ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಪತಿರಾಜ ಕಣ್ಣಿನ ಆಸ್ಪತ್ರೆ ಸ್ಥಾಪನೆಗೆ 2 ಕೋಟಿ

By Srinath
|
Google Oneindia Kannada News

Karnataka Budget 2013 CM Jagadish Shettar budget speech
ಬೆಂಗಳೂರು, ಫೆ.8: ವಿತ್ತ ಸಚಿವರೂ ಆದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಮೂರೂವರೆ ಗಂಟೆ ಕಾಲದಲ್ಲಿ ಒಟ್ಟು ಬಜೆಟ್ ಗಾತ್ರ 1 ಲಕ್ಷ 17 ಸಾವಿರ ಕೋಟಿ ರೂ. (ಹಿಂದಿನ ಬಜೆಟ್ ಗಾತ್ರ 1 ಲಕ್ಷ 02 ಸಾವಿರ ಕೋಟಿ ರೂ) ಬಜೆಟ್ ಮಂಡಿಸಿದ್ದಾರೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ 20 ಕೋಟಿ
ಮಹಾಪತಿರಾಜ ಕಣ್ಣಿನ ಆಸ್ಪತ್ರೆ ಸ್ಥಾಪನೆಗೆ 2 ಕೋಟಿ
ಹುಬ್ಬಳ್ಳಿಯಲ್ಲಿ ಎಂಎಂ ಜೋಷಿ ಆಸ್ಪತ್ರೆ ನಿರ್ಮಾಣ
ಗುಲ್ಬರ್ಗದಲ್ಲಿ 20 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ
ಬೆಳಗಾವಿಯಲ್ಲಿ ಪೊಲೀಸ್ ಕಮೀಷನರ್ ಕಚೇರಿ ಸ್ಥಾಪನೆ
ಬೆಂಗಳೂರು ಶಂಕರ ಕ್ಯಾನ್ಸರ್ ಆಸ್ಪತ್ರೆಗೆ 10 ಕೋಟಿ
ಚಾಮರಾಜನಗರ ಜಿಲ್ಲಾಭಿವೃದ್ಧಿಗೆ 100 ಕೋಟಿ
ನಂಜುಂಡಪ್ಪ ವರದಿ ಅನುಷ್ಠಾನಕ್ಕೆ 2925 ಕೋಟಿ ಮೀಸಲು
ಸರಕಾರಿ ಪ್ರೌಢಶಾಲೆ, ಪಿಯುಸಿ ಕಾಲೇಜುಗಳಲ್ಲಿ ಇಂಟರ್ನೆಟ್ ಸೌಲಭ್ಯ
ಜಿಲ್ಲಾ/ತಾಲೂಕು/ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ
ಕೆಂಪೇಗೌಡ ಬಡಾವಣೆ: ಅಭಿವೃದ್ಧಿಗೆ 2,408 ಕೋಟಿ ರೂ.
ಕೆಂಪೇಗೌಡ ಬಡಾವಣೆ: 1,500 ನಿವೇಶನ ಅಭಿವೃದ್ಧಿ
ಬೆಂಗಳೂರು ನಗರಾಭಿವೃದ್ಧಿಗೆ ವಿಶೇಷ ಕೊಡುಗೆ
ಬೆಂಗಳೂರು: 2500 ಕೋಟಿ ರೂ. ವೆಚ್ಚದಲ್ಲಿ ಫೆರಿಫರಲ್ ರಸ್ತೆ ನಿರ್ಮಾಣ
ಬೆಂಗಳೂರು ಅಭಿವೃದ್ಧಿಗೆ ಹೊಸ ಯೋಜನೆಗಳು
ವಿಮಾನ ನಿಲ್ದಾಣ ಸಂಪರ್ಕಕ್ಕೆ ಮೇಲ್ಸೇತುವೆ ನಿರ್ಮಾಣ
ಬೆಂಗಳೂರು 2500 ಕೋಟಿ ರೂ. ಫೆರಿಫರಲ್ ರಸ್ತೆ
ವಿಮಾನ ನಿಲ್ದಾಣ ಸಂಪರ್ಕಕ್ಕಾಗಿ ಮೇಲ್ಸೇತುವೆ ನಿರ್ಮಾಣ

ಚುನಾವಣೆ ಹೊಸ್ತಿಲಲ್ಲಿ ಮಠಗಳಿಗೆ ಬಂಪರ್ ಕೊಡುಗೆ
ರಾಜ್ಯದ ವಿವಿಧ ಮಠಗಳಿಗೆ ಒಟ್ಟು 100 ಕೋಟಿ ರೂ. ಕೊಡುಗೆ

