ಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಬಿಗಿದಪ್ಪಿದ ಬಿಜೆಪಿ ಶಾಸಕ

ಇದರಿಂದ, ಆಡಳಿತದ ಕೊನೆಯ ದಿನಗಳನ್ನು ಇದೆಲ್ಲ ಮಾಮೂಲು. ಹಾಗಾಗಿ ಆಡಳಿತಾರೂಢ ಬಿಜೆಪಿಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಿಲ್ಲವಾದರೂ ಅದರ ಪ್ರತಿಷ್ಠೆಗೆ ಸ್ವಲ್ಪ ಪೆಟ್ಟು ಬಿದ್ದಿದೆ ಎನ್ನಲಾಗಿದೆ.
'ಸ್ಪೀಕರ್ ಕೆಜಿ ಬೋಪಯ್ಯ ಅವರು ಊರಲ್ಲಿಲ್ಲ. ಹಾಗಾಗಿ ಅವರು ಊರಿಗೆ ಬರುತ್ತಿದ್ದಂತೆ ನನ್ನ ರಾಜೀನಾಮೆ ಪತ್ರವನ್ನು ಅವರ ಕೈಗೆ ಹಸ್ತಾಂತರಿಸುವುದಾಗಿ' ಗೌಡರು ಸ್ಪಷ್ಟಪಡಿಸಿದರು.
'ಅಲ್ಲಿಯವರೆಗೂ ಜೆಡಿಎಸ್ ಸಭೆಯಗಳಲ್ಲಿ ಕಾಯಾ-ವಾಚಾ-ಮನಸಾ ಭಾಗವಹಿಸುವುದಾಗಿಯೂ' ಅವರು ಹೇಳಿದರು. ರಾಜ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮತ್ತೆ ಜೆಡಿಎಸ್ ಸರಕಾರವನ್ನು ಆಡಳಿತಕ್ಕೆ ತರುವುದಾಗಿ ಅವರು ಇದೇ ಸಂದರ್ಭದಲ್ಲಿ ಕಂಕಣತೊಟ್ಟರು.
ಒಂದು ವರ್ಷದ ಹಿಂದೆಯೇ ಬಿಜೆಪಿ ಬಿಡಲು ನಿರ್ಧರಿಸಿದೆ. ಮೊನ್ನೆ ಬಜೆಟ್ ಅಧಿವೇಶನ ಮುಗಿಯೋಗಂಟ ಸುಮ್ನಿರು ಅಂತ ಬಿಜೆಪಿ ಮಂದಿ ಹೇಳುತ್ತಿದ್ದರು. ಹಾಗಾಗಿ ಜೆಡಿಎಸ್ ಕಡೆ ಬರಲಿಲ್ಲ. ಆದರೆ ಈಗ ಎಲ್ಲ ಮುಗೀತು. ಅದಕ್ಕೆ ಜೆಡಿಎಸ್ ಜತೆ ಗುರುತಿಸಿಕೊಳ್ಳುತ್ತಿದ್ದೇನೆ ಎಂದು ಮೈಸೂರು ಚಾಮರಾಜ ಕ್ಷೇತ್ರವನ್ನು ಪ್ರತಿನಿಧಿಸುವ ಗೌಡರು ತಿಳಿಸಿದರು.
ನಾನು ಜೆಡಿಎಸ್ ಪಕ್ಷದಿಂದ ಬಂದವನು. ಜೆಡಿಎಸ್ ನನಗೆ ಮಾತೃಪಕ್ಷ. ಹಾಗಾಗಿ ಮಾತೆಯ ಮಡಿಲಿಗೆ ಮರಳಿದ್ದೇನೆ ಎಂದು ಎದುರಿಗಿದ್ದ ಚಾಮರಾಜ ಪೇಟೆ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಬಿಗಿದಪ್ಪಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಂಕರಲಿಂಗೇಗೌಡ ಅವರು ತಾವು ಎಂದೆಂದಿಗೂ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡವರು ಎಂದರು.
ಅಖಂಡವಾಗಿ ನನ್ನ ಕ್ಷೇತ್ರದ ಜನತೆಯ ಸೇವೆ ಮಾಡುತ್ತಾ ಬಂದಿದ್ದೇನೆ ಎಂದು ಸೇವಾ ವಿವರ ನೀಡಿದ ಶಂಕರಲಿಂಗೇ ಗೌಡರು ಇನ್ನೆಂದಿಗೂ ಬಿಜೆಪಿಗೆ ಮರಳುವುದಿಲ್ಲ ಎಂದೂ ಪ್ರತಿಜ್ಞೆ ಮಾಡಿದರು.












Click it and Unblock the Notifications