ಪ್ರೀತಿ ಪ್ರೇಮ ಆಂಟಿಯನ್ನು ಎಳೆದೊಯ್ದು ಬಿಟ್ತು

Nagavara housewife betrays husband
ಬೆಂಗಳೂರು, ಫೆ.14: 'ಯಾವನ್ ಕಂಡು ಹಿಡಿದ್ನೋ ಈ ಪ್ರೀತಿ ಪ್ರೇಮನೆಲ್ಲ. ಕಟ್ಕೊಂಡ ಹೆಂಡ್ತಿನೇ ಕಿತ್ಕೊಂಡ್ ಹೋಯ್ತಲ್ಲ' ಎಂದು ಪತಿ ಸುಂದರ್ ತನ್ನ ಪತ್ನಿಗಾಗಿ ಕಣ್ಣೀರಿಡುತ್ತಾ ಗೋಳಾಡುತ್ತಿದ್ದಾನೆ. ಪ್ರೇಮಿಗಳ ದಿನದಂದೇ ನಾಗವಾರದ ಸುಲ್ತಾನ್ ಪಾಳ್ಯದ ನಿವಾಸಿ ಮಂಜುಳಾ ತನ್ನ ಗಂಡನನ್ನು ತೊರೆದು ಪ್ರೇಮಿಯೊಂದಿಗೆ ಎಸ್ಕೇಪ್ ಆಗಿದ್ದಾಳೆ. ಯುವತಿಯೊಬ್ಬಳು ವಿವಾಹವಾದ ಹತ್ತೇ ದಿನಕ್ಕೆ ಕಟ್ಟಿಕೊಂಡವನಿಗೆ ಕೈ ಕೊಟ್ಟು ಪ್ರೇಮಿಯೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. .

ಹಿರಿಯರು ಇಟ್ಟ ಮಹೂರ್ತದಲ್ಲೇ ನಂದಗುಡಿ ಹೋಬಳಿಯ ಇಟ್ಟಸಂದ್ರ ಗ್ರಾಮದ ಸುಂದರ್ ಹಾಗೂ ಮಂಜುಳಾ ಅವರಿಗೆ ಕಳೆದ ಫೆ.3ರಂದು ಮಂಜುಳಾಳನ್ನು ಕೊಟ್ಟು ಅದ್ದೂರಿಯಾಗಿ ವಿವಾಹ ನಡೆದಿತ್ತು. ಆದರೆ, ಪ್ರೇಮಿಗಳ ದಿನ ಬರುತ್ತಿದ್ದಂತೆ ಮಂಜುಳಾ ಮನಸ್ಸು ಗಂಡನನ್ನು ಬಿಟ್ಟು ಪ್ರಿಯಕರನತ್ತ ವಾಲಿಬಿಟ್ಟಿತ್ತು.

ಮದುವೆಯಾದ ದಿನದಿಂದ ತವರು ಮನೆ, ಗಂಡನ ಮನೆ ಎಂದು ಓಡಾಡಿಕೊಂಡಿದ್ದ ಮಂಜುಳಾ ತನ್ನ ಮೊದಲ ರಾತ್ರಿಯಲ್ಲಿ ಗಂಡನಿಗೆ ಕೈ ಕೊಟ್ಟು ಪರಾರಿಯಾಗಲು ಹುನ್ನಾರ ನಡೆಸಿ ಕಳೆದ ರಾತ್ರಿ 11 ಗಂಟೆ ಸಮಯದಲ್ಲಿ ತನಗೆ ತಿನ್ನಲು ಪಾನಿಪುರಿ ಬೇಕೆಂದು ಪಟ್ಟು ಹಿಡಿದಿದ್ದಾಳೆ.

ಕೈ ಹಿಡಿದವಳ ಆಸೆ ಪೂರೈಸಲು ಮುಂದಾದ ವೆಂಕಟ್ 2 ಕಿ.ಮೀ ದೂರದಲ್ಲಿರುವ ನಂದಗುಡಿಗೆ ಪತ್ನಿಯನ್ನು ಕರೆ ತಂದು ಪಾನಿಪುರಿ ತಿನ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆಕೆ ನನಗೆ ಪ್ರಿಯತಮನಿದ್ದಾನೆ. ನಿನ್ನೊಂದಿಗೆ ಸಂಸಾರ ಮಾಡಲು ಸಾಧ್ಯವಿಲ್ಲ. ನನ್ನನ್ನು ಬಿಟ್ಟು ಬಿಡು ಎಂದು ಕೇಳಿಕೊಂಡಿದ್ದಾಳೆ.

