ಪಾತಕ ಜಗತ್ತಿಗೆ ಖಡಕ್ ಸಂದೇಶ : ಸಿಸಿಬಿಗೆ ಹೊಸ ಸಾರಥಿ

Pranab Mohanty is new Bangalore CCB chief
ಬೆಂಗಳೂರು, ಮಾ 8: ಕೇಂದ್ರ ಅಪರಾಧ ದಳಕ್ಕೆ (City Crime Braanch) ಹೊಸ ಸಾರಥಿಯನ್ನು ನೇಮಿಸಿ ಬೆಂಗಳೂರು ಪೋಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.

ಪೋಲೀಸ್ ಇಲಾಖೆಯ ಅತ್ಯಂತ ದಕ್ಷ ಮತ್ತು ಖಡಕ್ ಅಧಿಕಾರಿಗಳಲ್ಲಿ ಒಬ್ಬರೆಂದೇ ಬಿಂಬಿತರಾಗಿರುವ ಪ್ರಣವ್ ಮೊಹಾಂತಿ ಅವರಿಗೆ ಸಿಸಿಬಿ ಉಸ್ತುವಾರಿ ವಹಿಸಲಾಗಿದೆ.

ಭಯೋತ್ಪಾದನಾ ಚಟುವಟಿಕೆ ಪ್ರಕರಣಗಳ ಹಿನ್ನಡೆಯ ಕಾರಣ ಸಿಸಿಬಿ ಮುಖ್ಯಸ್ಥರಾಗಿದ್ದ ದಯಾನಂದ್ ಅವರನ್ನು ಸಿಐಡಿಗೆ ಎತ್ತಂಗಡಿ ಮಾಡಲಾಗಿತ್ತು.

ಸಿಸಿಬಿಗೆ ಪ್ರಣವ್ ಮೊಹಾಂತಿ ನೇಮಕ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಪೂರ್ವ ವಲಯದ ಜಂಟಿ ಪೋಲಿಸ್ ಆಯುಕ್ತರಾಗಿರುವ ಎಸ್ ಮುರುಗನ್ ಇನ್ನು ಮುಂದೆ ಪ್ರಣವ್ ಮೊಹಾಂತಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.

ಅಲ್ಲದೇ ನಗರದ ಎಲ್ಲಾ ವಿಭಾಗದ ಡಿಸಿಪಿಗಳು ಮೊಹಾಂತಿ ಉಸ್ತುವಾರಿಗೆ ಒಳಪಡಲಿದ್ದಾರೆಂದು ಮಿರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮೊಹಾಂತಿಯವರನ್ನು ಸಿಸಿಬಿ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ರಾಜಧಾನಿಯ ಪಾತಕ ಲೋಕಕ್ಕೆ ಮಿರ್ಜಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಈ ಹಿಂದೆ ಲೋಕಾಯುಕ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೊಹಾಂತಿ, ಯಡಿಯೂರಪ್ಪ ವಿರುದ್ದ ಭೂಹಗರಣ ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳ ಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+