ಕುಂಭಮೇಳಕ್ಕೆ ರಜೆ ಇಲ್ಲ, ಗಂಗಾ ಸ್ನಾನ ನಿರಂತರ
ಅಲಹಾಬಾದ್, ಫೆ.19: ಹತ್ತು ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಬಂದ್ ಗೆ ಅಲಹಾಬಾದಿನ ಕುಂಭಮೇಳದಲಿ ನೀರಸ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಹೆಚ್ಚಿದೆ. ಅದರೂ, ಎಂದಿಗಿಂತ ಭದ್ರತೆಯನ್ನು ಹೆಚ್ಚಿಸಿ, ಭಕ್ತಾದಿಗಳ ಧಾರ್ಮಿಕ ವಿಧಿ ವಿಧಾನಗಳಿಗೆ ಅನುವು ಮಾಡಿಕೊಡಲು ಅಖಿಲೇಶ್ ಯಾದವ್ ಸರ್ಕಾರ ಸಜ್ಜಾಗಿದೆ.
ಮಳೆಗೆ ಹೆದರಿ ಭಕ್ತರು ಮೇಳ ಬಿಟ್ಟು ಮನೆ ಕಡೆ ತೆರಳಿದ ಮೇಲೆ ರಸ್ತೆ ರಿಪೇರಿ, ತಾತ್ಕಾಲಿಕ ಶೆಡ್ ರಿಪೇರಿ ಕಾರ್ಯಗಳು ಭರದಿಂದ ಸಾಗಿದೆ. ಈ ನಡುವೆ ರಕ್ಷಣೆಗೆ ನಿಂತ ಯೋಧರು ಕೂಡಾ ಮಾಮೂಲಿ ಗಸ್ತಿನ ಜೊತೆಗೆ ಧಾರ್ಮಿಕ ತಂಡಗಳ ಜೊತೆ ಮೆರವಣಿಗೆ ನಡೆಸಿ ಭಕ್ತರಲ್ಲಿ ಹುರುಪು ತುಂಬಿದ್ದಾರೆ. ಇನ್ನೊಂದೆಡೆ ಎಂದಿನಂತೆ ರೈಲ್ವೇ ನಿಲ್ದಾಣದಲ್ಲಿ ನೂಕು ನುಗ್ಗಲು ಹೆಚ್ಚಾಗಿದೆ.
ಬುಧವಾರ(ಫೆ.20) ಹಾಗೂ ಗುರುವಾರ(ಫೆ.21) ಕುಂಭಮೇಳದಿಂದ ಹೊರಡುವ ರೈಲುಗಳು ಏನಾದರೂ ಸಂಚಾರ ನಿಲ್ಲಿಸಿದರೆ ಮಾತ್ರ ಬಂದ್ ಬಿಸಿ ತಟ್ಟಲು ಸಾಧ್ಯ. ಆದರೆ, ವಿಶೇಷ ರೈಲಿನ ತಂಟೆಗೆ ಹೋಗದಿರಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿರುವ ಸುದ್ದಿ ಸಿಕ್ಕಿದೆ. ಹೀಗಾಗಿ ಬಂದ್ ನಡುವೆಯೂ ನಿರಾಂತಕವಾಗಿ ಪುಣ್ಯಸ್ನಾನ ನಡೆಯುವುದು ಗ್ಯಾರಂಟಿ.

ಆತಂಕದ ನಡುವೆಯೂ ಗಂಗಾ ಸ್ನಾನ ನಿರಂತರ
ಧಾರ್ಮಿಕ ಧ್ವಜ ಹಿಡಿದು ಮೆರವಣಿಗೆ ಹೊರಟ ಭೂಸೇನಾ ಯೋಧರ ಪಡೆ, ಭಕ್ತರಲ್ಲಿ ಹುರುಪು ಮೂಡಿಸಿದ ನಡೆ

ಆತಂಕದ ನಡುವೆಯೂ ಗಂಗಾ ಸ್ನಾನ ನಿರಂತರ
ಬಂದ್ ಇರಲಿ, ಮಳೆ ಬರಲಿ ನಿಯಮಿತ ವಾರ ತಿಥಿ ಅನ್ವಯ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದನ್ನು ತಪ್ಪಿಸುವಂತಿಲ್ಲ

ಆತಂಕದ ನಡುವೆಯೂ ಗಂಗಾ ಸ್ನಾನ ನಿರಂತರ
ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡರು. ' ಅತಿದೊಡ್ಡ ಸಂವಿಧಾನ ಹೊಂದಿರುವ ನಮ್ಮ ದೇಶಕ್ಕೆ ಒಳ್ಳೆಯದಾಗಲಿ. ಸಂವಿಧಾನದ ಬೇರುಗಳು ಇನ್ನಷ್ಟು ಬಲಗೊಳ್ಳಲಿ' ಎಂಬ ಆಶಯದಿಂದ ಗಂಗೆಯಲ್ಲಿ ಮುಳುಗು ಹಾಕಿದೆ ಎಂದು ಮೀರಾ ಹೇಳಿದ್ದಾರೆ.

ಆತಂಕದ ನಡುವೆಯೂ ಗಂಗಾ ಸ್ನಾನ ನಿರಂತರ
ಸಂಗಮದ ಬಳಿ ತಾತ್ಕಾಲಿಕ ಶೆಡ್, ತಾತ್ಕಾಲಿಕ ರಸ್ತೆಗಳ ನಡುವೆ ತಾತ್ಕಾಲಿಕ ಸೇತುವೆಗಳಲ್ಲೇ ಜನರ ಸಂಚಾರ

ಆತಂಕದ ನಡುವೆಯೂ ಗಂಗಾ ಸ್ನಾನ ನಿರಂತರ
ಕುಂಭಮೇಳ ಮುಗಿಸಿಕೊಂಡು ಮನೆಗೆ ಹೊರಟ ಭಕ್ತರು ಅಲಹಾಬಾದ್ ರೈಲು ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿರುವುದು

ಆತಂಕದ ನಡುವೆಯೂ ಗಂಗಾ ಸ್ನಾನ ನಿರಂತರ
ಮಾಘ ಹುಣ್ಣಿಮೆ ಹತ್ತಿರವಾಗುತ್ತಿರುವಂತೆ ಪುಣ್ಯ ಸ್ನಾನ ಕೈಗೊಳ್ಳುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರಗಳ ಕೃಪೆ : ಪಿಟಿಐ












Click it and Unblock the Notifications