ಆದರೆ ತನ್ನ ಪತ್ನಿಯ ಮಾತನ್ನು ನಂಬದ ಅಮಾಯಕ ವೆಂಕಟ್ ಪತ್ನಿಯನ್ನು ಬಲವಂತವಾಗಿ ಮನೆಗೆ ಕರೆ ತಂದು ಅದೇ ಚಿಂತೆಯಲ್ಲಿ ಜೋರು ನಿದ್ದೆಗೆ ಜಾರಿದ್ದಾನೆ. ಪ್ರಿಯತಮನಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡ ಮಂಜುಳಾ ಬೆಳ್ಳಂಬೆಳಗ್ಗೆ ಬೈಕ್‌ನಲ್ಲಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಲವ್ ಮ್ಯಾಟರ್ ಗೊತ್ತಿರಲಿಲ್ಲ: ಮಂಜುಳಾ ಮನೆಯವರು ತಮ್ಮ ಮಗಳು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದು ತಿಳಿದಿದ್ದರೂ ಸತ್ಯ ಮರೆ ಮಾಚಿ ತಮ್ಮ ಪುತ್ರನ ಕೊರಳಿಗೆ ಆಕೆಯನ್ನು ಕಟ್ಟಿದ್ದಾರೆ ಎಂದು ಸುಂದರ್ ಕುಟುಂಬದವರು ಈಗ ಬೊಬ್ಬೆ ಹಾಕುತ್ತಿದ್ದಾರೆ.

ವಿವಾಹವಾದ ನಂತರ ಮಂಜುಳಾ ಅವರ ಸಹೋದರ ತನ್ನ ತಂಗಿ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ಆಕೆಯ ಕೈಗೆ ಮೊಬೈಲ್ ಕೊಡಬೇಡಿ ಎಂದು ತಿಳಿಸಿ ಹೋಗಿದ್ದ. ಅದರ ಸೂಕ್ಷ್ಮ ನಮಗೆ ಆಗ ಅರ್ಥವಾಗಲಿಲ್ಲ. ಇದೀಗ ಅವರ ಬಣ್ಣ ಬಯಲಾಗಿದೆ ಎಂದು ಸುಂದರ್ ಸಂಬಂಧಿ ನಾಗರಾಜು ಹೇಳಿದ್ದಾರೆ.

ಸುಂದರ್ ಅವರಿಗೆ ಹೇಳಿಕೊಳ್ಳುವಂಥ ಕೆಲಸ ಇಲ್ಲ. ಗುತ್ತಿಗೆ ಆಧಾರದ ಮೇಲೆ ಕೂಲಿ ನಾಲಿ ಮಾಡಿಕೊಂಡಿದ್ದ. ಆದರೆ, ಸಭ್ಯಸ್ಥ. ವಿವಾಹವಾದ ನಂತರ ತನ್ನ ಹೊಸ ಬದುಕಿನ ಬಗ್ಗೆ ನೂರಾರು ಕನಸು ಕಂಡಿದ್ದ. ಇದೀಗ ಆತನ ಕನಸು ನುಚ್ಚು ನೂರಾಗಿದ್ದು ಮುಂದೇನು ಮಾಡಬೇಕು ಎಂಬುದು ತಿಳಿಯದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.

ಅಮಾಯಕನ ಬಾಳಿನಲ್ಲಿ ಚೆಲ್ಲಾಟವಾಡಿ ಕೈ ಕೊಟ್ಟು ಪರಾರಿಯಾಗಿರುವ ಮಂಜುಳಾಗೆ ತಕ್ಕ ಶಿಕ್ಷೆಯಾಗಲೇಬೇಕು. ಹೀಗಾಗಿ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಆಕೆಯನ್ನು ಎಲ್ಲಿದ್ದರೂ ಕರೆ ತಂದು ಸೂಕ್ತ ಶಿಕ್ಷೆ ನೀಡಬೇಕು ಎಂದು ಸುಂದರ್ ಕುಟುಂಬ ವರ್ಗ ಆಗ್ರಹಿಸಿದೆ. ಪ್ರೇಮಿಗಳ ದಿನ ಪ್ರಿಯಕರನೊಂದಿಗೆ ಐಸ್ ಕ್ರೀಂ ತಿನ್ನುತ್ತಾ ಮಂಜುಳಾ ಕಥೆಯ ವಿಲನ್ ಆಗಿ ಎಲ್ಲೋ ಅಡ್ಡಾಡಿಕೊಂಡಿದ್ದು, ಪೊಲೀಸರ ಬಲೆಗೆ ಇನ್ನೂ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+