22,310 ಕೋಟಿ ರೂ. ಮೌಲ್ಯದ ಕೃಷಿ ಬಜೆಟ್ ಮಂಡನೆ:
ಅಂಗನವಾಡಿ ಕಾರ್ಯಕರ್ತರ ಗೌರವಧನ 250 ರೂ. ಹೆಚ್ಚಳ
ರೈತರ ಮೂಲ ಮಾಹಿತಿ ಹಾಗೂ ಪಾಸ್ ಬುಕ್ ವಿತರಣೆಗೆ 15 ಕೋಟಿ
ರೈತರ ಸಾಲ ಮನ್ನಾ ಮಾಡಲು 1521 ಕೋಟಿ
ಹಾಪ್‌ಕಾಮ್ಸ್ ಅಭಿವೃದ್ಧಿಗೆ 50 ಕೋಟಿ
ಭತ್ತ ಕಟಾವು ಯಂತ್ರ ಖರೀದಿಗೆ 100 ಕೋಟಿ
ಸೌರ ಶಕ್ತಿ ಪಂಪ್‌ಸೆಟ್‌ಗಳಿಗೆ 50 ಕೋಟಿ
ಕೃಷಿ ಇಲಾಖೆ ಸಿಬ್ಬಂದಿಗೆ ತರಬೇತಿ, ತಾಂತ್ರಿಕ ಸೌಲಭ್ಯ, ಕೃಷಿ ಇಲಾಖೆ ಕಾರ್ಯಕ್ರಮಗಳಿಗೆ 3,091 ಕೋಟಿ ರೂ
ಬೆಳೆ ವಿಮೆಗೆ 100 ಕೋಟಿ ಬಿಡುಗಡೆ
ಕಬ್ಬು ಬೆಳೆಗೆ ಹನಿ ನೀರಾವರಿ
ಸೌರಶಕ್ತಿಗೆ ಹೆಚ್ಚಿನ ಆದ್ಯತೆ
ಸಾವಯವ ಗೊಬ್ಬರದ ತಯಾರಿಗೆ 100 ಕೋಟಿ ರೂ
ವಾಡಿಕೆ ಮಳೆಯಲ್ಲಿ ಶೇ.25 ಮಳೆ ಕೊರತೆ
157 ತಾಲೂಕುಗಳು ಬರಗಾಲ ಪೀಡಿತ
ಆದರೆ ಯಾವುದೇ ಜಿಲ್ಲೆಗೆ ಅನುದಾನದ ಕೊರತೆ ಆಗಿಲ್ಲ
25,000 ರೂ. ವರೆಗಿನ ರೈತರ ಸಾಲ ಮನ್ನಾ ಆಗಿದೆ
ಕರಾವಳಿ ಜಿಲ್ಲೆಗಳಿಗೆ 200 ಕೋಟಿ ರೂ

ಹವಾಮಾನ ಕೇಂದ್ರ ಸ್ಥಾಪನೆಗೆ 30 ಕೋಟಿ ರೂ
ತಿಪಟೂರು ಸೇರಿದಂತೆ 5 ಕಡೆ ತೆಂಗು ಉದ್ಯಾನ ಸ್ಥಾಪನೆಗೆ 25 ಕೋಟಿ ರೂ
ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 1,357 ಕೋಟಿ ರೂ
ಭತ್ತ, ರಾಗಿ ಮೇಲಿನ ತೆರಿಗೆ ಮುಂದುವರಿಕೆ
ಒಟ್ಟಾರೆ ಯೋಜನಾ ವೆಚ್ಚ ಕಳೆದ ವರ್ಷಕ್ಕಿಂತ ಶೇ. 10 ರಷ್ಟು ಹೆಚ್ಚಳ

ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ
ಮುಧೋಳದಲ್ಲಿ ಸಕ್ಕರೆ ತಾಂತ್ರಿಕ ಕಾಲೇಜ್ ಸ್ಥಾಪನೆ
ರೈತರಿಗೆ ಮೊಬೈಲ್ ಮಾಹಿತಿ ನೀಡುವ ಯೋಜನೆಗೆ 10 ಕೋಟಿ ರುಪಾಯಿ
ಶಿರಸಿ ಹಾಗೂ ಚಿಕ್ಕಮಗಳೂರಿನಲ್ಲಿ ಡೈರಿ ಘಟಕ ಸ್ಥಾಪನೆ
ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಸಂಕೀರ್ಣ ನಿರ್ಮಾಣ
ಅಥಣಿಯ ಕಾಗವಾಡದಲ್ಲಿ ಅರಿಶಿಣ ಮತ್ತು ಒಣ ದ್ರಾಕ್ಷಿ ಮಾರುಕಟ್ಟೆ ನಿರ್ಮಾಣ
ದ್ರಾಕ್ಷಿ ಬೆಳೆ ಮಾರಾಟ ವ್ಯವಸ್ಥೆಗೆ ಇ-ಮಾರಾಟ ಕೇಂದ್ರ ಸ್ಥಾಪನೆ

