ಜೆಡಿಎಸ್ ವೀರಶೈವ, ಕುರುಬ ದ್ವೇಷಿಯಲ್ಲ : ಎಚ್ಡಿಕೆ

ಮೈಸೂರಿನಲ್ಲಿ ಸೋಮವಾರ ಕಾರ್ಯಕರ್ತತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕುಮಾಸ್ವಾಮಿ, ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರ ಹಸ್ತಾಂತರದ ನೆಪಮಾಡಿಕೊಂಡು, ನಮ್ಮ ಕುಟುಂಬದವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಯಡಿಯೂರಪ್ಪ ನಮ್ಮ ಕುಟುಂಬ ಮತ್ತು ಜನರ ನಡುವಿನ ಪ್ರೀತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಕುಟುಂಬದವರು ವೀರಶೈವರು ಮತ್ತು ಕುರುಬ ಜನಾಂಗದ ದ್ವೇಷಿಗಳಲ್ಲ. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಅವರ ಪಕ್ಷದ ನಾಯಕರೆ ತಡೆದರು. ಅವರ ಪಕ್ಷದ ನಾಯಕರ ಷಡ್ಯಂತ್ರದಿಂದ ನಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬಂದಿತು ಎಂದು ಹೇಳಿದರು.
ಬಿಜೆಪಿ ನಮ್ಮ ಜೆಡಿಎಸ್ ಪಕ್ಷವನ್ನು ನಾಶಗೊಳಿಸಲು ಅನೇಕ ತಂತ್ರಗಳನ್ನು ರೂಪಿಸುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ, ನಾಡಿನ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜನರು ಪ್ರಾದೇಶಿಕ ಪಕ್ಷಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದ ಅವರು, ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸಲು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಮರಳಿ ಗೂಡಿಗೆ ಜಿಟಿಡಿ : ಸಮಾವೇಶದಲ್ಲಿ ಗೃಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಟಿ.ದೇವೇಗೌಡ ಬಿಜೆಪಿ ತೊರೆದು ಸಾವಿರಾರು ಬೆಂಗಲಿಗರೊಂದಿಗೆ ತೊರೆದು ಪುನಃ ಜೆಡಿಎಸ್ ಸೇರಿದರು. ಜೆಡಿಎಸ್ ತೊರೆದು ದೊಡ್ಡ ತಪ್ಪು ಮಾಡಿದೆ, ಇನ್ನೆಂದೂ ಜೆಡಿಎಸ್ ತೊರೆಯುವುದಿಲ್ಲ, ನನ್ನನ್ನು ಕ್ಷಮಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.












Click it and Unblock the Notifications