ಜೈಲಿಂದ ಪಾರಾಗಲು 18 ಅಡಿ ಸುರಂಗ ಕೊರೆದರು

ಈ ಜೈಲು ಕೋಣೆಯಲ್ಲಿ 14 ಮಂದಿಯನ್ನು ಕೂಡಿಹಾಕಲಾಗಿದ್ದು, ಇದೇ ಕೋಣೆಯಿಂದ ಸುರಂಗ ಮಾರ್ಗ ಸಾಗಿದೆ. ಆದರೆ ಸುರಂಗವು ಜೈಲು ಅಧಿಕಾರಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದು, ಉಗ್ರರು ಪರಾರಿಯಾಗುವುದು ಸ್ವಲ್ಪದರಲ್ಲಿ ಬಚಾವಾಗಿದೆ.
ಕಳೆದ ಐದಾರು ತಿಂಗಳಿಂದ ಈ ಸುರಂಗ ಮಾರ್ಗವನ್ನು ಕೊರೆಯುತ್ತಾ ಬಂದಿರಬಹುದು. ಇದು ಪೂರ್ತಿಯಾಗುತ್ತಿದ್ದಂತೆ ಬಂಧಿತರು ಇಲ್ಲಿಂದ ಪರಾರಿಯಾಗಲು ಸ್ಕೆಚ್ ಹಾಕಿದ್ದರು ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಪೈಕಿ ಕೆಲವರು ಸಿವಿಲ್ ಇಂಜಿನಿಯರುಗಳೂ ಇದ್ದಾರೆ. ಅವರು ಆಹಾರ ಪೂರೈಕೆಗೆ ಬಳಸುತ್ತಿದ್ದ ಪಾತ್ರಗಳನ್ನು ಬಳಸಿ, 18 ಅಡಿ ಉದ್ದದ ಈ ಸುರಂಗ ಮಾರ್ಗವನ್ನು ಕೊರೆದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಧರ್ಮಬೀರು ಸಫ್ದರನ ನಗಾರಿ: ಅಂದಹಾಗೆ, 2009ರಲ್ಲಿ ಅಹಮದಾಬಾದಿನಲ್ಲಿ ಸಂಭವಿಸಿದ್ದ ಭೀಕರ ಸ್ಫೋಟದ ರೂವಾರಿ ಎಂದು ಪರಿಗಣಿಸಲ್ಪಟ್ಟಿರುವ ಸಫ್ದರ್ ನಗೋರಿ ಭಯೋತ್ಫಾದನೆಗೆ ಗುಡ್ ಬೈ ಹೇಳಿ, ತಾನು ಸಾಚಾ ಎಂದು ನಿರೂಪಿಸಲು ಈಗ್ಗೆ 2 ವರ್ಷಗಳ ಹಿಂದೆ ದೂರ ಶಿಕ್ಷಣದ ಮೂಲಕ ಧಾರ್ಮಿಕ ವಿಷಯದಲ್ಲಿ ಮೊದಲ rank ಪಡೆದು ಪದವಿ ಪೂರೈಸಿದ್ದ. ಸ್ಫೋಟದ ವೇಳೆ 41 ವರ್ಷದ ಸಫ್ದರ್ ನಗೋರಿ ಸಿಮಿ ಸಂಘಟನೆಯ ನೇತೃತ್ವದ ವಹಿಸಿದ್ದ.












Click it and Unblock the Notifications