ಚುನಾವಣೆ: ಆಮಿಷವೊಡ್ಡುವಲ್ಲಿ ಯಾವ ಪಕ್ಷಕ್ಕೆ ಅಗ್ರ ಸ್ಥಾನ?
ಬೆಂಗಳೂರು, ಮಾ 6: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುವ ಸೆಮಿ ಫೈನಲ್ ಚುನಾವಣೆಯೆಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ದಿನಗಣನೆ (ಮಾ 7ಕ್ಕೆ) ಆರಂಭವಾಗಿದೆ.
ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿರುವುದರಿಂದ ಬಿಜೆಪಿಯಿಂದ ಹೊರ ಹೋಗಿ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಯಡಿಯೂರಪ್ಪ ಮತ್ತು ಶ್ರೀರಾಮುಲು ಬಣ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿಯ ದುರಾಡಳಿತದ ಲಾಭ ಪಡೆದುಕೊಳ್ಳಲು ಸರ್ವತಂತ್ರದಿಂದ ಸಜ್ಜಾಗಿದೆ.
ಇನ್ನು ಕೆಜೆಪಿ ಮತ್ತು BSR ಕಾಂಗ್ರೆಸ್ ಪಕ್ಷ ಅಸೆಂಬ್ಲಿ ಚುನಾವಣೆಗೆ ಮುನ್ನ ನಡೆಯುವ ಈ ಚುನಾವಣೆಯ ಆದಷ್ಟು ಲಾಭ ಪಡೆದುಕೊಂಡು ಫೈನಲ್ ಚುನಾವಣೆಗೆ ಸಜ್ಜಾಗುವ ತಂತ್ರ ರೂಪಿಸುತ್ತಿದೆ.
ನೋಟಿಗಾಗಿ ವೋಟು ಹಾಕುವವರಿಗಂತೂ ಈ ಬಾರಿಯ ಚುನಾವಣೆ ಸುಗ್ಗಿಯೋ ಸುಗ್ಗಿ. ಐದೈದು ಪಕ್ಷಗಳ ಜೊತೆ ಪಕ್ಷೇತರರು ಸೇರಿ ಮತದಾರರನ್ನು ಒಲೈಸಿಕೊಳ್ಳಲು ಇನ್ನಿಲ್ಲದ ಆಮಿಷವೊಡ್ಡಿ ಮತದಾರರನ್ನು ಒಲೈಸಿಕೊಳ್ಳಲು ಮುಂದಾಗಿದ್ದಾರೆ.
ದುರಂತವೆಂದರೆ ಚುನಾವಣೆ ನಡೆಯುವ ಮೂರ್ನಾಲ್ಕು ದಿನಗಳ ಮುನ್ನ ಪಕ್ಷಗಳು ಮತದಾರರಿಗೆ ನೀಡುವ ಭರ್ಜರಿ ಆಫರ್ ಗಳು ಅಭ್ಯರ್ಥಿಯ ಹಣೆಬರಹವನ್ನು ನಿರ್ಧರಿಸುತ್ತದೆ. ಇಲ್ಲಿ ಪಕ್ಷಗಳು ಒಂದು ವೋಟಿಗೆ ಎಷ್ಟು ಹಣ ಖರ್ಚು ಮಾಡಿದೆ ಎನ್ನುವ ಲೆಕ್ಕ ಬರುವುದೇ ವಿನ: ಸಂಭಾವಿತ ಅಭ್ಯರ್ಥಿಗೆ ಬೆಲೆ ಇರುವುದಿಲ್ಲ.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪೋಲೀಸರು ವಿವಿಧ ಪಕ್ಷಗಳಿಗೆ ಸೇರಿದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆದರೆ ಯಾವುದೇ ಪಕ್ಷಗಳು ವಶ ಪಡಿಸಿಕೊಂಡ ವಸ್ತುಗಳನ್ನು ತಮ್ಮದೇ ಪಕ್ಷದ ವಸ್ತುವೆಂದು ಹೇಳಿಕೊಳ್ಳುತ್ತಿಲ್ಲ. ಈ ಚುನಾವಣೆಯೇ ಹೀಗೆ.. ಇನ್ನು ಅಸೆಂಬ್ಲಿ ಚುನಾವಣೆ ಹೇಗಿರಬಹುದು ಎಂದು common man ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾನೆ.
ಪೋಲೀಸರು ವಶ ಪಡಿಸಿಕೊಂಡಿರುವ ವಸ್ತುಗಳ ಒಂದು ಸಣ್ಣ ಪಟ್ಟಿ ಮತ್ತು ಪಕ್ಷಗಳು ಒಡ್ಡಿರುವ ಆಮಿಷಗಳು ಇಲ್ಲಿದೆ ನೋಡಿ