ಹಿಂದಿನ ಸುದ್ದಿ: ಕಾವೇರಿ ವಿವಾದವನ್ನು ಸ್ವಲ್ಪಮಟ್ಟಿಗೆ ನಿವಾರಿಸಿಕೊಳ್ಳಲು ನಿನ್ನೆ ದೆಹಲಿಗೆ ದೌಡಾಯಿಸಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳಗ್ಗೆ ರಾಜಧಾನಿ ಬೆಂಗಳೂರಿಗೆ ಹಾರಿಬಂದಿದ್ದಾರೆ. ಹಾಲಿ ಬಿಜೆಪಿ ಸರಕಾರದ ಅಂತಿಮ ಬಜೆಟ್ ಮಂಡಿಸುವ ಭಾಗ್ಯ ಅವರಿಗೆ ಕೊನೆಗೂ ಒಲಿದಿದ್ದು, ಬಜೆಟ್ ಮಂಡನೆಗೆ ಸಕಲ ಸಜ್ಜಾಗಿದ್ದಾರೆ.

ವಿಧಾನಸೌಧ ಪ್ರವೇಶಿಸಿದ ಸಿಎಂ ಶೆಟ್ಟರ್: ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವ ಸಿಎಂ ಶೆಟ್ಟರ್ ನಾಡಿನ ಜನತೆಗೆ ತಮ್ಮ ಬಜೆಟ್ ಮೂಲಕ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಮಂತ್ರಿಗಳ ಜತೆ ಸಮಾಲೋಚನೆಯಲ್ಲಿ ತೊಡಗಿದ್ದ ಸಿಎಂ ಶೆಟ್ಟರ್ ಅವರು ಇದೀಗ ವಿಧಾನಸೌಧ ಪ್ರವೇಶಿಸಿದ್ದಾರೆ.

ಈ ಹಿಂದೆ ಸದಾನಂದ ಗೌಡರು ಮಂಡಿಸಿದ್ದ 1 ಲಕ್ಷ ಕೋಟಿ ರೂ. ಗಿಂತಲೂ ದೊಡ್ಡ ಗಾತ್ರದ ಬಜೆಟ್ ಸಿಎಂ ಜಗದೀಶ್ ಶೆಟ್ಟರ್ ಅವರಿಂದ ವಿಧಾನಸಭೆಯಲ್ಲಿ ಶುಕ್ರವಾರ (ಫೆ.8) 12.30 ಕ್ಕೆ ಮಂಡನೆಯಾಗಲಿದೆ. ಮೊದಲು ಕೃಷಿ ಬಜೆಟ್ ಮಂಡಿಸಲಿದ್ದಾರೆ.

ಆದರೆ ಈಗಿನ ಬಜೆಟ್ ಜಾರಿಗೆ ಬರುವುದು ಏಪ್ರಿಲ್ 1ರಿಂದ. ಅದನ್ನು ಜಾರಿಗೆ ತರಲು ಹಾಲಿ ಮುಖ್ಯಮಂತ್ರಿ ಶೆಟ್ಟರ್ ಅವರೇ ಅಧಿಕಾರದಲ್ಲಿರುತ್ತಾರಾ ಅಥವಾ ಹೊಸ ಮುಖ್ಯಮಂತ್ರಿಗೆ ತಯಾರಿ ನಡೆಯಲಿದೆಯಾ ಎಂಬುದು ಕುತೂಹಲದ ಸಂಗತಿ.

ಈ ಮಧ್ಯೆ 'ಒನ್ಇಂಡಿಯಾಕನ್ನಡ' ಬಜೆಟ್ ಲೆಕ್ಕಾಚಾರದ ಮಾಹಿತಿಯನ್ನು ಕ್ಷಣಕ್ಷಣವೂ ತಾಜಾ ಆಗಿ ನೀಡಲು ಎಂದಿನಂತೆ ಸಜ್ಜಾಗಿದೆ.

English summary
Karnataka Budget 2013 CM Jagadish Shettar budget speech. Chief minister Jagadish Shettar has tabled the budget for 2013-14 in the legislative assembly at 12.30pm today (Feb 8). This will be the last budget of the BJP government, which completes five years in office on May 30. 1 lakh 17 thousand crore Rs is the budget volume.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X