ವಿದ್ಯಾರ್ಥಿನಿ ಕಿಡ್ನಾಪ್, ರೇಪ್ ಶೇಮ್ ಶೇಮ್

Delhi Horror: Student kidnapped, raped & dumped; cops probe
ನವದೆಹಲಿ, ಫೆ.28: ರಾಷ್ಟ್ರ ರಾಜಧಾನಿ ದೆಹಲಿ ಇನ್ನೂ ಮಹಿಳೆಯರಿಗೆ ಸುರಕ್ಷಿತ ತಾಣವಾಗಿ ಉಳಿದಿಲ್ಲ. ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಸಮೂಹಿಕ ಅತ್ಯಾಚಾರ ಪ್ರಕರಣದ ನಂತರ ದೇಶವೇ ಪ್ರತಿಭಟನೆ ನಡೆಸಿದರೂ ದೆಹಲಿ ಮಾತ್ರ ಅಮಾಯಕರ ಅತ್ಯಾಚಾರದ ಕೂಪವಾಗಿದೆ. ಯುವತಿಯೊಬ್ಬಳನ್ನು ದುಷ್ಕರ್ಮಿಗಳು ಅಪಹರಿಸಿ, ಅತ್ಯಾಚಾರ ಮಾಡಿ ಎಸೆದು ಹೋಗಿರುವ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ.

17 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು ದೆಹಲಿಯ ನೈಋತ್ಯ ಭಾಗದಿಂದ ಕಿಡ್ನಾಪ್ ಮಾಡಿ ರೇಪ್ ಮಾಡಿ ಪಾಲಂ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಕಿಡ್ನಾಪ್, ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು 16ಕ್ಕೂ ಅಧಿಕ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ತಂಡ ಹುಡುಕಾಟದಲ್ಲಿದೆ, ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ದೆಹಲಿಯ ಹಿರಿಯ ಅಧಿಕಾರಿ ಹೇಳಿದರು.

ಆರೋಪಿಗಳಲ್ಲಿ ಒಬ್ಬ ಆಕೆ ಗೆಳೆಯನಾಗಿದ್ದಾನೆ. ಅವರು ತನ್ನ ಗೆಳೆಯರ ಗುಂಪಿಗೆ ಈಕೆಯನ್ನು ಪರಿಚಯ ಮಾಡಿಕೊಟ್ಟಿದ್ದಾನೆ. ಕಾರಿನಲ್ಲಿ ಮನೆ ತನಕ ಡ್ರಾಪ್ ಮಾಡುತ್ತೇವೆ ಬಾ ಎಂದು ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದಾರೆ.ದೆಹಲಿಯ ಹೊರ ವಲಯದ ಫಾರ್ಮ್ ಹೌಸ್ ನಲ್ಲಿ ಈ ಕೃತ್ಯ ಜರುಗಿದೆ ಎಂದು ಪೊಲೀಸರು ಹೇಳಿದರು.

17 ವರ್ಷದ ಯುವತಿ ಜೊತೆ ಆಕೆ ಗೆಳೆಯ ಕೂಡಾ ಇದ್ದ. ಕಾರಿನಲ್ಲಿ ಸ್ವಲ್ಪ ದೂರಾ ಆತ ಕೂಡಾ ಹೋಗಿದ್ದಾನೆ. ಆಕೆಗೆ ತನ್ನ ಗೆಳೆಯ ಮೇಲೆ ನಂಬಿಕೆ ಬರುವಂತೆ ನಡೆದುಕೊಂಡಿದ್ದಾನೆ. ನಂತರ ದ್ವಾರಕಾ ಸೆಕ್ಟರ್ 9 ನಲ್ಲಿ ಇಳಿದುಕೊಂಡಿದ್ದಾನೆ ನಂತರ ಅಕೆಯನ್ನು ದ್ವಾರಕಾ ಸೆಕ್ಟರ್ 29 ರಲ್ಲಿ ಬಿಡುವಂತೆ ಗೆಳೆಯರಿಗೆ ಹೇಳಿದ್ದಾನೆ. ಆದರೆ ಅಲ್ಲಿಂದ ಕಾರು ಹೋಗಿದ್ದು ನೇರ ಫಾರ್ಮ್ ಹೌಸ್ ನಡೆದಿದ್ದು ದುರಂತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+