Get Updates
Get notified of breaking news, exclusive insights, and must-see stories!

ವಿಧಾನಸಭೆ:C-Voter ಸಮೀಕ್ಷೆ ಫಲಿತಾಂಶ ಹೇಳೋದೇನು?

ಬೆಂಗಳೂರು, ಮಾ.5: ಚುನಾವಣೆಗೆ ಮುಂದಿನ ಸರಕಾರ ಅಧಿಕಾರ ಹಿಡಿಯಲು ಇನ್ನೂ ಕನಿಷ್ಠ 3 ತಿಂಗಳು ಇದೆ. ಆದರೆ ಚುನಾವಣೆ ಪೂರ್ವ ಸಮೀಕ್ಷೆಗಳ ಭರಾಟೆ ಜೋರಾಗಿಯೇ ನಡೆದಿದೆ. ಆ ಸಮೀಕ್ಷೆ ಈ ಸಮೀಕ್ಷೆ ಎಂದು ಇರೋ ನಾಲ್ಕಾರು ಪಾರ್ಟಿಗಳಲ್ಲೇ ನಡುಕ ಹುಟ್ಟುಹಾಕುತ್ತಿದೆ ಈ ಸಮೀಕ್ಷೆಗಳು. ಆದರೆ 4 ಕೋಟಿ ಮತದಾರರು ಎಲ್ಲಿ, ಈ ಸಮೀಕ್ಷೆಗೆ ಒಳಪಡುವ ಸಾವಿರದ ಮಂದಿ ಎಲ್ಲಿ?

ಆದರೂ ಫಲಿತಾಂಶದ ಮೂಡ್ ಕ್ರಿಯೇಟ್ ಮಾಡಲು, ಮತದಾರನ ಪಲ್ಸ್ ಅರಿಯಲು, ರಾಜಕೀಯ ಪಕ್ಷಗಳ ಹಾವು-ಮುಂಗುಸಿ ಆಟಕ್ಕೆ ಇದು ಸಹಾಯಕವಾಗಬಲ್ಲದು. ಇದು ಕಳೆದ ತಿಂಗಳು ಫೆಬ್ರವರಿಯಲ್ಲಿ ನಡೆಸಲಾದ ಸಮೀಕ್ಷೆ.

TV9 ನ್ಯೂಸ್ ಚಾನೆಲ್ ಸೋಮವಾರ ಸಂಜೆ C-Voter ಸಮೀಕ್ಷೆಯನ್ನು ಪ್ರಸಾರ ಮಾಡಿದೆ. ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶವು ಆಡಳಿತಾರೂಢ ಬಿಜೆಪಿಗೆ ಆತಂಕ ಉಂಟು ಮಾಡುವಂತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ಸಿಗೆ ಆನಂದವೋ ಆನಂದ. ಇನ್ನು, ಬಹುಚರ್ಚಿತ ನೂತನ ಪಕ್ಷ ಕೆಜೆಪಿಗೆ ಆಯೋಮಯ ಸ್ಥಿತಿ. ಈ ಸಿ-ವೋಟರ್‌ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ಣ ಸಮೀಕ್ಷೆ ಕಾಂಗ್ರೆಸ್ಸಿಗೆ ಪೂರ್ಣ ಬಹುಮತ ಬರಲಿದೆ ಎಂದು ಹೇಳಿದೆ.

Karnataka Opinion Poll- Tv9 C Voter Survey ಫಲಿತಾಂಶ ಇಲ್ಲಿದೆ:

 ಬಿಜೆಪಿಗೆ ಅಧಿಕಾರ ನಷ್ಟ

ಬಿಜೆಪಿಗೆ ಅಧಿಕಾರ ನಷ್ಟ

ಆಡಳಿತಾರೂಢ ಬಿಜೆಪಿ ಗೆಲ್ಲೋದು 62-70 ಸ್ಥಾನವಷ್ಟೇ.

ಕುಮಾರಸ್ವಾಮಿಗೆ ಭ್ರಮನಿರಸನ

ಕುಮಾರಸ್ವಾಮಿಗೆ ಭ್ರಮನಿರಸನ

ಎಚ್ ಡಿ ಕುಮಾರಸ್ವಾಮಿಗೆ ಭ್ರಮನಿರಸನ- ಜೆಡಿಎಸ್‌ ಗೆಲ್ಲೋದು ಕೇವಲ 19-25 ಸ್ಥಾನವಷ್ಟೇ.

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ

ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ

ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ: ಹೌದು ಕಾಂಗ್ರೆಸ್‌ 118-126 ಸ್ಥಾನ ಗೆದ್ದು ಬರುತ್ತದೆ.

ಪಕ್ಷೇತರರು, ಇತರೆ ಚಿಲ್ರೆ ಪಕ್ಷಗಳ ಕಥೆಯೇನು?

ಪಕ್ಷೇತರರು, ಇತರೆ ಚಿಲ್ರೆ ಪಕ್ಷಗಳ ಕಥೆಯೇನು?

ಪಕ್ಷೇತರರು, ಇತರೆ ಚಿಲ್ರೆ ಪಕ್ಷಗಳ ಕಥೆ ಅಷ್ಟೇ ಕಣ್ಣ್ಣೊ. ಕಳೆದ 5 ವರ್ಷಗಳಿಂದ ಇನ್ನಿಲ್ಲದಂತೆ ಕಾಡಿದ ನಾಲ್ಕೂ ಮುಕ್ಕಾಲು ಪಕ್ಷೇತರರಿಗೆ ಗೇಟ್ ಪಾಸ್. ಆದರೂ ಅವರು-ಇವರೂ ಅಂತ 06-10 ಸ್ಥಾನ ಗಳಿಸಬಹುದು ಅಷ್ಟೇ.

ಕೆಜೆಪಿ ಬೋರ್ಡಿಗೇ ಇಲ್ಲ

ಕೆಜೆಪಿ ಬೋರ್ಡಿಗೇ ಇಲ್ಲ

ಸನ್ಮಾನ್ಯ ಯಡಿಯೂರಪ್ಪ ನೇತೃತ್ವದ ಕೆಜೆಪಿ ಬೋರ್ಡಿಗೇ ಇಲ್ಲ. ಅಂದರೂ ಕೆಜೆಪಿ 04-08 ಸ್ಥಾನದೊಂದಿಗೆ ಸಿಂಗಲ್ ಡಿಜಿಟ್ ಗೆ ತೃಪ್ತಿಪಟ್ಟುಕೊಳ್ಳಬೇಕು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+