ಶೀಘ್ರದಲ್ಲೇ ಜೆಡಿಎಸ್ ತೆಕ್ಕೆಗೆ ಸದಾನಂದ ಗೌಡ

ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸು ಕಾರ್ಯತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಅರಮನೆ ಮೈದಾನದಲ್ಲಿ ಮಂತ್ರಾಲೋಚನೆ ಸಭೆಗೆ ಸರಿಯಾದ ಆಹ್ವಾನ ಸಿಗದ ಕಾರಣ, ಮುನಿಸಿಕೊಂಡ ಸದಾನಂದ ಗೌಡರು ದಕ್ಷಿಣ ಕನ್ನಡದತ್ತ ಪ್ರವಾಸ ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಲೇಬೇಕು.
ಸದಾನಂದ ಗೌಡ ಅವರಂಥ ಉತ್ತಮ ನಾಯಕರನ್ನು ಕಳೆದುಕೊಂಡ ಮೇಲೆ ಬಿಜೆಪಿ ಇನ್ನಷ್ಟು ಬಡವಾಗಲಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರಲಿದೆ. ಇದು ಕರ್ನಾಟಕ ಜನತಾ ಪಕ್ಷಕ್ಕೆ ವರದಾನವಾಗಲಿದೆ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ನಾಯಕರ ವರ್ತನೆಯಿಂದ ಸದಾನಂದ ಗೌಡರು ತುಂಬಾ ಬೇಸರಗೊಂಡಿದ್ದಾರೆ. ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿರುವ ಗೌಡರು ಬಿಜೆಪಿ ತೊರೆಯುವುದು ಬಹುತೇಕ ಖಚಿತ.ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ಸದಾನಂದ ಗೌಡರು ಪಕ್ಷ ತೊರೆಯುವ ಸ್ಥಿತಿಗೆ ಬಂದಿರುವುದು ಬಿಜೆಪಿಯ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿದೆ ಎಂದರು.
ಸದಾನಂದ ಗೌಡರು ಬಿಜೆಪಿ ತೊರೆದರೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ. ಈಗಾಗಲೇ ಬಿಜೆಪಿ ತನ್ನ ಹಿಡಿತವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಿದೆ. ಕೆಜೆಪಿ ಈಗಾಗಲೇ ದಕ್ಷಿಣ ಕನ್ನಡ ಸಮಿತಿಯನ್ನು ಆರಂಭಿಸಿದೆ. ಕೆಜೆಪಿ ಅಲೆ ಎಲ್ಲೆಲ್ಲೂ ಆರಂಭವಾಗಿದೆ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲಿ ಕೆಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಪಕ್ಷದ ಮುಖಂಡರು ಈಗಾಗಲೇ ಪ್ರವಾಸ ಕೈಗೊಂಡಿದ್ದು ಚುನಾವಣೆಯಲ್ಲಿ ಹೊಸ ಪಕ್ಷವಾದರೂ ಶೇ 40 ರಷ್ಟು ಅಭ್ಯರ್ಥಿಗಳು ಗೆಲ್ಲುವ ಅಭ್ಯರ್ಥಿಗಳನ್ನು ಹೊಂದಿದ್ದೇವೆ. ಮಿಕ್ಕಂತೆ ಪ್ರಬಲ ಸ್ಪರ್ಧೆ ಖಚಿತ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದರು.
ಜೆಡಿಎಸ್ ಪ್ರತಿಕ್ರಿಯೆ: ಈ ನಡುವೆ ಪಕ್ಷಾಂತರಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸು ಕಾರ್ಯತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಅರಮನೆ ಮೈದಾನದಲ್ಲಿ ಮಂತ್ರಾಲೋಚನೆ ಸಭೆಗೆ ಸರಿಯಾದ ಆಹ್ವಾನ ಸಿಗದ ಕಾರಣ, ಮುನಿಸಿಕೊಂಡ ಸದಾನಂದ ಗೌಡರು ದಕ್ಷಿಣ ಕನ್ನಡದತ್ತ ಪ್ರವಾಸ ಕೈಗೊಂಡಿರುವುದನ್ನು ಇಲ್ಲಿ ಸ್ಮರಿಸಲೇಬೇಕು.












Click it and Unblock the Notifications