ರೂಪಾಲಿ ಕೊಂದವ ಇಂಜಿನಿಯರಿಂಗ್ ವಿದ್ಯಾರ್ಥಿ

Axis Bank employee Roopali Mishra Murder Case
ಬೆಂಗಳೂರು,ಫೆ.11: ಕಾಟನ್ ಪೇಟೆ ಲಾಡ್ಜಿಗೆ ಯುವತಿಯನ್ನು ಕರೆ ತಂದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕ್ಸಿಸ್ ಬ್ಯಾಂಕ್ ಉದ್ಯೋಗಿ ರುಪಾಲಿ ಮಿಶ್ರಾ ಕೊಲೆ ಮಾಡಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಆತನ ಹೆಸರು ಸಂತೋಷ್ ಕುಮಾರ್ ಅಲ್ಲ ಸತ್ಯ ಪ್ರಕಾಶ್ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೋಮವಾರ(ಫೆ.11) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯುಜಿ ರೀಗಲ್ ಡ್ಜ್‌ನಲ್ಲಿ ಆಕ್ಸಿಸ್ ಬ್ಯಾಂಕಿನ ಉದ್ಯೋಗಿ ರುಪಾಲಿ ಮಿಶ್ರಾ ಕೊಲೆ ಮಾಡಿ ಪರಾರಿಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪಶ್ಚಿಮ ವಿಭಾಗದ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಮೂಲತಃ ಬಿಹಾರದವನಾದ 20 ವರ್ಷ ವಯಸ್ಸಿನ ಸತ್ಯಪ್ರಕಾಶ್ ತಮಿಳುನಾಡಿನ ಚಿದಂಬರಂನಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಹೇಳಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕಾನ್ಪುರದ ಯುವತಿ ರೂಪಾಲಿ ಮಿಶ್ರ ಎಂಬಾಕೆಯನ್ನು ನಗರಕ್ಕೆ ಕರೆತಂದು ಕೊಲೆ ಮಾಡಿ ಪರಾರಿಯಾಗಿದ್ದ. ರೂಪಾಲಿ ಆಕ್ಸಿಸ್ ಬ್ಯಾಂಕಿನಲ್ಲಿ ಕೆಲಸ ತೊರೆದು ಬೇರೆ ಉದ್ಯೋಗ ಅರಸುತ್ತಿದ್ದರು. ಇದನ್ನು ಸತ್ಯ ಪ್ರಕಾಶ್ ಲಾಭವಾಗಿ ಪರಿವರ್ತಿಸಿಕೊಂಡ

ಕೆಲಸ ಕೊಡಿಸುವ ಆಮಿಷವೊಡ್ಡಿ ರೂಪಾಲಿಯಿಂದ ಎರಡು ಲಕ್ಷ ಪಡೆದಿದ್ದ ಪ್ರಕಾಶ್ ಕೆಲಸ ಕೊಡಿಸಿರಲಿಲ್ಲ. ಹಣವನ್ನು ವಾಪಸ್ ನೀಡಿರಲಿಲ್ಲ. ಹಣ ನೀಡದಿದ್ದರೆ ದೂರು ದಾಖಲಿಸುವುದಾಗಿ ರೂಪಾಲಿ ಬೆದರಿಸುತ್ತಿದ್ದರಿಂದ ಆಕೆಯನ್ನು ಕೊಲೆ ಮಾಡಿದ್ದಾನೆ. ಎರಡು ಮೂರು ಬಾರಿ ಲಾಡ್ಜ್‌ಗಳಿಗೆ ಕರೆತಂದು ಮನವೊಲಿಸಿ ಕಳುಹಿಸಿದ್ದ. ಈತ ಕಳೆದ ವಾರ ಕಾಟನ್‌ಪೇಟೆಯ ಲಾಡ್ಜ್‌ಗೆ ಕರೆತಂದು ಸಂತೋಷ್‌ಕುಮಾರ್ ಹೆಸರಿನಲ್ಲಿ ರೂಮ್ ಬಾಡಿಗೆ ಪಡೆದು ಈ ಕೃತ್ಯ ವೆಸಗಿದ್ದಾನೆ.

ನಂತರ ಅದೇ ಲಾಡ್ಜ್ ನಲ್ಲೇ ಬೇರೊಂದು ರೂಮ್ ಬಾಡಿಗೆ ಪಡೆದು ಕೃತ್ಯಕ್ಕೆ ಬಳಸಿದ್ದ ಚಾಕು, ರಕ್ತಸಿಕ್ತವಾಗಿದ್ದ ಬಟ್ಟೆ ಬಿಸಾಡಿ ಪರಾರಿಯಾಗಿದ್ದ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ, ಡಿಸಿಪಿ ಕೃಷ್ಣಭಟ್ ಉಪಸ್ಥಿತರಿದ್ದರು.

ಉತ್ತರ ಪ್ರದೇಶ ಮೂಲದ ಯುವತಿ, ಆಕ್ಸಿಸ್ ಬ್ಯಾಂಕ್ ಉದ್ಯೋಗಿ ರುಪಾಲಿ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿತ್ತು. ರುಪಾಲಿ ಕೊಂದಿದ್ದು ಆಕೆ ಗೆಳೆಯ ಮಾತ್ರವಲ್ಲ. ಮತ್ತೊಬ್ಬ ಯುವತಿ ಕೈವಾಡ ಇದೆ ಎನ್ನಲಾಗಿತ್ತು. ಬಹುಶಃ ಆ ಯುವತಿ ಮೂಲಕ ಸತ್ಯ ಪ್ರಕಾಶ್ ಗೆ ರುಪಾಲಿ ಪರಿಚಯವಾಗಿರುವ ಸಾಧ್ಯತೆಯಿದೆ. ಸತ್ಯ ಪ್ರಕಾಶ್ ವಿಚಾರಣೆ ನಂತರ ಇನ್ನಷ್ಟು ಸತ್ಯ ಹೊರಬೀಳಲಿದೆ. ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಡಿ.ಸಿ. ರಾಜಪ್ಪ ಹೇಳಿದ್ದಾರೆ.

ಯುಜಿ ರೀಗಲ್ ವಸತಿಗೃಹದ ಕೊಠಡಿ ಸಂಖ್ಯೆ 265 ರಲ್ಲಿ ಹೆಣವಾಗಿ ಮಲಗಿದ್ದ ರೂಪಾಲಿ ದೇಹದ ಮೇಲೆ ಸುಮಾರು 10 ಕಡೆ ಇರಿತ, ಕೊಲೆಗೂ ಮುನ್ನ ಬಲವಂತವಾಗಿ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿತ್ತು. ಮೃತದೇಹವನ್ನು ಲಾಡ್ಜಿನಿಂದ ಹೊರಗೆ ಸಾಗಿಸಲಾಗದಷ್ಟು ಕೊಳತೆ ಹೋಗಿದ್ದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರೀಕ್ಷೆ ನಡೆಸಬೇಕಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+