ನಗರ ಪೊಲೀಸರ ಭರ್ಜರಿ ಬೇಟೆ. 19 ಮಂದಿ ಬಂಧನ

ನಗರದ ಅಶೋಕ ನಗರ, ವಿಲ್ಸ್ ನ್ ಗಾರ್ಡನ್, ಎಸ್.ಜೆ.ಪಾರ್ಕ್ ಮತ್ತು ಸದಾಶಿವ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 19 ಮಂದಿಯನ್ನು ಬಂಧಿಸಿ 500 ರೂ. ಮುಖಬೆಲೆಯ ಸುಮಾರು 5 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮೂಲಕ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 19 ಪ್ರಕರಣಗಳನ್ನು ಭೇದಿಸಿದ್ದು, ತಮಿಳುನಾಡು ಮೂಲದ ಕರನ್(23), ಅಯ್ಯಪ್ಪನ್(34), ರುಕ್ಮಾನ್(35), ಶಫೀಉಲ್ಲಾ(21), ಷಣ್ಮುಗಂ(50), ಜಗದೀಶ್(61), ಲೋಕೇಶ್ವರನ್(24), ಮಣಿಕಂದನ್(28), ಡೆಲ್ಲಿ ರಾಜನ್ (25) ಮುಂತಾದವರನ್ನು ಬಂಧಿಸಿದ್ದಾರೆ.
ಬಂಧಿತರು ಸಾರ್ವಜನಿಕ ಸ್ಥಳಗಳಲ್ಲಿ ಒಂಟಿಯಾಗಿ ಕುಳಿತಿರುವವರು, ಓಡಾವುವವರ ಕಾಲ ಬಳಿ 10 ರೂ. ನೋಟು ಹಾಕಿ ಅವರ ಗಮನ ಬೇರೆಡೆ ಸೆಳೆದು ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದರು. ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.











Click it and Unblock the Notifications