ರಾಜ್ಯದ ಮೂರು ಕಡೆ ಲೋಕಾಯುಕ್ತ ದಾಳಿ

new Lokayukta,
ಬೆಂಗಳೂರು, ಫೆ.16: ನೂತನ ಲೋಕಾಯುಕ್ತರಾಗಿ ಭಾಸ್ಕರ್ ರಾವ್ ಅಧಿಕಾರ ವಹಿಸಿಕೊಂಡ ಎರಡು ದಿನದಲ್ಲೇ ಭ್ರಷ್ಟರಿಗೆ ಚಳಿ ಬಿಡಿಸಿದ್ದಾರೆ. ಶನಿವಾರ ಬೆಳಗ್ಗೆ ಬಾಗಲಕೋಟೆ, ಗದಗ, ಮಂಗಳೂರಿನಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಮೂವರು ಆಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಸಿಬ್ಬಂದಿಯ ಮೆನೆಯ ಬಾಗಿಲನ್ನೇ ತಟ್ಟಿದ್ದರು
ಬಾಲಗಕೋಟೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವುದು ತಮ್ಮ ಸಂಸ್ಥೆಯ ಅಧಿಕಾರಿಯ ನಿವಾಸದ ಮೇಲೆ. ಶಿವಾನಂದ ಆಳಕವಾಡಿ ಎಂಬುವವರು ಬಾಗಲಕೋಟೆ ಜಿಲ್ಲಾ ಶಸಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ವರ್ಷದ ಹಿಂದೆ ಜಿಲ್ಲಾ ಲೋಕಾಯುಕ್ತಕ್ಕೆ ವರ್ಗಾವಣೆ ಗೊಂಡಿದ್ದರು.

ಶನಿವಾರ ಬೆಳಗ್ಗೆ ಶಿವಾನಂದ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು ಅವರ, ಆಪ್ತ ಸಂಬಂಧಿಕರ ಮನೆಯಲ್ಲೂ ದಾಖಲೆಗಳನ್ನು ಹುಡುಕಿದ್ದಾರೆ. ಜಿಲ್ಲಾ ಲೋಕಾಯುಕ್ತ ಎಸ್ ಪಿ ಜಗಮಯ್ಯ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ದೊರೆತ ಜಮೀನು ಕಾಗದ ಪತಗ್ರಗಳು, ಬ್ಯಾಂಕ್ ಖಾತೆ ವಿವರಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ.

ಪಿಡಿಓ ಮನೆ ಮೇಲೆ ದಾಳಿ
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗ್ರಾಮಪಂಚಾಯಿತಿ ಪಿಡಿಓ ಬಸಯ್ಯ ಇಡಗಿಮಠ ಅವರ ಗದಗ ಮತ್ತು ಕಳಶಪುರ ನಿವಾಸಗಳ ಮೇಲೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ, ಇಡಗಿಮಠ ಅವರ ವಿರುದ್ಧ ಅಕ್ರಮ ಆಸ್ತಿ ದೂರು ದಾಖಲಾಗಿತ್ತು. ದೂರನ್ನು ಆಧರಿಸಿ ಇಂದು ಮುಂಜಾನೆ ಬಸಯ್ಯ ಮನೆ ಮೇಲೆ ದಾಳಿ ನಡೆದಿದೆ. ನಿವೇಶನಗಳ ದಾಖಲೆ ಪತ್ರಗಳು, ಬ್ಯಾಂಕ್ ಖಾತೆಗಳ ವಿವಿರಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಮಂಗಳೂರಿನಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿ ಮನೆಯ ಮೇಲೆ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಈ ಮೂವರು ಅಧಿಕಾರಿಗಳ ಅಕ್ರಮ ಆಸ್ತಿ ಎಷ್ಟಿತ್ತು? ಅವರ ಮನೆಯಲ್ಲಿ ಸಿಕ್ಕ ವಸ್ತುಗಳ ಮೌಲ್ಯಗಳೆಷ್ಟು? ಎಂಬ ವಿವರಗಳು ಇನ್ನೂ ದೊರೆಯಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+