾಕಿದ ದೂರವಾಣಿ ಸಂಖ್ಯೆ ಹಾಗೂ ಆನಂತರ ಕಾಲ್ ಲಿಸ್ಟ್ ಗಳನ್ನು ಪೊಲೀಸರು ಹುಡುಕಿದಾಗ ಸುದ್ದಿ ವಾಹಿನಿ ಕಚೇರಿಗೆ ಬಂದಿದೆ. ಜೊತೆಗೆ ಚಿಕ್ಕಬಳ್ಳಾಪುರ ಮೂಲದ ಕಿಂಗ್ ಪಿನ್ ಮೌಲ್ವಿ ಅಲಿಯಾಸ್ ಖಲಿಉಲ್ಲಾ ಖಾನ್ ಹಾಗೂ ಸುದ್ದಿ ವಾಹಿನಿ ಮುಖ್ಯ ವರದಿಗಾರ ನಿರಂತರ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಈ ಬಗ್ಗೆ ಬಾಯ್ಬಿಟ್ಟ ಮೌಲ್ವಿ, ರಾಕೇಶ್ ಎಂಬ ಹೆಸರಿನಲ್ಲಿ ನನಗೆ ಕರೆ ಬಂದಿತ್ತು. ಸುದ್ದಿ ಪ್ರಸಾರ ಮಾಡುವುದಿಲ್ಲ, ಹೀಗೆ ಮಾಡಿ ಎಂದಿದ್ದರು ಅದರಂತೆ ಮಾಡಿದೆವು ಎಂದಿದ್ದಾನೆ. ಆ ನಂಬರ್ ಟ್ರೇಸ್ ಮಾಡಿದಾಗ ಅದು ನಕಲಿ ಹೆಸರಿನಲ್ಲಿ ಗುಲ್ಬರ್ಗಾದ ವಿಳಾಸ ಹೊಂದಿರುವುದು ಪತ್ತೆಯಾಗಿದೆ.

ಒಟ್ಟಾರೆ ಸುಮಾರು 64ಕ್ಕೂ ಅಧಿಕ ನಕಲಿ ಪಾಸ್ ಪೋರ್ಟ್ ಗಳು ಕೈ ಬದಲಾಯಿಸಿದೆ. ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿ ಸಿಬ್ಬಂದಿಗಳು ಇದರಲ್ಲಿ ನೇರವಾಗಿ ಭಾಗಿಯಾಗಿರುವ ಸಾಧ್ಯತೆ ಕಂಡು ಬಂದಿದೆ.

1.5 ಲಕ್ಷ ದಿಂದ 5 ಲಕ್ಷ ರು ಚಾರ್ಚ್ ಮಾಡಿ ಯಾವುದೇ ಅಗತ್ಯ ದಾಖಲೆ ಇಲ್ಲದಿದ್ದರೂ, ನಿಮ್ಮ ಮೇಲೆ ಪೊಲೀಸ್ ಕೇಸ್ ಇದ್ದರೂ ಪಾಸ್ ಪೋರ್ಟ್ ಒದಗಿಸುವುದು ಮೌಲ್ವಿ ಕೆಲಸ. ಇವನಿಗೆ ಚಾಂದ್ ಹಾಗೂ ಮುಜಾಹಿದ್ ಅಸಿಸ್ಟೆಂಟ್ಸ್. ಬಯೋಮೆಟ್ರಿಕ್ ಬೆರಳಚ್ಚು ತಯಾರಿಸಿ ಯಾಮಾರಿಸುವುದರಲ್ಲಿ ಮೌಲ್ವಿ ನಿಪುಣ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Fake Passport Scam: Bangalore police detained Kannada news channel anchor and producer. He will be quizzed for having link with the kingpin Khaleelullah Khan aka ‘Maulvi’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X