ಸ್ಥಳೀಯ ಸಂಸ್ಥೆ ಚುನಾವಣೆ
> ಹೊನ್ನಾಳಿಯಲ್ಲಿ 2620 ಸೀರೆ
> ದಾವಣಗೆರೆಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಜ್ಯಾಕೆಟ್
> ಮಂಡ್ಯದಲ್ಲಿ ಸೀರೆ, ಕುಪ್ಪಸ, ಮೂಗುತಿ, ಒಂದು ವೋಟಿಗೆ ನೂರು, ನಾಲ್ಕು ವೋಟಿಗೆ 500
> ಹೀರೇಸಾವೆಯಲ್ಲಿ ಸೀರೆ, ಮೂಗುತಿ
> ಕುಂದಗೋಳದಲ್ಲಿ ಸೀರೆ, ಕುಪ್ಪಸ, ಮೂಗುತಿ
> ಚಾಮರಾಜ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸೀರೆ, ಪಂಚೆ, ಅರಸಿನ ಕುಂಕುಮ ಬಟ್ಟಲು

ಸ್ಥಳೀಯ ಸಂಸ್ಥೆ ಚುನಾವಣೆ
> ಬೆಳಗಾವಿಯ ಕುದುರೆ ಮನೆ ಕ್ರಾಸ್ ಬಳಿ ಮದ್ಯದ ಬಾಟಲಿಗಳು
> ಶ್ರೀರಂಗಪಟ್ಟಣ ಗಂಗೂರು ಅರಣ್ಯ ಪ್ರದೇಶದಲ್ಲಿ ಬಾಡೂಟ
> ಚಿಕ್ಕಬಳ್ಳಾಪುರದಲ್ಲಿ 25 ಕೆಜಿ ತೂಕದ 60 ಅಕ್ಕಿ ಮೂಟೆ, ಮದ್ಯ
> ಗಂಗಾವತಿಯಲ್ಲಿ ಒಂದು ವೋಟಿಗೆ 200
> ಶಿಡ್ಲಘಟ್ಟದಲ್ಲಿ ಮದ್ಯ ಪೂರೈಕೆ

ಸ್ಥಳೀಯ ಸಂಸ್ಥೆ ಚುನಾವಣೆ
> ಬೆಳಗಾವಿಯಲ್ಲಿ 75 ಪ್ರೆಷರ್ ಕುಕ್ಕರ್
> ಪಾವಗಡ ತಾಲೂಕಿನಲ್ಲಿ ಎಣ್ಣೆ ಪಾರ್ಟಿ, ಬಾಡೂಟ
> ಬಳ್ಳಾರಿಯಲ್ಲಿ ಶ್ರೀರಾಮುಲು ಭಾವಚಿತ್ರವಿರುವ ಎರಡು ಲಾರಿ ಗೋಡೆ ಗಡಿಯಾರಗಳು
> ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ, ಅಕ್ಕಿ, ಜೋಳ, ಮೂಗುತಿ
> ಶಿರಾದಲ್ಲಿ ಸೀರೆ, ಕುಪ್ಪಸ, ಕುಟುಂದಲ್ಲಿ ಮಕ್ಕಳಿದ್ದರೆ ನೋಟ್ ಬುಕ್

ಸ್ಥಳೀಯ ಸಂಸ್ಥೆ ಚುನಾವಣೆ
> ಹರಿಹರದಲ್ಲಿ ಬ್ಲೌಸ್ ಪೀಸ್, ಬೆಳ್ಳಿ ಗಣಪತಿ ವಿಗ್ರಹ
> ದಾವಣಗೆರೆಯಲ್ಲಿ ಬೆಳ್ಳಿ ನಾಣ್ಯ
> ಮದ್ದೂರಿನಲ್ಲಿ ಗೆದ್ದರೆ ಮಹಿಳಾ ಸಂಘಟನೆಗಳಿಗೆ ಆರ್ಥಿಕ ನೆರುವು

ಸ್ಥಳೀಯ ಸಂಸ್ಥೆ ಚುನಾವಣೆ
> ಕಿರುಗಾವಲಿನಲ್ಲಿ ವೀಳ್ಯದೆಲೆ ಮೇಲೆ ಆಣೆ ಪ್ರಮಾಣ ನಂತರ ನೋಟು
> ಗಜೇಂದ್ರಗಡದಲ್ಲಿ ಕೂಲಿ ಕಾರ್ಮಿಕರಿಗೆ ಗುಡಿಸಲು, ಹತ್ತು ಕೆಜಿ ಜೋಳ
> ದಾವಣಗೆರೆಯಲ್ಲಿ ಆಧುನಿಕ ಒಲೆ ಅಳವಡಿಕೆಗೆ ಸಾಲ, ಸೀರೆ, ಕುಪ್ಪಸ, ಮೂಗುತಿ
> ಧರ್ಮಸ್ಥಳ, ಉಡುಪಿ, ತಿರುಪತಿ ತೀರ್ಥ ಕ್ಷೇತ್ರಕ್ಕೆ ಉಚಿತ ಪ್ರವಾಸ












Click it and Unblock the Notifications